ಮನೆಮನಗಳಲ್ಲಿ ಪ್ರಜ್ವಲಿಸಲಿ
ಪ್ರೀತಿ ವಾತ್ಸಲ್ಯದ ನಂದಾದೀಪ
ಬೆಸೆಯಲಿ ಹೊಸೆದ ಬತ್ತಿಯಂತೆ
ಸ್ನೇಹ ಸಂಬಂಧಗಳ ಆಶಾದೀಪ
ಹಣತೆ ತಾನುರಿದು ಬೆಳಕ ಕೊಡುವಂತೆ
ಸಮಜಕ್ಕಾಗಿ ನಾವು ಬೆಳಕಾಗುವಾ
ಕತ್ತಲೆಯ ಮಿನುಕು ಹುಳುವಿನಂತೆ
ಅಲ್ಪವಾದರೂ ದಾರಿಯ ತೋರುವಾ
ನೀರಮೇಲಿನ ಗುಳ್ಳೆಯಂತಿಹ
ಈ ಜೀವಕೆ ಯಾಕಿಷ್ಟು ಬಯಕೆ
ಬಿರಿವದ್ಯಾವಾಗ ತಿಳಿಯದಿಂದು
ಒಳಿತನ್ನೇ ಬಯಸೋಣ ಜಗಕೆ
ಬೆಳಕಿನ ಹಬ್ಬ ಈ ದೀಪಾವಳಿ
ಬೀರಲಿ ಸಂಭ್ರಮದ ಪ್ರಭಾವಳಿ
ಕಷ್ಟಗಳ ಕೋಟಲೆ ದೂರಾಗಿಸಿ
ಸಂತಸದ ಜ್ಯೋತಿ ಬೆಳಗಲಿ
ಶ್ರೀಮತಿ ಜ್ಯೋತಿ ಕೋಟಗಿ ಬೈಲಹೊಂಗಲ ಬಿ ಆರ್ ಪಿ ಚ ಕಿತ್ತೂರು