ಕೋಣನಕುಂಟೆಯಲ್ಲಿ 18 ಅಡಿ ಆಂಜನೇಯನ ಪ್ರತಿಷ್ಠಾಪನೆ ಇಂದು

ಬೆಂಗಳೂರು: ಚುಂಚಘಟ್ಟ ರಸ್ತೆಯ ಕೋಣನಕುಂಟೆಯ ತಿರುಮಲಾಧೀಶ ಶ್ರೀನಿಧಿ ಶ್ರೀನಿವಾಸನ ದಿವ್ಯ ಸನ್ನಿಧಾನದಲ್ಲಿ ನೂತನವಾಗಿ ಶ್ರೀ ಭೂವರಾಹ, ಶ್ರೀ ಹಯಗ್ರೀವ , ಶ್ರೀ ಮಹಾಲಕ್ಷ್ಮಿ ಹಾಗೂ 18 ಅಡಿ ಎತ್ತರದ ಶ್ರೀ ಮುಖ್ಯ ಪ್ರಾಣ ದೇವರ (ಆಂಜನೇಯ) ಸ್ಥಿರಬಿಂಬಗಳ ಆಗಮೋಕ್ತ ಪ್ರತಿಷ್ಠಾಪನಾ ಮಹೋತ್ಸವವು ಮೇ 22 ರಂದು ಆಯೋಜಿಸಲಾಗಿದೆ.

ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು

ಶ್ರೀಮದುತ್ತಾರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ವಿಗ್ರಹಗಳ ಪ್ರತಿಷ್ಠಾಪನೆ ಮಾಡಿ ಅನುಗ್ರಹ ಸಂದೇಶ ನೀಡಲಿದ್ದಾರೆ .

18 ಅಡಿ ಆಂಜನೇಯನ ಏಕಶಿಲಾ ವಿಗ್ರಹವನ್ನು ಖ್ಯಾತ ಶಿಲ್ಪಿ ಶಂಕರ ಸ್ಥಪತಿ ನಿರ್ಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಅನೇಕ ಧಾರ್ಮಿಕ – ಸಾಂಸ್ಕೃತಿಕ ಕರ‍್ಯಕ್ರಮಗಳು ನಡೆಯಲಿದ್ದು ರಾಜಕೀಯ – ಧಾರ್ಮಿಕ- ಸಾಮಾಜಿಕ – ಶೈಕ್ಷಣಿಕ ಕ್ಷೇತ್ರದ ಗಣ್ಯರು ಭಾಗವಹಿಸುವರು ಎಂದು ದೇವಾಲಯ ಸಮಿತಿಯ ಡಾ.ಕೆ.ಎಸ್.ಸಮೀರಸಿಂಹ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Related Articles

ಪ್ರತಿಕ್ರಿಯೆ ನೀಡಿ

Latest Articles