ವಿಜಯದಾಸರ ಕೃತಿಗಳ ಗಾಯನ ಸ್ಪರ್ಧೆ

ಬೆಂಗಳೂರು: ನವೆಂಬರ್ 23ರಂದು ಶ್ರೀ ವಿಜಯದಾಸರ ಆರಾಧನೆ ಪ್ರಯುಕ್ತ ದಾಸವಾಣಿ ಫೇಸ್ಬುಕ್ ಸಮೂಹ ಮತ್ತು ಹರಿದಾಸ ಸೇವಾ ಬಳಗದ ಜಂಟಿ ಆಯೋಜನೆಯಲ್ಲಿ ಶ್ರೀ ವಿಜಯದಾಸರು ವಿರಚಿತ ಹಾಡುಗಳ ಸ್ಪರ್ಧೆ ಏರ್ಪಡಿಸಲಾಗಿದೆ.
ಸ್ಪರ್ಧೆ 3 ವಿಭಾಗಗಳಲ್ಲಿ ನಡೆಯಲಿದೆ.
5ರಿಂದ 15 ವರ್ಷ, 16ರಿಂದ 30 ವರ್ಷ, ಹಾಗೂ 31 ವರ್ಷ ಮೇಲ್ಪಟ್ಟವರು ಈ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ನವೆಂಬರ್ 21ರಂದು ಸ್ಪರ್ಧೆಗೆ ಆಯ್ಕೆಯಾದ ಎಲ್ಲಾ ಸ್ಪರ್ಧಿಗಳ ಫೈನಲ್ಸ್ ದಾಸವಾಣಿ ಫೇಸ್‍ಬುಕ್ ಲೈವ್‍ನಲ್ಲಿ ಇರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ನವೆಂಬರ್ 18ರ ಒಳಗಾಗಿ ಹಾಡುಗಳನ್ನು ಕಳುಹಿಸಬಹುದು.
ಆಯ್ಕೆಯಾದವರ ಹೆಸರನ್ನು ದಾಸವಾಣಿ ಫೇಸ್ಬುಕ್‍ನಲ್ಲಿ ಪ್ರಕಟಿಸಲಾಗುವುದು. ಒಬ್ಬರು ಒಂದು ಹಾಡು ಹಾಡಲು ಅವಕಾಶ. ಹಾಡಿನ ವಿಡಿಯೋವನ್ನು ದಾಸವಾಣಿ ಫೇಸ್ಬುಕ್ ಸಮೂಹದಲ್ಲಿ ಅಪ್ಲೋಡ್ ಮಾಡಬೇಕು. ಕೇವಲ ವಿಜಯದಾಸರ (ವಿಜಯ ವಿಠಲ ಅಂಕಿತವಿರುವ) ಹಾಡುಗಳನ್ನು ಮಾತ್ರ ಹಾಡಬೇಕು. ಹಾಡಿನ ಜತೆ ಹೆಸರು ವಿಳಾಸ ಇರಲಿ. ಹೆಚ್ಚಿನ ವಿವರಗಳಿಗೆ 9481485074ನ್ನು ಸಂಪರ್ಕಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles