ದಾರಿದ್ರ್ಯ ದೂರಾಗಲು ಶುಷ್ಕ ನಾರಿಕೇಳವನ್ನುಈ ರೀತಿ ದಾನ ಮಾಡಿ

ಸಂಸ್ಕøತದಲ್ಲಿ ಕೊಬ್ಬರಿಯನ್ನು ಶುಷ್ಕ ನಾರಿಕೇಳ ಎಂದು ಕರೆಯುತ್ತಾರೆ. ಇದನ್ನು ಅಡುಗೆಗೆ, ಸಿಹಿತಿನಿಸು ಅಥವಾ ಎಣ್ಣೆ ಮಾಡುವುದಕ್ಕೆ ಮಾತ್ರ ಬಳಸುವುದಲ್ಲ. ಪೂಜೆ, ಹೋಮ, ಹವನಗಳಲ್ಲಿಯೂ ಬಹಳ ಮಹತ್ವ ಇದೆ. ಅಷ್ಟೇ ಅಲ್ಲ, ಒಣಕೊಬ್ಬರಿಯನ್ನು ದೇವರಿಗೆ ಅರ್ಪಿಸುವುದರಿಂದ ಸಕಲ ಕಷ್ಟಗಳು ಇಲ್ಲವಾಗುತ್ತವೆ,
ಒಣ ಕೊಬ್ಬರಿ ದಾನ ಮಾಡುವುದರಿಂದ ಮನೆಯಲ್ಲಿ ದಾರಿದ್ಯ್ರ ದೂರಾಗುತ್ತದೆ ಎನ್ನುವ ನಂಬಿಕೆಯೂ ಇದೆ.

ಕಡಲೆ ಹಿಟ್ಟಿನ ಜೊತೆಯಲ್ಲಿ ಒಣ ಕೊಬ್ಬರಿಯನ್ನು ಹಾಕಿ ಕುಲದೇವರಿಗೆ ನೈವೇದ್ಯ ಮಾಡಿ, ದಂಪತಿಗಳಿಗೆ ದಾನವನ್ನು ಮಾಡಿದ್ರೆ ಸ್ತ್ರೀ ದೋಷ, ಸ್ತ್ರೀ ಋಣ ಕಡಿಮೆಯಾಗುತ್ತದೆ. ಒಣ ಕೊಬ್ಬರಿ ಹಾಗೂ ಸಕ್ಕರೆ ಪುಡಿಯನ್ನು ಮಿಶ್ರಣ ಮಾಡಿ ಎಲ್ಲರಿಗೂ ಹಂಚಿದರೆ ಮಂಗಳ ಕಾರ್ಯಗಳು ಸುಸೂತ್ರವಾಗಿ ನೆರವೇರುತ್ತವೆ. ಈ ಕಾರಣಕ್ಕೆ ಲಗ್ನ ಪತ್ರಿಕೆ ಹಾಗೂ ವರ ಪೂಜೆಯ ಸಮಯದಲ್ಲಿ, ಶುಭ ಕಾರ್ಯದಲ್ಲಿ ಕೊಬ್ಬರಿ ಸಕ್ಕರೆ ಹಂಚುವ ಕ್ರಮ ಕೆಲವೆಡೆ ಇದೆ.

ದೇವರಿಗೆ ಒಣಕೊಬ್ಬರಿ ಅರ್ಪಿಸಿದರೆ ಸರ್ವ ಕಷ್ಟಗಳು ಸಕಲ ದೋಷಗಳು ನಿವಾರಣೆಯಾಗುತ್ತದೆಯಂತೆ. ಒಣ ಕೊಬ್ಬರಿಯನ್ನು ತಾಂಬೂಲದಲ್ಲಿ ಇಟ್ಟು ಕೆಂಪು ಅಥವಾ ಬಿಳಿ ಕಲ್ಲು ಸಕ್ಕರೆ ಸಮೇತ ಗುರುಗಳಿಗೆ ಅರ್ಪಿಸಿದರೆ ನಿಂತುಹೋಗಿರುವ ಕಾರ್ಯಗಳು ಬಹುಬೇಗ ಪೂರ್ಣಗೊಳ್ಳುವವು.

ಸಂಗ್ರಹ: ಹೆಚ್‍ಎಸ್. ರಂಗರಾಜನ್
ಪ್ರಧಾನ ಅರ್ಚಕರು, ಚನ್ನರಾಯ ಸ್ವಾಮಿ ದೇವಸ್ಥಾನ, ಹುಸ್ಕೂರು, ಬೆಂಗಳೂರು

Related Articles

ಪ್ರತಿಕ್ರಿಯೆ ನೀಡಿ

Latest Articles