ಉತ್ತರಾದಿ ಮಠದಲ್ಲಿ ನರಸಿಂಹ ದೇವರ ಸಪ್ತರಾತ್ರೋತ್ಸವ

*ಮೇಧಾ ಪ್ರಹ್ಲಾದಾಚಾರ್ಯ ಜೋಶಿ

*ಮೇಧಾ ಪ್ರಹ್ಲಾದಾಚಾರ್ಯ ಜೋಶಿ

ಬೆಂಗಳೂರು: ಪ್ರತಿವರ್ಷ ಶ್ರೀಮಠದಲ್ಲಿನರಸಿಂಹ ಜಯಂತಿ ಉತ್ಸವವನ್ನು ವೈಭವದಿಂದ ಆಚರಿಸಲಾಗುತ್ತದೆ. ಪ್ರತಿ ವರ್ಷವೂ ‘ಶ್ರೀಲಕ್ಷ್ಮಿನರಸಿಂಹ ಸಪ್ತರಾತ್ರೋತ್ಸವ‘ ನಡೆಯುತ್ತದೆ. ಈ ಬಾರಿ ದಿನಾಂಕ 28/4/2023 ರಿಂದ 4/5/ 2023 ರ ವರೆಗೆ ಏಳು ದಿನಗಳ ಕಾಲ ಈ ಉತ್ಸವ ನಡೆಯುವುದು. ಎಲ್ಲ ರೀತಿಯ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಶ್ರೀ ಸತ್ಯಾತ್ಮ ತೀರ್ಥರು

ಪ್ರತಿನಿತ್ಯ ಸಾಯಂಕಾಲ 6 ರಿಂದ 7 ರವರೆಗೆ ನಾಡಿನ ಪ್ರಸಿದ್ಧ ವಿದ್ವಾಂಸರಿಂದ ಉಪನ್ಯಾಸಗಳು. ಸಂಜೆ 7 ರಿಂದ 8 ರವರೆಗೆ ಸುಪ್ರಸಿದ್ಧ ಸಂಗೀತಗಾರರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯುತ್ತದೆ. ಸರಿಯಾಗಿ 8:30 ಕ್ಕೆ ಉತ್ತರಾದಿ ಮಠದ ಅಗ್ರಹಾರದಲ್ಲಿವಾದ್ಯ,ನೃತ್ಯ,ಭಜನೆಯ ವೈಭವಗಳನ್ನೊಳಗೊಂಡು ವಾಹನೋತ್ಸವ ಪ್ರಾರಂಭವಾಗುತ್ತದೆ.

ಮೊದಲನೆಯ ದಿನ ಅಶ್ವವಾಹನ.

2ನೇ ದಿನ ಗಜವಾಹನ.

3ನೇಯ ದಿನ ಶೇಷವಾಹನ.

4ನೇಯ ದಿನ ಏಕಾದಶಿ ವಾಹನೋತ್ಸವ ಇರುವುದಿಲ್ಲ.

5ನೆಯ ದಿನ ಗರುಡವಾಹನ.

6ನೆಯ ದಿನ ವಾಯುವಾಹನ.

ಕೊನೆಯ ದಿನವಾದ ನರಸಿಂಹ ಜಯಂತಿಯಂದು ರಥೋತ್ಸವ ಹಾಗೂ ತೊಟ್ಟಿಲು ಪೂಜೆ ಇರುತ್ತದೆ.

ವಿಶೇಷ ಅಲಂಕಾರ

ಈ ಸಪ್ತರಾತ್ರೋತ್ಸವದಲ್ಲಿ ಶ್ರೀ ಲಕ್ಷ್ಮಿ ನರಸಿಂಹ ದೇವರಿಗೆ ಅರ್ಚಕರ ತಂಡದವರು ನಿತ್ಯವೂ ಒಂದೊಂದು ವಿಶೇಷವಾದ ಅಲಂಕಾರವನ್ನು ಮಾಡುತ್ತಾರೆ. ಹರಿದ್ರಾಲಂಕಾರ (ಅರಿಶಿಣ), ಶಾಖಾಲಂಕಾರ (ವಿಹಿತವಾದ ಎಲ್ಲತರಕಾರಿಗಳಿಂದ)’ ಹಣ್ಣುಗಳಿಂದ ಅಲಂಕಾರ, ಏಕಾದಶಿಯ ದಿನ ತುಳಸಿಯ ಅಲಂಕಾರ, ವೀಳ್ಯದೆಲೆಯಿಂದ ಅಲಂಕಾರ, ಗೆಜ್ಜೆ ವಸ್ತ್ರಾಲಂಕಾರ, ಕೊನೆಯ ದಿನ ಪುಷ್ಪಾಲಂಕಾರ. ಹೀಗೆ ಏಳು ದಿನವೂ ಒಂದೊಂದು ಅಲಂಕಾರವನ್ನು ಮಾಡುತ್ತಾರೆ. ಈ ಸಪ್ತರಾತ್ರೋತ್ಸವದ ಸಂದರ್ಭದಲ್ಲಿನರಸಿಂಹದೇವರ ಸನ್ನಿಧಿಯಲ್ಲಿ ಪ್ರತಿನಿತ್ಯ ಬೆಳಗ್ಗೆ ಅನೇಕ ಜನ ವಿದ್ವಾಂಸರಿಂದ ಮಹಾಭಾರತ-ಭಾಗವತ- ಚತುರ್ವೇದ-ಸರ್ವ ಮೂಲಗಳ ವಿಶೇಷ ಪಾರಾಯಣ ನಡೆಯುತ್ತದೆ.


ನಿತ್ಯವೂ ಸಹಸ್ರನಾಮಾವಳಿಯಿಂದ ಅರ್ಚನೆ ನಡೆಯುತ್ತದೆ. ಸಾಯಂಕಾಲ 4 ರಿಂದ 5 ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮವಿರುತ್ತದೆ. ಕೊನೆಯ ದಿನವಾದ ನರಸಿಂಹ ಜಯಂತಿಯಂದು (4,ಗುರುವಾರ) ಬೆಳಿಗ್ಗೆ 6:30 ರಿಂದ 9:30 ವರೆಗೆ ನರಸಿಂಹ ಮಹಾಮಂತ್ರ ಹೋಮ ನಡೆಯುತ್ತದೆ. ಇದೇ ಸಮಯದಲ್ಲಿ ಶ್ರೀಮಠದಲ್ಲಿಇನ್ನೊಂದೆಡೆಗೆ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಶ್ರೀಮೂಲ ರಾಮದೇವರ ಸಂಸ್ಥಾನ ಪೂಜೆಯು ನೆರವೇರುತ್ತದೆ.

ನಂತರ ಶ್ರೀಗಳವರು ನರಸಿಂಹ ದೇವರಿಗೆ ವಿಶೇಷವಾದ ಫಲಪಂಚಾಮೃತ ಅಭಿಷೇಕವನ್ನು ನೆರವೇರಿಸುತ್ತಾರೆ. ತದನಂತರ ವೈಭವವಾದ ರಥೋತ್ಸವ. ಪ್ರತಿವರ್ಷ ಸುಮಾರು ಆರರಿಂದ ಏಳು ಸಾವಿರ ಜನಕ್ಕೆ ಶ್ರೀಮಠದಿಂದ ಅನ್ನದಾನ ನಡೆಯುತ್ತದೆ. ಅಂದು ಸಾಯಂಕಾಲ ಸ್ತ್ರೀಯರಿಂದ 1008 ಬಾರಿ ನರಸಿಂಹ ಸುಳಾದಿಯ ಪಾರಾಯಣ ನಡೆಯುತ್ತದೆ.

ಪೂಜ್ಯ ಶ್ರೀಸತ್ಯಾತ್ಮತೀರ್ಥರ ಆದೇಶದಂತೆ ಗುರುಸೇವಾಧುರಿಣರಾದ ಡಾ.ಸತ್ಯಧ್ಯಾನಾಚಾರ್ಯ ಕಟ್ಟಿ ಹಾಗೂ ಪಂ.ವಿದ್ಯಾಧೀಶಾಚಾರ್ಯ ಗುತ್ತಲ್‌ ಇವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿಎಲ್ಲಕಾರ್ಯಕ್ರಮಗಳು ಸುಸಜ್ಜಿತವಾಗಿ ನೆರವೇರುತ್ತವೆ.

ಆಚಾರ್ಯದ್ವಯರು ಎಲ್ಲ ವಿದ್ವಾಂಸರೊಂದಿಗೆ ಹಾಗೂ ಸ್ವಯಂಸೇವಕರೊಂದಿಗೆ ಪೂರ್ವಭಾವಿಯಾಗಿ ಸಭೆಗಳನ್ನು ಮಾಡಿ, ಎಲ್ಲಕಾರ್ಯಕ್ರಮಗಳು ಸುಸಜ್ಜಿತವಾಗಿ ನಡೆಯುವಂತೆ ಮತ್ತು ವಾಹನೋತ್ಸವದ ಸಮಯದಲ್ಲಿಹಾಗೂ ದರ್ಶನದ ವೇಳೆಗೆ ಆರಕ್ಷ ಕರ ಸಹಕಾರದಿಂದ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಅಚ್ಚುಕಟ್ಟಾಗಿ ನೆರವೇರಿಸುತ್ತಾರೆ.
ರಾಮನ ಅರ್ಚಕರು, ನರಸಿಂಹನ ಉಪಾಸಕರು, ವೇದವ್ಯಾಸರನ್ನು ಮಸ್ತಕದಲ್ಲಿಹೊತ್ತವರು ಶ್ರೀಸತ್ಯಾತ್ಮತೀರ್ಥರು ನರಸಿಂಹ ದೇವರಲ್ಲಿವಿಶೇಷವಾಗಿ ರಾಷ್ಟ್ರ ಹಾಗೂ ಸನಾತನ ಧರ್ಮದ ರಕ್ಷ ಣೆ, ಗಡಿಯಲ್ಲಿರಾಷ್ಟ್ರವನ್ನು ಕಾಯುವ ವೀರಯೋಧರ ಸಂರಕ್ಷ ಣೆಗಾಗಿ ನಿತ್ಯ ಪ್ರಾರ್ಥನೆಗೈಯುತ್ತಾರೆ. ಅಲ್ಲದೇ ಮೂಕ ಪ್ರಾಣಿಗಳ ರಕ್ಷ ಣೆ ಅದರಲ್ಲೂಗೋ ಸಂರಕ್ಷ ಣೆಗಾಗಿ ಸಕಲ ಸದ್ಭಕ್ತರಿಂದ ನಿತ್ಯದಲ್ಲಿಯೂ ನರಸಿಂಹ ಸುಳಾದಿಯ ಪಾರಾಯಣವನ್ನು ಮಾಡಿಸುತ್ತಿದ್ದಾರೆ.
ಈ ಬಾರಿ ದಿಗ್ವಿಜಯ ಲಕ್ಷ್ಮಿ ನರಸಿಂಹ ಸ್ವಾಮಿಯ ದ್ವಾದಶ ವಾರ್ಷಿಕೋತ್ಸವ. ಶ್ರೀ ಮಠದ ಪರವಾಗಿ ಎಲ್ಲಭಗವದ್ಭಕ್ತರಿಗೂ ಉತ್ಸವಕ್ಕೆ ಆಗಮಿಸಬೇಕೆಂದು ನರಸಿಂಹದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿಶೇಷ ನಿಮಂತ್ರಣ.


Related Articles

ಪ್ರತಿಕ್ರಿಯೆ ನೀಡಿ

Latest Articles