ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಏ.30ರಿಂದ ಅಷ್ಟಬಂಧ ಬ್ರಹ್ಮಕಲಶೋತ್ಸವ ಆರಂಭಗೊಂಡಿದ್ದು ಮೇ 11ರ ತನಕ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ.

21 ವರ್ಷಗಳ ನಂತರ ನಡೆಯುತ್ತಿರುವ ಧಾರ್ಮಿಕ ಪುಣ್ಯ ಕಾರ್ಯಕ್ಕಾಗಿ ವಿಶೇಷ ಸಿದ್ಧತೆ ಆರಂಭಗೊಂಡಿದೆ. 2002ರಲ್ಲಿಅಷ್ಟಬಂಧ ನಡೆದಿತ್ತು.

ಮೇ 5ರಂದು ಸಹಸ್ರ ಕಲಶದೊಂದಿಗೆ ಬ್ರಹ್ಮಕಲಶಾಭಿಷೇಕ, ಮೇ 9ರಂದು ಬ್ರಹ್ಮರಥೋತ್ಸವ, ಮೇ 11ರಂದು ಪೂರ್ಣಕುಂಭಾಭೀಷೇಕ ನಡೆಯಲಿದೆ.
ಮೇ 2, 3ರಂದು ದೇವರ ದರ್ಶನವಿಲ್ಲ: ಬ್ರಹ್ಮಕಲಶೋತ್ಸವದ ನಿಮಿತ್ತ ಪೀಠ ಚಲನೆ ಪ್ರಕ್ರಿಯೆ ನಡೆಯುವುದರಿಂದ ಮೇ 2 ಮತ್ತು 3ರಂದು ಶ್ರೀದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲಎಂದು ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles