
ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ, ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಭಗವದ್ಗೀತೆ ಅಭಿಯಾನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಭಗವದ್ಗೀತಾ ಆನ್‌ಲೈನ್ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ. ಗೀತಾ ಕಂಠಪಾಠ ಹಾಗೂ ಭಾಷಣ ಸ್ಪರ್ಧೆ ಇರಲಿದೆ.
ಹಿರಿಯ ಪ್ರಾಥಮಿಕ (5,6,7 ನೇ ತರಗತಿ), ಪ್ರೌಢಶಾಲೆ (8,9,10ನೇತರಗತಿ), ಪದವಿಪೂರ್ವ ಪಿಯು (1ಮತ್ತು 2) ಈ ಮೂರು ವಿಭಾಗಗಳಲ್ಲಿ ನಡೆಯಲಿದೆ. ಎಲ್ಲ ವಿದ್ಯಾರ್ಥಿಗಳಿಗೆ 3ನೇ ಅಧ್ಯಾಯ (ಕರ್ಮಯೋಗ) ವನ್ನು ನಿಗದಿಪಡಿಸಲಾಗಿದೆ.
ಭಾಷಣ ಸ್ಪರ್ಧೆಯ ವಿಷಯ
ಹಿರಿಯ ಪ್ರಾಥಮಿಕ ೫,೬,೭ ನೇ ತರಗತಿ ವಿದ್ಯಾರ್ಥಿಗಳಿಗೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಯ ವಿಷಯ ‘ಭಗವದ್ಗೀತೆಯಿಂದ ಉತ್ತಮ ಸಮಾಜ ನಿರ್ಮಾಣ’
ಪ್ರಾಢಶಾಲಾ ವಿದ್ಯಾರ್ಥಿಗಳಿಗೆ “ಭಾರತ ಸ್ವಾತಂತ್ರ‍್ಯ ಸಂಗ್ರಾಮದ ಮೇಲೆ ಭಗವದ್ಗೀತೆಯ ಪ್ರಭಾವ’.
ಭಾಷಣ ಸ್ಪರ್ಧೆಗೆ 4 ನಿಮಿಷದ ಸಮಯಾವಕಾಶ ಇರುತ್ತದೆ.
ಸ್ಪರ್ಧೆಯ ನಿಯಮಗಳು
*ಈ ಎರಡು ಸ್ಪರ್ಧೆಗಳಿಗೆ ಒಂದು ವಿದ್ಯಾಸಂಸ್ಥೆಯಿಂದ ಒಂದು ಸ್ಪರ್ಧೆಗೆ ಒಬ್ಬರಂತೆ ಒಟ್ಟು 2 ವಿದ್ಯಾರ್ಥಿಗಳು ಭಾಗವಹಿಸಬಹುದು.
*ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ, ಸ್ಥಾನ ಪಡೆದವರು ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆಯುತ್ತಾರೆ.
ಸ್ಪರ್ಧೆಯ ದಿನಾಂಕ
ಡಿಸೆಂಬರ್ 12, 2020: ತಾಲ್ಲೂಕು ಮಟ್ಟದ ಸ್ಪರ್ಧೆ
ಡಿಸೆಂಬರ್ 16, 2020: ಜಿಲ್ಲಾ ಮಟ್ಟದ ಸ್ಪರ್ಧೆ
ಡಿಸೆಂಬರ್ 20, 2020: ರಾಜ್ಯಮಟ್ಟದ ಸ್ಪರ್ಧೆ
ಭಾಗವಹಿಸುವ ಸ್ಪರ್ಧಿ ವಿಡಿಯೋವನ್ನು ವಾಟ್ಸಾಪ್ ಮಾಡಬೇಕು. ಸ್ಪರ್ಧಾಳು ತಮ್ಮ ಹೆಸರು ಶಾಲೆಯ ಹೆಸರು, ತರಗತಿ, ಊರಿನ ವಿವರವನ್ನು ನಮೂದಿಸಿರಬೇಕು.
ಎಲ್ಲಾ ಸ್ಪರ್ಧೆಗೆ ನಿಗದಿ ಪಡಿಸಿದ ಸಮಯ: ಬೆಳಗ್ಗೆ 10- ಸಂಜೆ 4.
ಹೆಚ್ಚಿನ ಮಾಹಿತಿಗೆ: ವೆಂಕಟ್ರಮಣ ಹೆಗಡೆ-8277383500, ಆನಂದ ನಾಯ್ಕ ಕುಮಟಾ-9448729236 ಅಥವಾ ಪ್ರೊ.ಕೆ.ವಿ ಭಟ್ಟ ಶಿರಸಿ 9449500274ನ್ನು ಸಂಪರ್ಕಿಸಬಹುದು.
























