ಆಯುರ್ವೇದ ಶಾಸ್ತ್ರದ ಪ್ರಕಾರ ತುಪ್ಪ ಅತ್ಯಂತ ಶ್ರೇಷ್ಠ ಪದಾರ್ಥ. ಆಯುರ್ವೇದದ ಪ್ರಕಾರ ಹಸುವಿನ ಹಾಲಿನಿಂದ ಮಾಡಿದ ತುಪ್ಪವನ್ನು ಹಲವು ರೂಪದಲ್ಲಿ ಔಷಧವಾಗಿ ಬಳಕೆ ಮಾಡುತ್ತಾರೆ.
●ಜಿಡ್ಡಿನ ಪದಾರ್ಥಗಳ ಪಟ್ಟಿಯಲ್ಲಿ ತುಪ್ಪಕ್ಕೆ ಅಗ್ರಸ್ಥಾನ. ಕಾರಣ, ಇದರಲ್ಲಿ ಇರುವ ಶ್ರೇಷ್ಠ ಗುಣಕರ್ಮಗಳು.ನಮ್ಮ ದೇಹಕ್ಕೆ ತುಪ್ಪ ಅತ್ಯಂತ ಹಿತಕಾರಿ.
●ತುಪ್ಪಕ್ಕೆ ಆಜ್ಯ ಅಥವಾ ಘೃತ ಎಂದು ಕರೆಯುತ್ತಾರೆ
●ತುಪ್ಪದಲ್ಲಿ ಒಮೇಗಾ 3, ವಿಟಮಿನ್ ಎ, ಡಿ, ಇ ಹಾಗೂ ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿರುತ್ತದೆ. ●ದಿನನಿತ್ಯ ತುಪ್ಪದ ಸೇವನೆಯಿಂದ ಜೀರ್ಣಕ್ರಿಯೆ ವೃದ್ಧಿಸುವುದು ಹಾಗೂ ಹೊಟ್ಟೆ ಮತ್ತು ಕರುಳಿನ ಕ್ಯಾನ್ಸರ್ ತಡೆಗಟ್ಟಲು ಸಹಕಾರಿಯಾಗಿದೆ.
●ಒಮೆಗಾ -3 ಕೊಬ್ಬಿನಾಮ್ಲ ತುಪ್ಪದಲ್ಲಿ ಸಮೃದ್ಧವಾಗಿದೆ. ನರಮಂಡಲದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಆಯುರ್ವೇದ ಔಷಧಿಯ ರೂಪದಲ್ಲಿ ಬಳಸುತ್ತಾರೆ. ನರಮಂಡಲಕ್ಕೆ ರಕ್ಷಾಕವಚವಿದ್ದಂತೆ. ನಿಯಮಿತ ಹಾಗೂ ನಿತ್ಯ ಸೇವನೆಯಿಂದ ನಮ್ಮ ನರಮಂಡಲದ ಕಾರ್ಯಕ್ಷಮತೆ ಹೆಚ್ಚುತ್ತದೆ.
●ತುಪ್ಪದ ಸೇವನೆಯಿಂದ ಮೂಳೆಗಳು ಹಾಗೂ ಸಂಧಿಗಳಿಗೆ ಉತ್ತಮ ಪೋಷಣೆ ಸಿಗುವುದಲ್ಲದೇ ಚೆನ್ನಾಗಿ ಲೂಬ್ರಿಕೇಷನ್ ಆಗುವುದು. ಇದರಿಂದ ಸಂಧಿ ಸ್ನಾಯುಗಳ ನೋವು ಹಾಗೂ ಸೆಳೆತ ತಡೆಗಟ್ಟಬಹುದು.
●ತುಪ್ಪದಲ್ಲಿರುವ ಒಮೇಗಾ 3 ಅಂಶದಿಂದ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು.
●ಬಹಳ ಮುಖ್ಯವಾಗಿ ದಿನನಿತ್ಯದ ತುಪ್ಪ ಸೇವನೆಯಿಂದ ಪಿತ್ತಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ಯಶಸ್ವಿಯಾಗಿ ನಿವಾರಿಸಿ ತಡೆಗಟ್ಟಬಹುದಾಗಿದೆ.
●ಒಟ್ಟಿನಲ್ಲಿ, ಯಾರಿಗೆ ದೃಷ್ಟಿ ದೋಷ ಬೇಡವೋ, ಒಳ್ಳೆಯ ಮೈಕಾಂತಿ ಬೇಕೆನಿಸುತ್ತದೋ, ಉತ್ತಮ ಜೀರ್ಣಕ್ರಿಯೆ ಹಾಗೂ ಹೃದಯದ ಕಾಯಿಲೆಗಳನ್ನು ತಡೆಗಟ್ಟಲು ಬಯಸುವವರು, ಉನ್ನತ ಮಟ್ಟದ ನೆನಪಿನ ಶಕ್ತಿ ಹಾಗೂ ಬುದ್ಧಿ ಚುರುಕಾಗಿಡಲು ಬಯಸುವವರು ದಿನನಿತ್ಯ ತಪ್ಪದೇ ತುಪ್ಪವನ್ನು ಸೇವಿಸಬೇಕು.
(ಸಂಗ್ರಹ: ಎಚ್.ಎಸ್.ರಂಗರಾಜನ್)