ಕಾರ್ತಿಕ ಮಾಸದ ದಾನಗಳು

ಕಾರ್ತಿಕ ಮಾಸದಲ್ಲಿ ಯಾವ ದಾನ ಮಾಡಿದರೆ ಶ್ರೇಷ್ಠ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

ಕಾರ್ತಿಕ ಮಾಸದಲ್ಲಿ ಅತ್ಯಂತ ಶ್ರೇಷ್ಠದಾನ ಅಂದರೆ ದೀಪ ದಾನ ಮತ್ತು ಕಂಚಿನ ಪಾತ್ರೆಯಲ್ಲಿಆಕಳ ತುಪ್ಪವನ್ನು ಹಾಕಿ ದಾನ ಕೊಡುವುದು. ಅದಲ್ಲದೆ ಸಕ್ಕರೆ, ಬೆಲ್ಲ, ತುಪ್ಪ, ಇವುಗಳನ್ನುತಮ್ಮ ಶಕ್ತಿಯನುಸಾರ ದೇವಸ್ಥಾನಕ್ಕೆ ನೀಡಬಹುದು.

ಕೆಲವರು ಈ ಕಾರ್ತಿಕ ಮಾಸದಲ್ಲಿ ತೈಲತ್ಯಾಗ ವ್ರತ ಮಾಡುತ್ತಾರೆ. ಅಂದರೆ ಕಾರ್ತಿಕ ಮಾಸವಿಡೀ ಎಣ್ಣೆಯಿಲ್ಲದ ಅಡುಗೆಯನ್ನು ಊಟ ಮಾಡುತ್ತಾರೆ. ಅಂತವರು ಕಂಚಿನ ಪಾತ್ರೆಯಲ್ಲಿ ಎಳ್ಳನ್ನು ತುಂಬಿ ದಾನ ಮಾಡಬೇಕು.

ಇನ್ನು ಕೆಲವರು ಮೌನ ಭೋಜನ ವ್ರತ ಮಾಡುತ್ತಾರೆ, ಅಂದರೆ ಊಟ ಮುಗಿಯುವವರೆಗೂ ಮೌನದಲ್ಲೇ ಇರಬೇಕು. ಅವರು ಎಳ್ಳು ತುಂಬಿದ ಪಾತ್ರೆ ಜೊತೆಗೆ ದೇವರ ಪೂಜೆಗೆ ಉಪಯೋಗಿಸುವ ಘಂಟೆಯನ್ನು ದಾನ ಮಾಡಬೇಕು. ಉದ್ದಿನ ಜೊತೆಗೆ ಕುಂಬಳಕಾಯಿ ದಾನ ಕೂಡ ಶ್ರೇಷ್ಠವಾದದ್ದು.

ಕೆಲವರು ಫಲವನ್ನು ತಿನ್ನದೆ ವ್ರತವನ್ನು ಮಾಡುತ್ತಾರೆ. ಬ್ರಾಹ್ಮಣರಿಗೆ ತಟ್ಟೆಯಲ್ಲಿಟ್ಟು ಎಲ್ಲತರಹದ ಫಲದಾನ ಮಾಡಬೇಕು.

ಯಾರು ಧಾನ್ಯಗಳನ್ನು ವರ್ಜ್ಯ ಮಾಡಿರುತ್ತಾರೋ ಅವರು ಆ ಎಲ್ಲ ತರಹದ ಧಾನ್ಯಗಳನ್ನು ದಾನಮಾಡಬೇಕು. ಅಂದರೆ ಆ ವ್ರತಗಳ ಫಲವನ್ನು ಪಡೆಯುತ್ತಾರೆ.

ದೀಪದಾನ ಮಾಡುವಿರಾದರೆ ಒಂಟಿ ದೀಪವನ್ನು ಕೊಡಬೇಡಿ. ನಿಮಗೆ ದುಃಖ ದಾರಿದ್ರ್ಯ ಬರುತ್ತದೆ. ಯಾವುದೇ ದೀಪದಾನ ಮಾಡಿ ಜೋಡಿಯಾಗಿಯೇ ಕೊಡಿ. ಅದರಲ್ಲಿ ಎಳೆಬತ್ತಿ ಸ್ವಲ್ಪ ತುಪ್ಪವನ್ನು ಹಾಕಿ ಅರಿಷಿಣ ಕುಂಕುಮ ಇರಿಸಿ ಕೊಡಿ. ಖಾಲಿ ದೀಪವನ್ನು ಕೊಡಬೇಡಿ.

ಉಪ್ಪು ದಾನವನ್ನು ಕೊಡಬೇಕು ಅಂತ ಹೇಳುತ್ತದೆ ಶಾಸ್ತ್ರ. ಆದರೆ ಯಾರೂ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಅದನ್ನು ದೇವಸ್ಥಾನಕ್ಕೆ ಅನ್ನಸಂತರ್ಪಣೆ ನಡೆಯುವಲ್ಲಿ ನೀಡಬಹುದು.

ಗೋದಾನ ಅತ್ಯಂತ ಶ್ರೇಷ್ಠದಾನ. ಗೋದಾನ ಕೊಡುವ ಸಾಮರ್ಥ್ಯ ಇದ್ದವರು ಖಂಡಿತ ಮಾಡಿ. ಆಗದೆ ಇದ್ದವರು ಬೆಳ್ಳಿ, ಹಿತ್ತಾಳೆ, ತಾಮ್ರದ ಆಕಳು ದಾನ ಮಾಡಬಹುದು. ವಿಷ್ಣು ಪಾದ ದಾನ, ಗಂಗಾಜಲ ದಾನ, ಸಾಲಿಗ್ರಾಮ ದಾನ, ಶಂಖದಾನ, ಪಾರಿಜಾತ ಹೂವು ದಾನ, ಬೆಳ್ಳಿಯಿಂದ ತಯಾರಿಸಿದ ಹೂವಿನ ಹಾರಗಳನ್ನು ವಿಷ್ಣುವಿಗೆ ಅರ್ಪಿಸುವುದು ಕೂಡಾ ಶ್ರೇಷ್ಠ ದಾನ ಎಂಬ ನಂಬಿಕೆ ಇದೆ.

ಮಾಹಿತಿ: ಎಚ್‌ಎಸ್ ರಂಗರಾಜನ್, ಅರ್ಚಕರು ಶ್ರೀ ಚನ್ನರಾಯ ಸ್ವಾಮಿ ದೇಗುಲ ಹುಸ್ಕೂರು, ಬೆಂಗಳೂರು

Related Articles

ಪ್ರತಿಕ್ರಿಯೆ ನೀಡಿ

Latest Articles