ಸಿಹಿ ಶಂಕರಪೋಳಿ ಮಾಡೋದು ಎಷ್ಟು ಸುಲಭ

ಬೇಕಾಗುವ ಸಾಮಗ್ರಿಗಳು
  • ಮೈದಾ – 4 ಕಪ್
  • ಸಕ್ಕರೆ – 1 ಕಪ್
  • ಹಾಲು – 1/2 ಕಪ್
  • ಏಲಕ್ಕಿ ಪುಡಿ – 1 ಚಮಚ
  • ಉಪ್ಪು – ಚಿಟಿಕೆ
  • ಬೆಣ್ಣೆ – 1/2 ಕಪ್
ಮಾಡುವ ವಿಧಾನ

ಸಕ್ಕರೆ ಮತ್ತು ಹಾಲನ್ನು ಬೆರೆಸಿ ಒಲೆ ಮೇಲಿಟ್ಟು ಕರಗಿಸಿಕೊಳ್ಳಿ. ಪಾಕ ಬರುವ ಹಾಗೆ ಕಾಯಿಸಬೇಡಿ. ಕರಗಿಸಿದ ಮಿಶ್ರಣವನ್ನು ತಣ್ಣಗಾಗಲು ಬಿಡಿ. ಇನ್ನೊಂದು ಕಡೆ ಬೆಣ್ಣೆಯನ್ನು ಕರಗಿಸಿಕೊಳ್ಳಿ. ಒಂದು ಬಟ್ಟಲಿಗೆ ಮೈದಾ ಹಿಟ್ಟು, ಏಲಕ್ಕಿ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ, ನಂತರ ಬೆಣ್ಣೆಯನ್ನು ಸೇರಿಸಿ ಕಲಸಿಕೊಳ್ಳಿ. ಸಕ್ಕರೆ ಹಾಕಿ ಬಿಸಿ ಮಾಡಿಟ್ಟುಕೊಂಡಿದ್ದ ಹಾಲನ್ನು ಸ್ವಲ್ಪ ಸ್ವಲ್ಪವಾಗಿ ಹಾಕಿಕೊಂಡು, ಪೂರಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ. ನಾದಿಕೊಂಡ ಹಿಟ್ಟನ್ನು ಅರ್ಧ ಗಂಟೆ ನೆನೆಯಲು ಬಿಡಿ. ನಂತರ ಹಿಟ್ಟನ್ನು ದಪ್ಪಗೆ ಲಟ್ಟಿಸಿ, ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ, ಎಣ್ಣೆಯಲ್ಲಿ ಹಾಕಿ ಕರಿಯಬೇಕು.

Related Articles

ಪ್ರತಿಕ್ರಿಯೆ ನೀಡಿ

Latest Articles