ಕುಕ್ಕೆಸುಬ್ರಹ್ಮಣ್ಯ ಪುಣ್ಯಕ್ಷೇತ್ರ ದರ್ಶನಕ್ಕೆ ಬರುವವರಿಗೆ ಇನ್ಮುಂದೆ ಪ್ರಕೃತಿ ದರ್ಶನ

ಕುಕ್ಕೆಶ್ರೀ ಸುಬ್ರಹ್ಮಣ್ಯ ಪುಣ್ಯಕ್ಷೇತ್ರ ದರ್ಶನಕ್ಕೆ ಬರುವವರು ಇನ್ಮುಂದೆ ಸುಂದರ ಪ್ರಕೃತಿ ದರ್ಶನವನ್ನೂ ಮಾಡಬಹುದು. ಬೆಂಗಳೂರಿನಿ0ದ ರೈಲಿನಲ್ಲಿ ಬಂದು ಶ್ರೀದೇವರ ದರ್ಶನ ಪಡೆಯುವವರು ಸಕಲೇಶಪುರ, ಸುಬ್ರಹ್ಮಣ್ಯದ ಹಾದಿಯುದ್ದಕ್ಕೂ ಹಚ್ಚ ಹಸಿರು ಸಿರಿಯನ್ನು ಕಣ್ತುಂಬಿಕೊಳ್ಳಬಹುದು.


ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲಬಾರಿಗೆ ಗಾಜಿನ ಛಾವಣೆ ಹೊಂದಿರುವ ಆಕರ್ಷಕ ವಿನ್ಯಾಸದ ವಿಸ್ಟಾಡೋಮ್ ಬೋಗಿಯ ರೈಲು ಪ್ರಯಾಣ ಆರಂಭಿಸಲಿದೆ. ಮಳೆಗಾಲದಲ್ಲಿ ಕಾಡಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದು ಅಂದರೆ ಅದು ಪ್ರವಾಸಿಗರ ಪಾಲಿಗೆ ಸ್ವರ್ಗಸುಖ. ಅಂತಹ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ ಅವಕಾಶ ಜುಲೈ 11 ರಿಂದ ಲಭ್ಯವಾಗಲಿದೆ.
ಬೆಂಗಳೂರು ಮಂಗಳೂರು ನಡುವೆ ಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗೆ ಹಾದುಹೋಗುವ 55 ಕಿಮೀ ರೈಲುಪ್ರಯಾಣ ಪ್ರಯಾಣಿಕರಿಗೆ ಪ್ರಕೃತಿಯ ಸೊಬಗಿನ ಮುದ ನೀಡಲಿದೆ.


ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವವರು ಕೂಡಾ ಈ ಸೇವೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಪ್ರಕೃತಿಯ ರಮಣೀಯ ದೃಶ್ಯವನ್ನು ಮನಸಾರೆ ಆಸ್ವಾದಿಸಬಹುದು.
ವಾರಕ್ಕೆ ಮೂರು ಬಾರಿ ಯಶವಂತಪುರ ಕಾರವಾರ ವಿಶೇಷ ರೈಲು, ಯಶವಂತಪುರ – ಮಂಗಳೂರು ಹಾಗೂ ಮಂಗಳೂರು ಜಂಕ್ಷನ್ -ಯಶವಂತಪುರ ಎಕ್ಸ್ಪ್ರೆಸ್‌ನಲ್ಲಿ ವಿಸ್ಟಾಡೋಮ್‌ಬೋಗಿ ಸೇರ್ಪಡೆಗೊಳ್ಳಲಿದೆ.

ವಿಸ್ಟಾಡೋಮ್ ಬೋಗಿಗೆ ಮುಂಗಡ ಬುಕ್ಕಿಂಗ್ ಜುಲೈ 7ರಿಂದ ಆರಂಭಗೊ0ಡಿದೆ. ಟಿಕೆಟ್ ದರ ಬೆಂಗಳೂರಿನಿ0ದ ಮಂಗಳೂರಿಗೆ ರೂ.1470.
ಯಶವಂತ ಕಾರವಾರ ವಿಶೇಷ ರೈಲು( ನಂ.06211/06212)
ಯಶವ0ತಪುರ ಮಂಗಳೂರು ಜಂಕ್ಷನ್ (06575/06576)
ಒಂದು ಕೋಚ್‌ನಲ್ಲಿ 44 ಮಂದಿಗೆ ಆಸನ ವ್ಯವಸ್ಥೆ ಇದೆ. 2 ವಿಸ್ಟಾಡೋಮ್ ಕೋಚ್ ಇದ್ದು 88 ಪ್ರಯಾಣಿಕರು ಏಕಕಾಲದಲ್ಲಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles