ಬೆಂಗಳೂರು: ಚುಂಚಘಟ್ಟ ರಸ್ತೆಯ ಕೋಣನಕುಂಟೆಯ ತಿರುಮಲಾಧೀಶ ಶ್ರೀನಿಧಿ ಶ್ರೀನಿವಾಸನ ದಿವ್ಯ ಸನ್ನಿಧಾನದಲ್ಲಿ ನೂತನವಾಗಿ ಶ್ರೀ ಭೂವರಾಹ, ಶ್ರೀ ಹಯಗ್ರೀವ , ಶ್ರೀ ಮಹಾಲಕ್ಷ್ಮಿ ಹಾಗೂ 18 ಅಡಿ ಎತ್ತರದ ಶ್ರೀ ಮುಖ್ಯ ಪ್ರಾಣ ದೇವರ (ಆಂಜನೇಯ) ಸ್ಥಿರಬಿಂಬಗಳ ಆಗಮೋಕ್ತ ಪ್ರತಿಷ್ಠಾಪನಾ ಮಹೋತ್ಸವವು ಮೇ 22 ರಂದು ಆಯೋಜಿಸಲಾಗಿದೆ.
ಶ್ರೀಮದುತ್ತಾರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ವಿಗ್ರಹಗಳ ಪ್ರತಿಷ್ಠಾಪನೆ ಮಾಡಿ ಅನುಗ್ರಹ ಸಂದೇಶ ನೀಡಲಿದ್ದಾರೆ .
18 ಅಡಿ ಆಂಜನೇಯನ ಏಕಶಿಲಾ ವಿಗ್ರಹವನ್ನು ಖ್ಯಾತ ಶಿಲ್ಪಿ ಶಂಕರ ಸ್ಥಪತಿ ನಿರ್ಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಅನೇಕ ಧಾರ್ಮಿಕ – ಸಾಂಸ್ಕೃತಿಕ ಕರ್ಯಕ್ರಮಗಳು ನಡೆಯಲಿದ್ದು ರಾಜಕೀಯ – ಧಾರ್ಮಿಕ- ಸಾಮಾಜಿಕ – ಶೈಕ್ಷಣಿಕ ಕ್ಷೇತ್ರದ ಗಣ್ಯರು ಭಾಗವಹಿಸುವರು ಎಂದು ದೇವಾಲಯ ಸಮಿತಿಯ ಡಾ.ಕೆ.ಎಸ್.ಸಮೀರಸಿಂಹ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .