ಉಡುಪಿ ಜಿಲ್ಲೆಯ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಳದಲ್ಲಿ ಆಗಸ್ಟ್ 30 ರ ಮಂಗಳವಾರ ಮತ್ತು 31 ರ ಬುಧವಾರದಂದು ಅನುಕ್ರಮವಾಗಿ ಗೌರಿ ಹಬ್ಬ ಮತ್ತು ಗಣೇಶ ಚತುರ್ಥಿಯನ್ನು ಆಚರಿಸಲಾಗುವುದು.
ಗೌರೀ ತೃತೀಯಾ ಪ್ರಯುಕ್ತ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರಿಗೆ ಮಂಗಳವಾರ ಸಂಜೆ 6 ಗಂಟೆಗೆ ವಿಶೇಷ ರಂಗಪೂಜೆಯನ್ನು ಸಲ್ಲಿಸಲಾಗುವುದು.
ಮರುದಿನ ಗಣೇಶ ಚತುರ್ಥಿ ಯಂದು ಅಷ್ಟೋತ್ತರ ವಿಂಶತಿ ನಾರಿಕೇಳ ಗಣ ಯಾಗ, ನರಸಿಂಹ ಹೋಮ ಮತ್ತು ಗಣಪತಿ ಯಂತ್ರದ ಮೇಲೆ ಪ್ರತಿಷ್ಠಾಪಿತ ಶ್ರೀ ನರಸಿಂಹ ದೇವರಿಗೆ ಮೂಡುಗಣಪತಿ ಸೇವೆಯನ್ನು ನಡೆಸಲಾಗುವುದು. ಅದೇ ದಿನ ಸಂಜೆ ಸಂಜೆ 6 ಗಂಟೆಗೆ ಶ್ರೀ ಗಣಪತಿ ದೇವರ ಸನ್ನಿಧಿಯಲ್ಲಿ ವಿಶೇಷ ರಂಗಪೂಜೆಯ ನಂತರ ಶ್ರೀ ನರಸಿಂಹ ದೇವರಿಗೆ ಕಿರಿ ರಂಗಪೂಜೆ ಮತ್ತು ವಿಶೇಷ ಉತ್ಸವ ಬಲಿ ಯನ್ನು ನೆರವೇರಿಸಲಾಗುವುದೆಂದು ಆಡಳಿತ ಮಂಡಳಿಯ ಪರವಾಗಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.