ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ದರ್ಶನ

*ಡಾ. ಗುರುರಾಜ ಪೋಶೆಟ್ಟಿಹಳ್ಳಿ

ಸರಸ್ವತಿ ವಿದ್ಯಾಧಿದೇವತೆ, ಕಾವ್ಯ ಕಲಾಮಾತೃಕೆ. ನಮ್ಮ ಕವಿಗಳು ಕಾವ್ಯಾರಂಭದಲ್ಲಿ ಅವಳನ್ನೆನೆೆಯದೆ ಮುಂದೆ ಹೋಗುವುದಿಲ್ಲ. ಆದರೆ ಈ ಸರಸ್ವತಿ ಸ್ತವನ ಬಹುಮಂದಿ ಕವಿಗಳಲ್ಲಿ ಸಂಪ್ರದಾಯದ ಒಂದು ಅಂಗವಷ್ಟೇ ಆಗಿದೆಯೆಂದು ಹೇಳಬೇಕು.
ಈ ಪ್ರಾರ್ಥನೆಗಳು ಕೇವಲ ಒಂದು ಬೌದ್ಧಿಕ ಕ್ರಿಯೆಯಾಗಿ ಮುಗಿಯುತ್ತದೆ. ಸರಸ್ವತಿ ಕೃಪೆಯಿಲ್ಲದೆ ಕಾವ್ಯ ರಚನೆ ಸಾಧ್ಯವೇ ಇಲ್ಲ ಎನ್ನುವಂತಹ ಅನಿವಾರ‍್ಯತೆಯನ್ನು ನಮ್ಮ ಕವಿಗಳು ಅನುಭವಿಸಿದಂತೆ ತೋರುವುದಿಲ್ಲ.
ತನ್ನ ಆಲೋಚನೆ ಭಾವ ವಿಭಾವನೆಗಳನ್ನು ರೂಪಿಸಿ, ಕ್ರೋಢೀಕರಿಸಿ, ವಾಗಾರ್ಥ ವಿಶೇಷಗಳ ಮೂಲಕ ಅಭಿವ್ಯಕ್ತಗೊಳಿಸಲು ಸರಸ್ವತಿಯನ್ನು ಪ್ರಾರ್ಥಿಸದ ವಾಜ್ಞಯಕಾರನಿಲ್ಲ. ಆಕೆ ಸಮಸ್ತ ವಿಶ್ವ ಭಾಷಾತ್ಮಕಳೂ ಹೌದು.


ಮಾರ್ಗ ಕಾವ್ಯಗಳಲ್ಲಿ ಸರಸ್ವತಿ ದರ್ಶನ
ಕನ್ನಡ ಸಾಹಿತ್ಯದಲ್ಲಿ ಮೊದಲನೆಯ ಉಪಲಬ್ಧ ಗ್ರಂಥವಾದ ಕವಿರಾಜ ಮಾರ್ಗದಿಂದಲೇ ಪ್ರಾರಂಭವನ್ನು ಮಾಡಬೇಕಾಗಿದೆ. ಅದಕ್ಕೆ ಮೊದಲು ಇದ್ದಿರಬಹುದಾದ ವಿಪುಲವಾದ ಗದ್ಯ ಪದ್ಯ ವಾಜ್ಞಯವು ಸರಸ್ವತಿಯ ವಿಷಯದಲ್ಲಿಯೂ ಸರಸ್ವತೀ ನದಿಯಂತೆ ಗುಪ್ತಗಾಮಿನಿಯಾಗಿದೆ.
ಕವಿರಾಜ ಮಾರ್ಗಕಾರನು ತನ್ನ ಸರಸ್ವತಿಯನ್ನು ಪದರಚನೆಯ ವೈದುಷ್ಯ ಅಥವಾ ನಿರ್ಮಲ ಮಧುರ ಮತ್ತು ಸೌಷ್ಠವದಲ್ಲಿ ಕಂಡಿದ್ದಾನೆ. ಮುಖ್ಯವಾಗಿ ಮಾತಿನ ಒಲ್ಮೆಯ ಏರಿಕೆಯ ಕ್ರಮದಿಂದ, ಮಾತೇ ಸರಸ್ವತಿಯ ಪೀಠ, ಮಾತಿನ ಮೇಲ್ಮೆಯಿಂದಲೇ ಅವಳ ಸಾನ್ನಿಧ್ಯದ ಮತ್ತು ಅನುಗ್ರಹದ ಅರಿವನ್ನು ಪಡೆಯಬಹುದು ಎಂಬ ಸೂಚನೆ ಅವನ ಮಾತುಗಳಿಂದ ದೊರೆಯುತ್ತದೆ.
ಪಂಪನ ಆದಿ ಪುರಾಣದಲ್ಲಿ ಬಂದಿರುವ ಸ್ತುತಿ ಸರ್ವ ಸಾಮಾನ್ಯ ಸಂಪ್ರದಾಯಕ್ಕಿ0ತ ಬೇರೆಯದೂ ಅರ್ಥಪೂರ್ಣವೂ ಆಗಿರುತ್ತದೆ. ಪರಮಜಿನೇಂದ್ರ ವಾಣಿಯೇ ಸರಸ್ವತಿ ಎಂದು ಪೆಣ್ಣುರೂಪಮಂ ಧರಿಯಿಸಿ. ಸಾಂಪ್ರದಾಯಿಕವಾಗಿ ಪ್ರೌಢಕಾವ್ಯವನ್ನು ಬರೆದಿರುವ ಪಂಪನು ಇಷ್ಟು ಅಸಾಂಪ್ರದಾಯಿಕವಾಗಿ ಸರಸ್ವತಿಯನ್ನು ಬಣ್ಣಿಸಿರುವುದು ಅಚ್ಚರಿಯ ಸಂಗತಿ. ಜೈನ ದೃಷ್ಟಿಗೆ ಅವನು ಸಾಂಪ್ರದಾಯಿಕ. ವೈದಿಕ ದೃಷ್ಟಿಗೆ ಅಸಾಂಪ್ರದಾಯಿಕ ಎನ್ನಬಹುದು.
ಜಿನ ಎಂದರೆ ಗೆದ್ದವನು; ಹೊರಗಿನ ಅಲ್ಲ, ಒಳಗಿನ ವೈರಿಗಳನ್ನು ಗೆದ್ದವನು. ಅಂತೆ ಅವನು ಸಂಸಾರ ಮಾಯೆಯಿಂದ, ಕರ್ಮದಿಂದ ಮುಕ್ತನು. ಇವನೇ ಅರ್ಹತ್ ತಕ್ಕವನು, ತೀರ್ಥಂಕರ-ಪೂಜ್ಯಗುರು ಎಂದು ಕರೆಸಿಕೊಳ್ಳುತ್ತಾನೆ. ಇಂಥ ಜಿನರಲ್ಲಿ ಅತ್ಯಂತ ಶ್ರೇಷ್ಠನಾದವನೇ ಪರಮಜಿನೇಂದ್ರನು ಅವನ ವಾಣಿಯೇ ಸರಸ್ವತಿ.
ಋಷಿಯಲ್ಲದವನು ಕಾವ್ಯವನ್ನು ಮಾಡಲಾರನು ಎಂಬುದರಲ್ಲಿನ ಆಶಯವು ಇದಕ್ಕೆ ಸಮಾನವಾಗಿವೆ. ಋಷಿಗಿಂತಲೂ ಮೇಲಿನವನು ಜಿನ, ಪರಮಜಿನ. ಅವನು ಮುನಿ ಅವನು ಕಾವ್ಯವನ್ನು ಮಾಡುವುದಿಲ್ಲ. ಅವು ಆಡಿದ್ದೆಲ್ಲ ಕಾವ್ಯವಾಗುತ್ತದೆ. ಅಂತೆ ಪರಮಜಿನೇಂದ್ರ ವಾಣಿಯೇ ಸರಸ್ವತಿ.
ಸರಸ್ವತಿಯೆಂದರೆ ಹೆಣ್ಣು ರೂಪದಲ್ಲಿ ಎಂದ ಪಂಪನ ಋಣವನ್ನೊಪ್ಪದೆಯೆ ಅವನಿಂದ ಸ್ಫೂರ್ತಿಗೊಂಡು ರನ್ನನು ತನ್ನ ಗದಾಯುದ್ಧದಲ್ಲಿ ಸರಸ್ವತಿಯನ್ನು ವಾಕ್ಸುಂದರಿ ಎಂದು ಕರೆದು ಬಣ್ಣಿಸಿದ್ದಾನೆ.


1ನೇ ನಾಗವರ್ಮನ ಕಾದಂಬರಿಯಲ್ಲಿ ಶ್ಲೇಷಬದ್ಧವಾದ, ಹೆಚ್ಚು ಕಡಿಮೆ ಸಾಮಯಿಕವಾದ ಸರಸ್ವತಿಯನ್ನು ಜೀವನದ ಸ್ಥಿತಿಗತಿಗಳ ಸಮಗ್ರ ಚಿತ್ರವೇ ಸಾಹಿತ್ಯ. ಅದೇ ಸರಸ್ವತಿಯೆನ್ನಬಹುದು. ಅವಳಿಂದ ಮನಸ್ಸಿನ ಪ್ರಸಾದ, ಮಾತಿನ ಪ್ರಸಾದ ಇವನ್ನು ಕವಿ ಬಯಸುತ್ತಾನೆ.
11ನೇ ಶತಮಾನದ ದುರ್ಗಾಸಿಂಹನ ಪಂಚತ0ತ್ರದ ಪೀಠಿಕೆಯಲ್ಲಿ, ಅವನಂತೆ ಕಥನ ಕವಿಯಾದ ನಯಸೇನನ ಧರ್ಮಾಮೃತದಲ್ಲಿ ಶ್ಲೇಷಪೂರ್ವಕವಾಗಿ ಸರಸ್ವತಿಯನ್ನು ಬಣ್ಣಿಸಿದ್ದಾನೆ.
ನಿಜವಾಗಿ ಸರಸ್ವತಿಯ ದರ್ಶನವಿದ್ದ ಈ ಕಾಲದ ಕವಿಯೆಂದರೆ ನಾಗಚಂದ್ರನು. ಅವನು ತನ್ನ ಮಲ್ಲಿನಾಥ ಪುರಾಣ ದಲ್ಲಿ ತನ್ನ ದರ್ಶನದ ಪ್ರಥಮದರ್ಶನ ಮಾಡಿಸಿ ಅದರ ಪರಿಣತ ಸ್ವರೂಪವನ್ನು ಪಂಪರಾಮಾಯಣದಲ್ಲಿ ತೋರಿಸಿದ್ದಾನೆ.
ಎಲ್ಲ ಅಂಗಗಳಲ್ಲಿಯೂ ಚೆಲುವೆಯಾದ ಸರ್ವಾಂಗ ಸುಂದರಿ ವಿದ್ಯಾನಟಿಯ ನಾಟಕವು ತನ್ನ ಕಾವ್ಯದ ರಂಗಸ್ಥಲದಲ್ಲಿ ನಲಿಯಲಿ ಎಂದು ಹಾರೈಸಿ. ತಾನು ಅಭಿನವ ಪಂಪ ಎಂಬುದನ್ನು ಅವನಿಲ್ಲಿ ಸಾರ್ಥಕಗೊಳಿಸಿದ್ದಾನೆ.
ಹರಿಹರನ ಗಿರಿಜಾ ಕಲ್ಯಾಣವು ಚಂಪೂಕಾವ್ಯವಾದರೂ ವಿಷಯ, ರಸ, ಶೈಲಿಗಳಲ್ಲಿ ಹೊಸದಾರಿಯನ್ನು ಹಿಡಿಯಿತು. ಹರಿಹರ ಮಾರ್ಗವೆಂದು ಹೆಸರಾಯಿತು.ಪೀಠಿಕೆಯ ಪ್ರಾರ್ಥನಾ ಪದ್ಯಗಳಲ್ಲಿಯೂ ಅವನ ಸ್ವತಂತ್ರ ದೃಷ್ಠಿ ಕಂಡು ಬರುತ್ತದೆ. ಸರಸ್ವತಿಯ ನುತಿ ಇಲ್ಲವೆ ಪ್ರಾರ್ಥನೆಯನ್ನು ಮಾಡಿಲ್ಲ.ಶಿವ ವಿವಾಹೋನ್ನತಿಯ ಕೃತಿ ರಚನೆಯಲ್ಲಿ ಸರಸ್ವತಿ ತನಗೆ ಅನುಕೂಲೆಯಾಗದೆ ಇರಲಾರಳು ಎಂಬುದು ಅವನ ಆತ್ಮವಿಶ್ವಾಸ.
ಹನ್ನೆರಡನೆಯ ಶತಮಾನದ ಕವಿಗಳಲ್ಲಿ ಗಣ್ಯನಾದ ನೇಮಿಚಂದ್ರನ ಲೀಲಾವತಿಯಲ್ಲಿ ಜೈನ ಪ್ರೌಢಕವಿಗಳ ಜಾಡಿನಲ್ಲಿ ಸರಸ್ವತಿ ಸ್ತುತಿ ಹೊರಟಿವೆ. ಸರಸ್ವತಿ ಜಿನನ ಸಮುದ್ರದಲ್ಲಿ ಹುಟ್ಟಿರುವಳು ಎಂಬ ಮಾತು ಪರಮಜಿನೇಂದ್ರ ವಾಣಿಯೇ ಸರಸ್ವತಿ ಎಂಬುದಕ್ಕೆ ಸರಿಸಾಟಿಯಾಗಿದೆ.
ಆದರೆ ಕಾಮಸಂಜನನಿ ಎಂದು ಅವಳನ್ನು ಕರೆದದು ವಿಶೇಷವಾಗಿದೆ. ಜಿನನ ನಜನ್ಯ ಕಾಮಜನಕಳಾಗುವಳೆಂದರೆ ಆಶ್ರ‍್ಯವೇ ಸರಿ. ಶೃಂಗಾರ ಮಯವಾದ ಲೀಲಾವತಿಯನ್ನು ರಚಿಸಲು ಹೊರಟ ನೇಮಿಚಂದ್ರನು ಸಂಸಾರ ದೋಷಗಳನ್ನು ಸರಸ್ವತಿ ಇಲ್ಲದಂತಾಗಿ ಮಾಡಿ – ಅವನು ಗುಣಕ್ಕೆ ತಿರುಗಿಸುವ ಶಕ್ತಿಯುಳ್ಳವಳು ಎಂಬ ವರ್ಣನೆ ನವೀನವೂ ಬೋಧಪ್ರದವೂ ಆಗಿದೆ.
ನೇಮಿಚಂದ್ರನ ಸರಿಸಮನಾಗಿ ಮೆರೆದ ರುದ್ರಭಟ್ಟನು ತನ್ನ ಜಗನ್ನಾಥ ವಿಜಯ ದಲ್ಲಿ ವರ್ಣಿಸಿರುವ ಪರಿ ಅಪೂರ್ವ. ಕಮಲವಾಸಿನಿ ಸರಸ್ವತಿ ಎಂಬುದು ಸಂಪ್ರದಾಯ. ಆದರೆ ಕಮಲವು ಕೆಸರಲ್ಲಿ ಹುಟ್ಟಿದ್ದು. ರಜಸ್ಸಿನಿಂದ ತೊಡೆದದ್ದು ಜಡದ ಮನೆ. ಆದ್ದರಿಂದ ಕಮಲವನ್ನು ಬಿಟ್ಟು ಅತ್ಯುತ್ತಮವೆಂದು ಹಿರಿದಾದ ಸಂತೋಷದಿ0ದ ವಾಣಿ ನವೀನ ಸೌರಭದ ಹಾಗೆ ರುದ್ರನ ನಾಲಿಗೆ ತುದಿಯಲ್ಲಿ ಇರಲಿ ಎಂಬುದೇ ಪ್ರಾರ್ಥನೆಯ ಆಶಯ. ಕಾವ್ಯವು ಆಧ್ಯಾತ್ಮಿಕ ಸಿದ್ಧಿಗೆ ಸಾಧನ ಎಂಬ ವಿಶೇಷ ದರ್ಶನವು ಇಲ್ಲಿ ಮೂಡಿದೆ.
ಕನ್ನಡದ ಹಿರಿಯ ಕವಿಗಳಲ್ಲಿ ಒಬ್ಬನಾದ ಜನ್ನನ ಯಶೋಧರ ಚರಿತ್ರಯೆಲ್ಲಿ ಸರಸ್ವತಿ ಸ್ತುತಿ ಇಲ್ಲ ಆದರೆ ಯಶೋಧರ ಚರಿತೆಗಿಂತ ಹೆಚ್ಚು ತಾತ್ವಿಕವೂ, ಧಾರ್ಮಿಕವೂ ಆದ ಅನಂತನಾಥ ಪುರಾಣದಲ್ಲಿ ಸರಸ್ವತಿಯ ಸ್ತುತಿಯೂ ಇದೆ ದರ್ಶನವೂ ಇದೆ. ಇದು ಜೈನ ಸಂಪ್ರದಾಯಕ್ಕೆ ಅನುಗುಣವಾಗಿದೆ.
ಅಂಡಯ್ಯ ಕಬ್ಬಿಗರ ಕಾವ್ಯದಲ್ಲಿ ಬಂದಿರುವ ಸರಸ್ವತಿ ಅಚ್ಚಗನ್ನಡತಿಯೆಂಬುದೇ ಹೆಚ್ಚಿನ ಮಾತು. ಆದರೆ ಕಲ್ಪನೆ – ಯೋಚನೆಗಳಲ್ಲಿ ವಿಶೇಷವೇನೂ ಇಲ್ಲ.

ಕನ್ನಡದ ಪ್ರಸಿದ್ಧ ವೈಯಾಕರಣಯಾದ ಕೇಶಿರಾಜನು ತನ್ನ ಶಬ್ಧಮಣಿ ದರ್ಪಣದ ಪ್ರಾರಂಭದಲ್ಲಿ ಶ್ರೀ ವಾಗ್ದೇವಿಗೆ ನಮಸ್ಕಾರ ಮಾಡಿದ್ದಾನೆ.
ಚೌಂಡರಸನು ನಳಚಂಪುವಿನಲ್ಲಿ ಸರಸ್ವತಿ ಸ್ತುತಿ ಮಾಡಿಲ್ಲ. ಅಭಿನವದಶಕುಮಾರ ಚರಿತೆಯಲ್ಲಿ ತೀರ ಸಾಮಾನ್ಯವಾಗಿ ಮಾಡಿದ್ದಾನೆ.


ದೇಸಿ ಕಾವ್ಯಗಳಲ್ಲಿ ಸರಸ್ವತಿಯ ದರ್ಶನ
ದೇಸಿ ಕಾವ್ಯವೆಂದರೆ ಮಾರ್ಗೇತರ ಕಾವ್ಯದಲ್ಲಿ ವಚನ, ರಗಳೆ, ಷಟ್ಪದಿ, ದ್ವಿಪದಿ, ಸಾಂಗತ್ಯ ಈ ರೂಪಗಳಲ್ಲಿರುವ ಮತ್ತು ಹೆಚ್ಚು ಜನಸಂಮುಖವಾದ ಸರಣಿಯ ಬರೆದಿರುವ ಗ್ರಂಥಗಳೆಲ್ಲ ಬರುತ್ತದೆ.
ಸರಸ್ವತಿ ಸ್ತುತಿ ಇಲ್ಲದಿರುವುದೇ ವಚನ ಸರಸ್ವತಿಯ ಗುಣ ವಿಶೇಷವೆನ್ನಬಹುದು. ಆದರೆ ಮಾತಿನ ನೆಲೆ-ಬೆಲೆಯನ್ನು ವಚನಕಾರರು ಬಹಳ ಚೆನ್ನಾಗಿ ಅರಿತಿದ್ದರು ಮಾತೆಂಬುದು ಜೋತಿರ್ಲಿಂಗ ಎಂಬುದು ಅಲ್ಲಮಪ್ರಭುವಿನ ದಿವ್ಯಸೂತ್ರ. ಮಾತೆಂದರೆ ಬೆಳಕಿನ ರೂಪದಲ್ಲಿ ದೇವರು.


ಬಸವಣ್ಣನವರು ಅಂದ0ತೆ ನುಡಿದರೆ ಮುತ್ತಿನ ಹಾರದಂತಿರಬೇಕು. ಅದೇ ಸುಂದರವಾದ ಗಾದೆ ಮಾತಾಗಿ ಅಯ್ಯ ಎನೆ ಸ್ವರ್ಗ, ಎಲವೊ ಎನೆ ನರಕ ಎಂದು ವಚನಭಾಗದಲ್ಲಿ ಮೈತಳೆದು ನಿಂತಿದೆ.
ಕುಮಾರ ವ್ಯಾಸ ಭಾರತದಲ್ಲಿ ಸರಸ್ವತಿಯ ಸಾಂಪ್ರದಾಯಿಕ ವರ್ಣನೆಯಿದೆ. ಇಲ್ಲಿ ಅವನ ಪ್ರತಿಭಾವಿಲಾಸವು ಕಡಿಮೆ ಎನ್ನಬೇಕು.
ದಾಸಕೂಟದ ವಾಜ್ಞಯದಲ್ಲಿ ಅನೇಕ ದಾಸರು ದೇವತಾಸ್ತುತಿಯ ಪದಗಳಲ್ಲಿ ಸರಸ್ವತಿಯನ್ನು ಪ್ರತ್ಯೇಕವಾಗಿ ಸ್ತುತಿ ಮಾಡಿದ್ದಾರೆ.
ಪುರಂದರದಾಸರ ಪಾಲಿಸೆಮ್ಮ ಮುದ್ದು ಶಾರದೆ; ಒಂದೇ ಮನದಿ ಭಜಿಸು ವಾಗ್ದೇವಿಯಾ , ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ಗೇಯತೆಯಲ್ಲಿ ಕೆಲವು ರಮ್ಯವಾಗಿದೆ ಆದರೆ ಅರ್ಥದಲ್ಲಿ ಪ್ರಗಲ್ಭತೆಯಿಲ್ಲ. ಅತ್ಯಂತ ಗೇಯವೂ ಚಿತ್ರ ಪರಿಸ್ಪುಟವೂ ಆದುದರೆಂದರೆ ನಲಿದಾಡೆ ಎನ್ನ ನಾಲಿಗೆ ಮೇಲೆ ಎಂಬ ಹಾಡು.
ಭಕುತಿಗೆ ಅಭಿಮಾನಿ ಭಾರತಿ ಎಂದು ಒಂದು ಹಾಡಿನ ಅಭಿಪ್ರಾಯವಾಗಿದೆ.
ಕನಕದಾಸರ ಕೀರ್ತನೆಗಳಲ್ಲಿ ಸರಸ್ವತಿಯ ಪ್ರತ್ಯೇಕ ನುಡಿಯಲ್ಲ. ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ಎಂಬ ಕೀರ್ತನೆಯಲ್ಲಿ ಉಮೆಯೊಡನೆ ಸಮೀಕೃತಗಳಾಗಿ ಶಾರದೆ ಬಂದಿದ್ದಾಳೆ.
ಲಕ್ಷ್ಮೀಶ ಜೈಮಿನಿ ಭಾರತದಲ್ಲಿ ಬ್ರಹ್ಮನ ರಾಣಿ ಸರಸ್ವತಿ ಎಂಬ ಸಾಂಪ್ರದಾಯಿಕ ಕಲ್ಪನೆ ವಿಸ್ತಾರಗೊಂಡಿದೆ. ಭಕ್ತ ಕವಿಯಾದ ಕಾರಣ ಕೃತಿಯು ತನ್ನದಲ್ಲ. ತನ್ನಿಂದ ದೇವರು (ವಾಣಿ) ನುಡಿಸಿದ್ದು ಎಂದು ಹೇಳಿಕೊಂಡಿದ್ದಾನೆ.
ತ್ರಿಪದಿಕಾರ ಸರ್ವಜ್ಞನು ಸರಸ್ವತಿಯನ್ನು ಪ್ರಾರ್ಥಿಸದೆ ಅವಳು ಅವನಲ್ಲಿ ಐಕ್ಯಳಾದಳು ಅವನ ಸ್ವತಂತ್ರ ಮನೋಭಾವಕ್ಕೆ ಸ್ತುತಿ ಸಂಪ್ರದಾಯವು ಸರಿ ಹೋಗಲಿಲ್ಲ. ಇನ್ನು ಮುಂದಿನ ದೇಸಿಗಬ್ಬಗಳಲ್ಲಿ ಸರಸ್ವತಿಯನ್ನು ಕುರಿತು ಪ್ರಾರ್ಥನೆ ಕಡಿಮೆ ಇದ್ದರೂ ಅದರ ಸಾಂಪ್ರದಾಯಿಕ ದರ್ಶನವೂ ವಿರಳ. ಇದ್ದುದರಲ್ಲಿ ಗೋವಿಂದ ವೈದ್ಯನ ಕಂಠೀರವ ನರಸಿಂಹ ವಿಜಯದಲ್ಲಿ ಕಮಲ ಸಂಭವನ ಪಟ್ಟದ ರಾಣಿ ಕಲ್ಯಾಣಿ ಕಮನೀಯ ವೀಣಾಪಾಣಿ ಎಂಬ ಸ್ತುತಿ ಬಂದಿದೆ.

ಹೊಸ ಕಾವ್ಯದಲ್ಲಿ ಸರಸ್ವತಿಯ ದರ್ಶನ
ಹೊಸಗನ್ನಡದ ಲೇಖಕ ಅಗ್ರಗಣ್ಯರಾದ ಬಿ.ಎಂ.ಶ್ರೀರವರು ಕನ್ನಡ ಸರಸ್ವತಿಯ ದರ್ಶನವನ್ನು ಎಷ್ಟು ಸಮಗ್ರವಾಗಿ ಸೂಕ್ಷ್ಮವಾಗಿ ಪಡೆದಿದ್ದರೆಂಬುದಕ್ಕೆ ಗದ್ಯಕವನವಂತಿದ್ದ ಅವರ ಭಾಷಣದಲ್ಲಿಯ ಒಂದು ಅವತರಣಿಕೆ ಸಾಕ್ಷಿಯಾಗಿದೆ.
ಸಾಹಿತ್ಯಾರಾಧಕರೆ ಆಗೋ ನೋಡಿ, ಚಲನೆಯಿಲ್ಲದೆ ನಿಂತಿರುವಳು ಕರ್ನಾಟಕ ಸರಸ್ವತಿ ದೇವಿ, ತಲೆಯ ಮೇಲೆ ಭಾರವಾದ ಕಿರೀಟ….. ಈ ರೂಪಕದಲ್ಲಿ ಹಳೆಯ ಕನ್ನಡ ಸಾಹಿತ್ಯದ ಸ್ವರೂಪವೂ ಸಾಂಕೇತಿಕವಾಗಿ ಬಂದಿರುವ0ತೆ ಹೊಸ ಸಾಹಿತ್ಯ ಪ್ರೇರಕ ಶಕ್ತಿಯೂ ಮೂಡಿ ನಿಂತಿರುತ್ತದೆ.
ಪೂಜ್ಯ ಡಿ.ವಿ. ಗುಂಡಪ್ಪನವರ ವಿಚಾರ ವಿವೇಕಗಳುಳ್ಳ ಸಗ್ಗವಾಗಿರುವ ಮಂಕುತಿಮ್ಮ ಕಗ್ಗವು. ಜೀವನದ ಅನೇಕ ಮೂಲಭೂತ ಸಮಸ್ಯೆಗಳನ್ನು ಕುರಿತು ಅದರಲ್ಲಿ ಉನ್ನತ ಮಟ್ಟದ ತಾತ್ವಿಕ ಚರ್ಚೆಯಿದೆ.
ಮಾಸ್ತಿಯವರ ಮೊದಲನೆಯ ಕವನ ಸಂಗ್ರಹ ಅರುಣದಲ್ಲಿ ಹೊಸ ಛಂದದಲ್ಲಿ ಭಾವಗೀತೆ ಇಂತಿದೆ.
ವೀಣೆಯಾಗದಿರೆ ಮಧುರನಿನಾದದಿ
ವಾಣಿಯಂದುಗೆಯ ದನಿಯ ನಿತಾರು
ರಾಣಿಯು ನುಡಿಸುವ ಕೊಳಲು ಆಗದಿರೆ
ಎಣೆಯಲ್ಲವಿದ ಏಕನಾದವ.


ಉತ್ತರ ಕರ್ನಾಟಕದಲ್ಲಿ ಹೊಸ ಕಾವ್ಯದ ಪರಂಪರೆಯನ್ನು ಪ್ರಾರಂಭಿಸಿ ತತ್ವವೇತ್ತರಾದ ವರಕವಿ ದ.ರಾ. ಬೇಂದ್ರೆ ಅವರು. ಹಲವು ಕವನಗಳಲ್ಲಿ ತಮ್ಮ ಸರಸ್ವತಿಯ ದರ್ಶನವನ್ನು ಮೂಡಿಸಿದ್ದಾರೆ.
ಓ ಚರ್ತುಮುಖ ಸೌಂರ‍್ಯ, ನನ್ನ ಕಿನ್ನರಿ, ನನ್ನ ಹಾಡು, ರುದ್ರವೀಣೆ… ಇದರಲ್ಲಿ ಸರಸ್ವತಿಯ ಕುರಿತು ಭಾವಪೂರ್ಣವಾದ ಅಂಶವಿದೆ. ಅಂಬಿಕಾತನಯದತ್ತರ ಚಿತ್ತವು ಅನೇಕ ಅನುಭವಗಳ ಕೋಶವಾಗಿದೆ. ಗಂಗಾವತಾರಣ ಸಂಗ್ರಹದಲ್ಲಿ ಸರಸ್ವತಿ ಸೂಕ್ತ ಎಂಬ ಕವನವಿದ್ದು ಇದರಲ್ಲಿ ಒಂದು ವಿಶೇಷವಾದ ಕನಸಾಗಿ ಸರಸ್ವತಿ ಕವಿಗೆ ದರ್ಶನವಿತ್ತಿದ್ದಾಳೆ.
ಮಧುರ ಚೆನ್ನರು ತಮ್ಮ ಜೀವನವನ್ನು ಅಧ್ಯಾತ್ಮಕ್ಕೆ ಮೀಸಲಾಗಿರಿಸಿ ಅನುಭಾವಿ ಕವಿಗಳೆಂದು ಹೆಸರಾದವರು. ಅವರ ನನ್ನನಲ್ಲ ಸಂಗ್ರಹದಲ್ಲಿ ಶಾರದೆಗೆ ಎಂಬ ಕವನವು ಸರಸ್ವತಿಯನ್ನು ಕುರಿತು ಪ್ರಾರ್ಥನೆಯಾಗಿದೆ. ಇದರಲ್ಲಿ ಭಾವವನ್ನೇ ತನ್ನ ವೀಣೆಯಾಗಿಸಿ ಅದರ ಮೇಲೆ ಬೆರಳಾಡಿಸುತ್ತ ಆಕಾಶ ವ್ಯಾಪಿಯಾದ ಸಂಗೀತದಿ ಅಮೂರ್ತವನ್ನು ಮೂರ್ತಗೊಳಿಸುವ ಭಾರತಿಯನ್ನು ನವೋನವವಾಗಿ ಬಣ್ಣಿಸಲಾಗದೆ.
ಸೂಕ್ಷ್ಮ ಕಲ್ಪಲತೆ ಮತ್ತು ತಾತ್ವಕತೆಗಳ ಮೇಳ ಹಾಕಿದ ಮೇರು ಕವಿಗಳಲ್ಲಿ ಶ್ರೀ ಪು.ತಿ.ನ. ಒಬ್ಬರು. ಅವರ ರಸ ಸರಸ್ವತಿ ಸರಸ್ವತಿಯನ್ನು ಕುರಿತು ಬರೆಯಲಾದ ಹೊಸ ಕವನಗಳಲ್ಲಿ ವಿಸ್ತಾರವೂ ಪ್ರಗಲ್ಭವೂ ಆದದ್ದು. ಅದರಲ್ಲಿ ಭಾವಪ್ರಾಪ್ತಿಯೊಡನೆ ಸೂಕ್ಷ್ಮ ಸಂಪನ್ನನಾದ ತತ್ವ ವ್ಯಾಖ್ಯೆಯಿದೆ.
ಕವಿಯ ಹೃದಯದ ಗವಿಯಿಂದ ರಸಿಕ ಜನರು ಹೊರಗೆ ತೆಗೆಯುವ ಭವ(?) ರತ್ನ ಆಕೆ ಹೊಸ ಕಾವ್ಯ ಪ್ರಪಂಚದಲ್ಲಿ ಸರಸ್ವತಿ ಹಿರಿಯ ಆರಾಧಕರು ಆಲೋಚಕರೂ ರಾಷ್ಟ್ರಕವಿ ಕುವೆಂಪು ಅವರು.. ಅವರ ರಾಮಾಯಣ ದರ್ಶನಂ ಪ್ರಾರಂಭದಲ್ಲ್ಲಿ ಕವಿತ ದರ್ಶನ ವೆಂಬ ಸಂಚಿಕೆಯಿದೆ. ಅದರಲ್ಲಿ ಕವಿ ಸರಸ್ವತಿಯನ್ನು ಕುರಿತು.
ಬಾಳು, ವೀಣಾಪಾಣಿ, ಬಾಳು, ಬ್ರಹ್ಮನರಾಣಿ;
ಗಾನಗೆಯ್, ಹೇಳು, ಓ ಭಾವಗಂಗಾವೇಣಿ…
ಹೀಗೆ ಪ್ರಾರ್ಥಿಸಿ ಸರಸ್ವತಿಯ ವಿಲಕ್ಷಣ ಸಾಮರ್ಥ್ಯವನ್ನು ಬಣ್ಣಿಸಿ ಕವಿ ಅವಳಿಗೆ ತನ್ನಲ್ಲಿ ನಿಂತು ಗಾನ ಗೈಯ್ಯಲು ಕೇಳುತ್ತಾನೆ. ತನ್ನನ್ನು ಅವಳಡಿಗೆ ಮುಡಿಪಿಡುತ್ತಾನೆ.
ಅನುಭವ ಸಂಪತ್ತಿನಿ0ದಲೂ ವಿಚಾರ ಸಂಪತ್ತಿನಿ0ದಲೂ ಹೊಸ ಕಾವ್ಯಕ್ಕೆ ಹೊಸ ತೊಡವುಗಳನ್ನು ತೊಡಿಸಿದ ಕವಿ ವಿ.ಕೃ.ಗೋಕಾಕ್ (ವಿನಾಯಕ)ರು.
ಅವರ ಸ್ಫೂರ್ತಿಗೆ ಎಂಬ ಕವನದಲ್ಲಿ ಅವಳ ಅದ್ಭುತ ಶಕ್ತಿಯ ವರ್ಣನೆಯಿದೆ. ಪ್ರತಿಭೆಗೆ ಅಥವಾ ಸರಸ್ವತಿಗೆ ಜೀವನದ ವಿಶಾಲ ಮತ್ತು ಸಮಗ್ರ ದರ್ಶನವಿರುತ್ತದೆ. ಅದನ್ನರಿತವರಗೆ ಸಪ್ತಸ್ವರ್ಗ ಮರೆತವರಿಗೆ ನರಕ.
ಶಕ್ತಿಯುತವಾದ ಬರವಣಿಗೆಯಿಂದ ಹೆಸರು ಪಡೆದ ಬಿ.ಎಚ್. ಶ್ರೀಧರರು ತಮ್ಮ ಮೇಘನಾದ ಸಂಗ್ರಹದಲ್ಲಿ ಸಂಪ್ರದಾಯ ನಿಷ್ಠವಾದ ಸರಸ್ವತಿ ಸ್ತುತಿ ಇದೆ.
ಕೆಂದಾವರೆಯಲಿ ಹುಟ್ಟಿದ ಬೊಮ್ಮನ ಕಣ್ಣಾದರೆ ಕವಿವಂದ ಹಿತೇ
ಮಂದಾರೋಜ್ವಲ ಕಾಂತಿಯುತೇ ಬಾಕಾ ಮಹಿತೇ…..
ಹೊಸ ಕಾವ್ಯದ ಸಮದ್ಧ ಪರಂಪರೆಯಲ್ಲಿ ಪ್ರತ್ಯಕ್ಷವಾಗಿ ಸರಸ್ವತಿಯನು ಕುರಿತು ಹಾಡಿರದಿದ್ದರೂ ಕಾವ್ಯಕಲೆ, ಸೌಂರ‍್ಯಗಳನ್ನು ಕುರಿತು ಒಂದಿಲ್ಲೊ0ದು ರೀತಿಯಲ್ಲಿ ಅನೇಕ ಕವಿಗಳು ತಮ್ಮ ಕಲ್ಪನೆಗಳನ್ನು ಹರಿಬಿಟ್ಟಿದ್ದಾರೆ.
(ಆಕರ ಋಣ : ರಂ.ಶ್ರೀ ಮುಗಳಿರವರ ಕೃತಿ)

Related Articles

ಪ್ರತಿಕ್ರಿಯೆ ನೀಡಿ

Latest Articles