ಮಾಧವ ನಿನ್ನ ಕೊಳಲ ನಾದಕೆ ಮನಸೋತಳು ಬೃಂದಾವನ ಕನ್ನಿಕೆ ಗೋಪಾಲ ನಿನ್ನ ಮೋಹಕ ರಾಗಕೆ ಜಗವ ಮರೆತು ನಿಂತಳು ಗೋಪಿಕೆ// ಪ್ರೇಮದ ಸುಧೆಯ ನೀ ಬೀರಲು ತನಿಯಿತು ರಾಧೆಯ ಒಡಲು ಮುರುಳಿ ಮುಕುಂದ ಗೋಪಾಲಕೃಷ್ಣ ಹೆಂಗಳೆಯರ ಮನಕದ್ದ ಕಳ್ಳ ಕೃಷ್ಣ// ರಾಧಾ ಕೃಷ್ಣ ನಿಮ್ಮ ಪ್ರೀತಿ ಅಮರ ನಿಶ್ಕಲ್ಮಶ ಪ್ರೇಮ ಭಾವ ಸುಮಧುರ ಇವರ ಪ್ರೇಮದೊಡನಾಟ ನೋಡಲು ಸುಂದರ ಇವರಿರ್ವರ ನೃತ್ಯ ರಮ್ಯ ಮನೋಹರ// ತುಳಸಿ ಪ್ರೀಯ ನೀನು ಗೋವಿಂದ ನವಿಲು ಗರಿ ಧರಿಸಿದ ಮುಕುಂದ ರಾಧಾ ಹೃದಯವಾಸ ಗೋವಿಂದ ನಿನ್ನ ಹೃದಯದಿ ರಾಧೆ ಇರುವಳು ಮುಕುಂದ// ತನುಮನದಿ ರಾಧೆಯದೆ ಕನವರಿಕೆ ಭಾಮಾ ರುಕ್ಮಿಣಿಯರ ವರಸಿದಿ ಏಕೆ ಗೋಕುಲದೆಡೆಗೆ ನಿನ್ನ ಪಯಣ ಕಾದಿಹಳು ರಾಧೆ ಪ್ರತೀಕ್ಷಣ//
* ಜ್ಯೋತಿ ಕೋಟಗಿ,
ಶಿಕ್ಷಕಿ ಸ ಮಾ ಪ್ರಾ ಶಾಲೆ,
ತಲ್ಲೂರ ಬೆಳಗಾವಿ ಜಿಲ್ಲೆ