ನಮಿಪೆ ಗಣಪ

*ಗ* ಣೇಶ ನಿನ್ನಯ ಬರುವಿಕೆಯಿಂದ

ಸಂತಸ ಸಂಭ್ರಮ ಮನೆ ತುಂಬ||

*ಗಾ* ಯನ ಲಹರಿಯ ಹರಿಸುತ ಎಲ್ಲ

ಸಿಹಿಯನು ಸವಿಯುತಿಹರು ಮೆಲ್ಲ||

*ಗಿ* ಟುಕು ಕೊಬ್ಬರಿಗೆ ಬೆಲ್ಲವ ಸೇರಿಸಿ

ಮೋದಕ ತಯಾರಿ ನಡೆಸಿಹವು ಕೂಡಿ||

*ಗೀ* ತ ಪ್ರಿಯ ನೀ ಗಣಪತಿರಾಯ

ಶಿರವನು ಬಾಗಿಸಿ ಮುಗಿವೆನು ಕೈಯ್ಯ||

*ಗು* ಡಿಯೊಳು ನೀ ಪ್ರಥಮ ಪೂಜಿತನು

ದೇವ ದೇವತೆಗಳಿಗೆ ಗಣನಾಯಕನು||

*ಗೂ* ಡನು ಕಟ್ಟುವ ಮುನ್ನದಿ ನಾವು

ಕಷ್ಟ ನಿವಾರಿಸೆಂದು ಬೇಡುವೆವು||

*ಗೆ* ಲುವಿಗೆ ಕಾರಣ ಕರ್ತನು ನೀನು

ಜಯವನು ನಿನ್ನಲಿ ಬೇಡುವೆವು||

*ಗೇ* ಣು ಬಟ್ಟೆಗೆ ಪರದಾಟವು ಇರೆ

ನಿಲ್ಲಿಸು ನಮ್ಮಯ ಅಲೆದಾಟಾ||

*ಗೈ* ವೆವು ಆದರದಿ ಸ್ವಾಗತವನು

ಅನುದಿನ ನಿನ್ನನು ಪೂಜಿಪೆವು||

*ಗೊ* ಣಗಾಟವನು ದೂರೀಕರಿಸುವ

ವಿಘ್ನೇಶ್ವರ ಹೇ ವಿನಾಯಕನೇ ||

*ಗೋ* ಕರ್ಣದಲಿ ವಟುವಿನ ವೇಷದಿ

ಆತ್ಮ ಲಿಂಗವ ಹಿಂಪಡೆದವನೆ||

*ಗೌ* ರಿ ತನಯ ಗಜವದನನು ನೀ

ಹೇ ಲಂಬೋದರ ಹರಿಸೆಮ್ಮನು||

*ಗಂ* ಧ ಧೂಪಾರತಿ ಬೆಳಗುತ ನಾವು

ರಾಗದಿ ಮಂಗಲ ಹಾಡುವೆವು||

*ಗಃ* ಹ ಗಃಹ ನಕ್ಕ ಚಂದಿರನನ್ನು 

ಕ್ಷಮಿಸಿ ಬಿಡೆಂದು ಬೇಡುವೆವು||

*ರಚನೆ: ಶ್ರೀಮತಿ ಜ್ಯೋತಿ ಕೋಟಗಿ 

Related Articles

ಪ್ರತಿಕ್ರಿಯೆ ನೀಡಿ

Latest Articles