- ಕೃಷ್ಣಪ್ರಕಾಶ್ ಉಳಿತ್ತಾಯ
ಲಕ್ಷö್ಯರೋಮಲತಾಧಾರತಾಸಮುನ್ನೇಯಮಧ್ಯಮಾ|
ಸ್ತನಭಾರದಲನ್ಮಧ್ಯಪಟ್ಟಬಂಧವಲಿತ್ರಯಾ||
ತಾಯಿಯ ಅಸಾಧಾರಣವಾದರೂ ಪಾತಿಶಯವನ್ನು ವರ್ಣಿಸುವ ಬಗೆ ನೋಡಿ:
ತಾಯಿಯ ಕಟಿ ಪ್ರದೇಶವನ್ನು ವರ್ಣಿಸುತ್ತಿದೆ ಈ ಹಾಡು. ತಾಯಿಯ ಅತ್ಯಂತ ಸಣ್ಣದಾದ ಮಧ್ಯಪ್ರದೇಶವು ಈ ಮೊದಲಿನ ಪದ್ಯದಲ್ಲಿಅಂದರೆ “ನಾಭ್ಯಾಲವಾಲರೋಮಾಲೀಲತಾಫಲಕುಚದ್ವಯೀ” ಎಂಬ ನಾಮದಲ್ಲಿ ಹೇಳಿದ ನಾಭಿಯಿಂದ ಹೊರಟ ರೋಮಾಲಿಗಳಿಗೆ ಆಧಾರವಾಗಿರುವ ಸಣ್ಣಕಟಿಯನ್ನು ಋಷಿ ಕಾಣುತ್ತಾನೆ. ಹಾಗಾಗಿ “ಲಕ್ಷö್ಯರೋಮಲತಾಧಾರತಾಸಮುನ್ನೇಯಮಧ್ಯಮಾ”.
ಮುಂದಿನ ಹಾಡಿನಲ್ಲಿ“ಸ್ತನಭಾರದಲನ್ಮಧ್ಯಪಟ್ಟಬಂಧವಲಿತ್ರಯಾ”ತಾಯಿಯ ವಕ್ಷಸ್ಥಲದ ಭಾರವನ್ನು ಹೊರುತ್ತಿರುವ ಸಣ್ಣ ನಡುವಿಗೆ ಆಧಾರವಾಗಿರುವಂತೆ ಭಾರವನ್ನು ಹೊರುವಲ್ಲಿ ಸಹಾಯವಾಗುವಂತೆ ಇರುವ ತಾಯಿಯ ಉದರ ಭಾಗದಲ್ಲಿ ಉದಿಸಿರುವ ಮೂರು ಒಂದಕ್ಕೊಂದು ತಾಕದಂತಿರುವ ಮೂರು ಪಟ್ಟಿಗಳು (ವಲಿತ್ರಯಗಳು) ಕನಕದ ಪಟ್ಟಿಗಳಂತೆ ಕಂಗೊಳಿಸುತ್ತಿವೆ.
ಅದೆಷ್ಟು ಸೂಕ್ಷö್ಮವಾಗಿ ನೋಡಿದ್ದಾರೆ ಋಷಿ. ತಾಯಿಯ ಪ್ರತಿಯೊಂದು ಅಂಗಗದ ಲಾವಣ್ಯವೂ ವ್ಯರ್ಥವಲ್ಲ. ಅವುಗಳನ್ನು ಕಂಡ ಋಷಿಗೆ ಹುಟ್ಟಿದ್ದುಕಾವ್ಯದ ಹಾಗಿರುವ ಸ್ತೊತ್ರಗಳು. ತನ್ನನ್ನು ನೋಡಿದವರ ದೃಷ್ಟಿಯನ್ನು ಬದಲಾವಣೆ ಮಾಡುತ್ತಾಳೆ ಎಂಬುದೇ ಇಲ್ಲಿ ಮನನ ಮಾಡಬೇಕಾದದ್ದು.
ಜೀವನದ ದೃಷ್ಟಿಗೆ ಔನ್ನತ್ಯವನ್ನುಕೊಟ್ಟು ಕಾಪಾಡುವವಳು ತಾಯಿ. ಇದು ಇಲ್ಲಿವ ವಿವಕ್ಷೆ. ಒಂದೊಮ್ಮೆಗೆ ತಾಯಿಯ ಮಡಿಲಿಗೆ ನಮ್ಮನ್ನು ನಾವು ಒಪ್ಪಿಸಿಕೊಂಡರೆ ನಾವು ನೋಡುವದೃಷ್ಟಿ, ಕಾಣುವ ನೋಟ ಮತ್ತು ಆಡುವ ಮಾತು ಇವೆಲ್ಲವೂ ತಾಯಿಕೊಟ್ಟ ಪ್ರಸಾದದಂತೆ ಪರಿಶುದ್ಧವಾಗಿರುತ್ತದೆ. ಶೀಲ-ಅಶ್ಲೀಲವೆಂಬ ಬೇಧವಿರದೆ ಕಂಡಂತೆ ಕಾಣುತ್ತೇವೆ; ನೋಡಿಸಿದಂತೆ ನೋಡುತ್ತೇವೆ ಆಡಿಸಿದಂತೆ ಆಡುತ್ತೇವೆ. ಅಲ್ಲಿನ ನೋಟದಲ್ಲಿ ಬರೀಯ ಭಕ್ತಿ-ಪ್ರೇಮವೇ ಮಡುಗಟ್ಟಿರುತ್ತದೆ. ತಾತ್ವಿಕ ನಿರ್ಣಯಗಳ (ದ್ವೆöÊತಾದ್ವೆöÊತ) ಹಂಗಿಗೆ ಒಳಪಡದೆ ಪರಿಶುದ್ಧ ಪರಿಶೀಲನ; ಮಗುಸಹಜ ಮಾತುಗಳಲ್ಲಿ ನಾವು ಮುಳುಗಾಡುತ್ತೇವೆ. ಲಲಿತಾ ಸಹಸ್ರದ ಹಾಡುಗಳನ್ನು ಹಾಡುವಾಗ ಇದು ಅಲ್ಪ-ಸ್ವಲ್ಪವಾದರೂ ಅನುಭವಕ್ಕೆ ಬಾರದಿರದು. ಬಂದರೆ ಅದೇ ಆಕೆಯ ಪ್ರಸಾದ.