ತಿರುಪತಿ ಭೇಟಿ 4-5 ದಿನ ಮುಂದೂಡಿ

ತಿರುವ0ತಪುರ: ತಿರುಪತಿ ದೇವರ ದರ್ಶನ ಮಾಡಲು ಇಚ್ಚಿಸುವವರು 4-5 ದಿನ ಮುಂದೂಡಿ ಎಂದು ಟಿಟಿಡಿ ಭಕ್ತರಲ್ಲಿ ಮನವಿ ಮಾಡಿದೆ.
ತಿರುಪತಿ ತಿಮ್ಮಪ್ಪ ದೇವರ ದರ್ಶನ ಮಾಡಲು ಭಕ್ತಾದಿಗಳು ಎರಡು ಕಿಮೀ ದೂರ ಕ್ಯೂ ನಿಂತಿದ್ದು 48 ಗಂಟೆಗಳ ಬಳಿಕವಷ್ಟೇ ದೇವರ ದರ್ಶನ ಸಾಧ್ಯವಾಗಿದೆ.
ತಿರುಪತಿಯ ಲಗೇಜ್ ಕೌಂಟರ್, ಲಡ್ಡು ಕೌಂಟರ್ ಬಸ್‌ನಿಲ್ದಾಣ, ಅನ್ನಪ್ರಸಾದ ಸಂಕೀರ್ಣದಲ್ಲಿಯೂ ಭಕ್ತಸಾಗರವಿದೆ. ತಿರುಮಲೆ ರಸ್ತೆಗಳಲ್ಲಿಯೂ ಭಕ್ತರ ದಂಡೇ ಇದೆ. ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜನರನ್ನು ನಿಯಂತ್ರಿಸುವುದು ಸಿಬ್ಬಂದಿಗಳಿಗೆ ಹರಸಾಹಸವೇ ಆಗಿದೆ. ಹಾಗಾಗಿ ತಿರುಪತಿ ಭೇಟಿಯನ್ನು ಮುಂದೂಡಿ ಎಂದು ಟಿಟಿಡಿ ಮನವಿ ಮಾಡಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles