ಲಕ್ಷ್ಮೀ ದೇವಿ ಸಂಪತ್ತಿನ ದೇವತೆ. ಲಕ್ಷ್ಮೀಯ ವಿವಿಧ ರೂಪಗಳನ್ನು ಬೇರೆ ಬೇರೆ ದೇಗುಲಗಳಲ್ಲಿ ಪೂಜಿಸಲಾಗುತ್ತದೆ. ಐಶ್ವರ್ಯ, ಸಮೃದ್ಧಿ ಸಂಪತ್ತಿಗಾಗಿ ಲಕ್ಷ್ಮೀ ದೇವಿಯನ್ನು ಪೂಜಿಸಲಾಗುತ್ತದೆ.
ಲಕ್ಷ್ಮೀ ನಾರಾಯಣ ದೇಗುಲ ದೆಹಲಿ: 1939ರಲ್ಲಿ ನಿರ್ಮಾಣಗೊಂಡಿರುವ ಈ ದೇಗುಲದಲ್ಲಿ ಲಕ್ಷ್ಮೀ ದೇವಿ ಹಾಗೂ ವಿಷ್ಣು ಭಗವಾನ್ ವಿರಾಜಮಾನರಾಗಿದ್ದಾರೆ. ಉದ್ಯಮಿ ವಿಜಯ್ ತ್ಯಾಗಿ ಅವರಿಂದ ನಿರ್ಮಾಣಗೊಂಡಿದೆ. ಮಹಾತ್ಮಾ ಗಾಂೀಜಿ ಈ ದೇಗುಲವನ್ನು ಉದ್ಘಾಟಿಸಿದ್ದು, ಇಂದಿಗೂ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ದೀಪಾವಳಿ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಈ ದೇಗುಲ ಸಂಕೀರ್ಣದಲ್ಲಿ ಗಣೇಶ, ಶಿವ, ಹನುಮ, ದುರ್ಗೆ ಹಾಗೂ ಬೌದ್ಧರ ಕೆಲವು ಮಂದಿರಗಳಿವೆ.
ಹೋಗುವುದು ಹೇಗೆ?
ಶ್ರೀಪುರಂ ಗೋಲ್ಡನ್ ಟೆಂಪಲ್, ವೆಲ್ಲೂರು: ತಮಿಳುನಾಡಿನ ವೆಲ್ಲೂರ್ನ ಮಲೈಕೋಡಿ ಬೆಟ್ಟದ ಮೇಲಿರುವ ಶ್ರೀಲಕ್ಷೀ ದೇಗುಲ ವೈಶಿಷ್ಟ್ಯಪೂರ್ಣವಾಗಿದೆ. ದೇಗುಲ ಹಾಗೂ ಇದರ ಗೋಪುರವು ಚಿನ್ನ ಲೇಪಿತವಾಗಿದೆ. ನಕ್ಷತ್ರಾಕಾರದಲ್ಲಿರುವ ಈ ದೇಗುಲವು ಶ್ರೀಚಕ್ರವನ್ನು ಸಂಕೇತಿಸುತ್ತದೆ. ದೇಶದ ಪ್ರಮುಖ ದೊಡ್ಡ ದೇಗುಲಗಳಲ್ಲಿ ಇದೂ ಒಂದು.
ಕೊಲ್ಹಾಪುರದ ಮಹಾಲಕ್ಷ್ಮೀ: ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿದ್ದು, ಮಹಾರಾಷ್ಟ್ರದಲ್ಲಿದೆ. ಇಲ್ಲಿ ಮಹಾವಿಷ್ಣು ಹಾಗೂ ಲಕ್ಷ್ಮೀ ದೇವಿಯರ ಶಕ್ತಿ ಕೇಂದ್ರ ಎಂಬ ನಂಬಿಕೆ ಭಕ್ತರದ್ದು. ಕರ್ನಾಟಕದ ಚಾಲುಕ್ಯ ಅರಸರ ಕಾಲದಲ್ಲಿ ಈ ದೇಗುಲ ನಿರ್ಮಾಣಗೊಂಡಿದೆ.
ಹೋಗುವುದು ಹೇಗೆ?
ಅಷ್ಟಲಕ್ಷ್ಮೀ ದೇಗುಲ ಚೆನ್ನೈ: ಇಲ್ಲಿ ಲಕ್ಷ್ಮೀಯನ್ನು 8 ರೂಪಗಳಲ್ಲಿ ಆರಾಸಲಾಗುತ್ತದೆ. ಚೆನ್ನೈನ ಈಲಿಯಟ್ ಕಡಲತೀರದಲ್ಲಿ ಈ ದೇಗುಲವಿದೆ. ಲಕ್ಷ್ಮೀ ದೇವಿ, ವಿಷ್ಣು ದೇವರನ್ನು ಪ್ರತಿಷ್ಠಾಪಿಸಲಾಗಿದೆ.
ಹಾಸನದ ಲಕ್ಷ್ಮೀ ದೇವಿ: ಹೊಯ್ಸಳರ ಕಾಲದಲ್ಲಿ ದೊಡ್ಡ ಗದ್ದವಳ್ಳಿಯಲ್ಲಿ ನಿರ್ಮಾಣಗೊಂಡ ಪ್ರಾಚೀನ ದೇಗುಲವಿದು. ಹೊಯ್ಸಳ ವಾಸ್ತುಶಿಲ್ಪ ಶೈಲಿಯಲ್ಲಿಯೇ ನಿರ್ಮಾಣಗೊಂಡಿದೆ. ಈ ದೇಗುಲದಲ್ಲಿ ಹಲವಾರು ದೇವ ದೇವತೆಯರ ಚಿತ್ರಗಳನ್ನೂ ಕಾಣಬಹುದು.
ಮಹಾಲಕ್ಷ್ಮೀ ದೇಗುಲ ಗುಬ್ಬಿ
ತುಮಕೂರಿನಿಂದ 20 ಕಿಮೀ ದೂರದಲ್ಲಿರುವ ಗುಬ್ಬಿಯಲ್ಲಿ 2003ರಲ್ಲಿ ಈ ದೇಗುಲ ನಿರ್ಮಾಣಗೊಂಡಿದೆ. ವರ್ಷಪೂರ್ತಿ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಈ ದೇಗುಲದಲ್ಲಿ ಗಣೇಶ, ಸರಸ್ವತಿ ಹಾಗೂ ಲಕ್ಷ್ಮೀ ದೇವಿ ಪ್ರತಿಷ್ಠಾಪನೆಗೊಂಡಿದೆ.
ಹೀಗೆ ಬನ್ನಿ: ತುಮಕೂರಿನಿಂದ 20 ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ ಗುಬ್ಬಿಗೆ ಸಾಕಷ್ಟು ಬಸ್, ರೈಲು ಸಂಪರ್ಕವಿದೆ.