ಬಣ್ಣಗಳು ಹಲವಾದರೇನು ತರುವುದು ಮಾತ್ರ ಸಂತಸವನು ರಂಗುರಂಗಿನಾಟದಿ ಮೈಮರೆತೆವೆಲ್ಲ ಸದಾ ಹೀಗೇ ಇರಲಿ ಒಗ್ಗಟ್ಟಿನ ಬಲ ಬಣ್ಣಗಳಿಗಿಲ್ಲದ ಭೇದ ನಮಗೇಕೆ ಹೂವುಗಳಿಗಿಲ್ಲದ ಹಗೆ ನಮಗೇಕೆ ಬಣ್ಣದ ಬಣ್ಣದ ಹೂಗಳಂತೆ ಅರಳುತ ನಡೆಯಿರಿ ನಾವೆಲ್ಲಾ ಒಂದೇ ಎನ್ನುತ ರಂಗಿನೋಕುಳಿಯಲಿ ಮಿಂದೆದ್ದು ಸಮಾನತೆಯ ಹೊದಿಕೆ ಹೊದ್ದು ಮನದ ಮೈಲಿಗೆಯನು ಕಳೆದು ಬಾಳೋಣ ಭ್ರಾತೃತ್ವವನು ಬೆಸೆದು ರಾಮ ಶ್ಯಾಮ ಅಲ್ಲಾಹ ಜೀಸಸ್ ಪ್ರೀತಿಯ ಹಂಚಲು ಹೇಳಿಹರು ಪ್ರೇಮದಲಿ ಜೀವಿಸಲು ತಿಳಿಸಿಹರು ಇದ ಮರೆತು ಮೂರ್ಖರಾಗಿಹೆವು ನಾವು ಹೋಳಿಯೊಂದಿಗೆ ಬೆಸೆಯಲಿ ಬಂಧ ಭಾರತಾಂಬೆ ಪಡುವಳು ಆನಂದ ಎಲ್ಲರೂ ಒಂದಾಗಿ ಬದುಕೋಣ ಅಣ್ಣ ಮಾಸಲಿ ಮನದ ಕೊಳೆಯ ಬಣ್ಣ. *ರಚನೆ ಶ್ರೀಮತಿ ಜ್ಯೋತಿ ಕೋಟಗಿ ಶಿಕ್ಷಕಿ ಸ ಮಾ ಪ್ರಾ ಶಾಲೆ ತಲ್ಲೂರ ತಾ ಸವದತ್ತಿ ಜಿಲ್ಲೆ ಬೆಳಗಾವಿ*
























