ಜಗನ್ಮಾತೆ ಶಾರದೆ

ಜಯ ಜಯ ದೇವಿ ಶಾರದಾಂಬೆ 
ಜ್ಞಾನದಾತೆ ಕಮಲಾಸನ ಸಹಿತೆ l

ಸಪ್ತ ಸ್ವರ ಮೀಟುವ ವೀಣಾ ಪಾಣಿ 
ವಿರಿಂಚಿ ಪ್ರಿಯಸತಿ ವಿದ್ಯಾಪ್ರದಾಯಿನಿ l

ಸುಮಧುರ ಸಂಗೀತದ ಅಧಿದೇವತೆ ನೀ 
ಭವ ಭಯ ಹರಿಸುವ ಭವತಾರಿಣಿ ನೀ l

ಸಕಲ ಕಲೆಗಳ ಸಿದ್ಧಿದಾತೆ ಕಲ್ಯಾಣಿ 
ಪಾದಾಶ್ರಿತ ಜನ ಕ್ಷೇಮ ಶುಭದಾಯಿನಿ l

ಬಿಡದೇ ಪಾಲಿಸು ಅಕ್ಷರ ರೂಪಿಣಿ 
ದುರಿತ ದುಃಖ ನಿವಾರಿಣಿ ಬ್ರಹ್ಮಾಣಿ l

ಚತುರ್ವೇದ ಶಾಸ್ತ್ರ ಸಾರ ರಂಜಿತೆ 
ವೈರಾಗ್ಯ ವಿವೇಕ ಕರುಣಿಸು ಅಮಲೇ l

ಅತುಳ ಭಾರತದಿ ಮಹಿಮೆ ಮೆರೆದವಳೆ 
ಕಾಶ್ಮೀರಪುರದೊಳು ನೆಲೆಸಿಹ ದಿವ್ಯ ವರದೇ l

ಶಂಕರರ ಮನದಿ ನಿತ್ಯ ಶೋಭಿಪ ಜನನಿ 
ಶೃಂಗೇರಿ ಪೀಠದಿ ವಿರಾಜಿಪ ಪುಸ್ತಕ ಪಾಣಿ l

ಅಕ್ಷರ ನೀನೇ ಶಾಸ್ತ್ರವೂ ನೀನೇ 
ವೇದವೂ ನೀನೇ ನಾದವೂ ನೀನೇ l

ಪಾಹಿ ಪಾಹಿ ಜಗನ್ಮಾತೆ 
ಪಾಹಿ ಪಾಹಿ ಶಾರದಾಂಬೆ l
ಎಸ್. ಎಲ್. ವರಲಕ್ಷ್ಮೀ ಮಂಜುನಾಥ್

✍️ಎಸ್. ಎಲ್. ವರಲಕ್ಷ್ಮೀ ಮಂಜುನಾಥ್.

Related Articles

ಪ್ರತಿಕ್ರಿಯೆ ನೀಡಿ

Latest Articles