ಡಿ.8ರಿಂದ ಧರ್ಮಸ್ಥಳ ಲಕ್ಷ ದೀಪೋತ್ಸವ

  • ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿಪ್ರತಿನಿತ್ಯವೂ ಉತ್ಸವಗಳೇ. ಅದರಲ್ಲಿಹೆಚ್ಚು ಪ್ರಸಿದ್ಧವಾದದ್ದು ಕಾರ್ತಿಕ ಮಾಸದಲ್ಲಿನಡೆಯುವ ಲಕ್ಷ ದೀಪೋತ್ಸವ.
    ಐದು ದಿನಗಳ ಕಾಲ ನಡೆಯುವ ಶ್ರೀ ಮಂಜುನಾಥ ಸ್ವಾಮಿಯ ಉತ್ಸವದಲ್ಲಿಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ, ಮೊದಲ ದಿನ ಹೊಸಕಟ್ಟೆ ಉತ್ಸವ, 2ನೇ ದಿನ ಕೆರೆಕಟ್ಟೆ ಉತ್ಸವ, 3ನೇ ದಿನ ಲಲಿತೋದ್ಯಾನ ಉತ್ಸವ, 4ನೇ ದಿನ ಕಂಚಿಮಾರು ಕಟ್ಟೆ ಉತ್ಸವ, 5ನೇ ದಿನ ಗೌರಿಮಾರು ಕಟ್ಟೆ ಉತ್ಸವ ನಡೆಯಲಿದೆ. ಉತ್ಸವದ ಮರುದಿನ ಶ್ರೀ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ ನಡೆಯಲಿದೆ. ಶ್ರೀ ಮಂಜುನಾಥ ದೇವಸ್ಥಾನವನ್ನು ಹೂಗಳಿಂದ ಶೃಂಗರಿಸಿರುತ್ತಾರೆ. ಡಾ. ಡಿ.ವೀರೇಂದ್ರ ಹೆಗ್ಗಡೆಯವರ ನಿವಾಸ (ಬೀಡು), ಅನ್ನಛತ್ರ, ರಥಬೀದಿ, ರಾಜಬೀದಿ ಸುತ್ತಲೂ ವಿದ್ಯುದ್ದೀಪಗಳಿಂದ ಅಲಂಕರಿಸಲಾಗುತ್ತದೆ.

ಸರ್ವಧರ್ಮ ಸಮ್ಮೇಳನ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿಕಾರ್ತಿಕ ಮಾಸದಲ್ಲಿನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ಡಿ. 8 ರಿಂದ 12 ರವರೆಗೆ ನಡೆಯಲಿವೆ. ಡಿ. 11ರಂದು ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನವನ್ನು ವಿದ್ವಾಂಸ ಬೆಂಗಳೂರಿನ ಡಾ. ಗುರುರಾಜ ಕರ್ಜಗಿ ಉದ್ಘಾಟಿಸುವರು. ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷ ತೆ ವಹಿಸುವರು. ವಿವಿಧ ವಿದ್ವಾಂಸರು ಪ್ರವಚನ ನೀಡಲಿದ್ದು, ರಾತ್ರಿ 8.30ರಿಂದ ಬೆಂಗಳೂರಿನ ಅನುರಾಧಾ ವಿಕ್ರಾಂತ್‌ ಬಳಗದವರಿಂದ ನೃತ್ಯ ಪ್ರದರ್ಶನ.
ಸಾಹಿತ್ಯ ಸಮ್ಮೇಳನ
ಡಿ.12ರಂದು ಸಂಜೆ 5 ಗಂಟೆಗೆ ಸಾಹಿತ್ಯ ಸಮ್ಮೇಳನ. ಬೆಂಗಳೂರು ಇಸ್ರೋ ಅಧ್ಯಕ್ಷ ಡಾ. ಎಸ್‌. ಸೋಮನಾಥ್‌ ಉದ್ಘಾಟಿಸುವರು. ಬೆಂಗಳೂರಿನ ಖ್ಯಾತ ಗಮಕಿ ಡಾ. ಎ.ವಿ. ಪ್ರಸನ್ನ ಅಧ್ಯಕ್ಷ ತೆ ವಹಿಸುವರು. ಹೊನ್ನಾವರದ ನಿವೃತ್ತ ಉಪನ್ಯಾಸಕ ಡಾ.ಶ್ರೀಪಾದ ಶೆಟ್ಟಿ, ಬೆಂಗಳೂರಿನ ರಂಗಕರ್ಮಿ ಪ್ರಕಾಶ್‌ ಬೆಳವಾಡಿ ಮತ್ತು ಬಂಟ್ವಾಳದ ಡಾ. ಅಜಕ್ಕಳ ಗಿರೀಶ್‌ ಭಟ್‌ ಉಪನ್ಯಾಸ ನೀಡುವರು. ರಾತ್ರಿ 8.30ರಿಂದ ಬೆಂಗಳೂರಿನ ಜತಿನ್‌ ನೃತ್ಯ ಅಕಾಡೆಮಿಯ ವಿದುಷಿ ಅರ್ಚನಾ ಪುಣ್ಯೇಶ್‌ ಮತ್ತು ಬಳಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ. ರಾಜ್ಯಮಟ್ಟದ ವಸ್ತು ಪ್ರದರ್ಶನವನ್ನು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಗಿರೀಶ್‌ ನಂದನ್‌ ಡಿ.8 ರಂದು ಉದ್ಘಾಟಿಸುವರು. ವಸ್ತು ಪ್ರದರ್ಶನ ಮಂಟಪದಲ್ಲಿಪ್ರತಿದಿನ ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮ. ಡಿ.10 ರಂದು ರಾತ್ರಿ 7 ರಿಂದ 10ರವರೆಗೆ ಅಮೃತವರ್ಷಿಣಿ ಸಭಾಭವನದಲ್ಲಿಸಂಗೀತ ನಿರ್ದೇಶಕ ಗುರುಕಿರಣ್‌ ಮತ್ತು ಬಳಗದವರಿಂದ ಗಾನ ವೈವಿಧ್ಯ.
ಉತ್ಸವಗಳು

ಡಿ.8 ರಂದು ಹೊಸಕಟ್ಟೆ ಉತ್ಸವ, 9 ರಂದು ಕೆರೆಕಟ್ಟೆ ಉತ್ಸವ, 10 ರಂದು ಲಲಿತೋದ್ಯಾನ ಉತ್ಸವ, 11 ರಂದು ಕಂಚಿಮಾರುಕಟ್ಟೆ ಉತ್ಸವ, 12 ರಂದು ಗೌರಿಮಾರುಕಟ್ಟೆ ಉತ್ಸವ, ಲಕ್ಷ ದೀಪೋತ್ಸವ, 13 ರಂದು ಸಂಜೆ 7 ರಿಂದ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಆವರಣದಲ್ಲಿಸಮವಸರಣ ಪೂಜೆ.

Related Articles

ಪ್ರತಿಕ್ರಿಯೆ ನೀಡಿ

Latest Articles