ಸೂಕ್ಷ್ಮಮತಿ ಭಾನುಮತಿ

ದುರ್ಯೋದನನ ಹೆಂಡತಿ ಭಾನುಮತಿ ಒಳ್ಳೆಯ ಬುದ್ಧಿಯನ್ನು ಹೊಂದಿದಾಕೆ. ತನ್ನ ಪತಿಯ ಅನ್ಯಾಯವನ್ನು ಎಂದೂ ಪುರಸ್ಕರಿಸಿದವಳಲ್ಲ. ಹಾಗಂತ ಅವರಿಬ್ಬರ ಸಂಬಂಧದಲ್ಲಿ ಯಾವುದೇ ಶಂಕೆಗಳೂ ಇರಲಿಲ್ಲ.

ಮಹಾಭಾರತದುದ್ದಕ್ಕೂ ದುರ್ಯೋದನ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಾನೆ. ತನ್ನ ಅಧರ್ಮದಿಂದಲೇ, ಕುಚೋದ್ಯದಿಂದಲೇ ಕೆಟ್ಟ ಹೆಸರನ್ನು ಪಡೆದುಕೊಳ್ಳುತ್ತಾನೆ. ಅವನ ಪತ್ನಿ ಭಾನುಮತಿ. ಭಾನು ಅಂದರೆ ಸೂರ್ಯ ಮತಿ ಅಂದರೆ ಬುದ್ಧಿ. ಭಾನುಮತಿ ಅಂದರೆ ಸೂರ್ಯನಷ್ಟೇ ಪ್ರಕಾಶಮಾನವಾದ, ಪ್ರಭಾವಳಿಂiÀiನ್ನು ಹೊಂದಿದ ಬುದ್ಧಿಯನ್ನು ಹೊಂದಿದಾಕೆ ಎಂದರ್ಥ. ಭಾನುಮತಿ ಪಾಂಡವ ಪರವಾಗಿದ್ದ ಶ್ರೀಕೃಷ್ಣನ ಪರಮಭಕ್ತೆಯಾಗಿದ್ದಳು ಎಂಬುದು ತಿಳಿದುಬರುತ್ತದೆ.
ಭಾನುಮತಿ ಭಾಗದತ್ತನ ಮಗಳು. ಆತ ಪ್ರಗ್ಜೋತಿಷ್ಯ ಸಾಮ್ರಾಜ್ಯದ ರಾಜನಾಗಿದ್ದ.
ದುರ್ಯೋದನನ ದುಷ್ಟಬುದ್ಧಿಯಿಂದಾಗಿಯೇ ಕೌರವರು ಸೋಲನ್ನನುಭವಿಸುತ್ತಾರೆ. ಮಹಾಭಾರತದಲ್ಲಿ ದುರ್ಯೋದನ ಕುಚೇಷ್ಟೆ ಹಾಗೂ ಕರ್ಣನೊಂದಿಗಿನ ಸ್ನೇಹಪರತೆಗೆ ಹೆಸರಾದವನು. ಆದರೆ ಭಾನುಮತಿಯ ಪಾತ್ರ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ಕೌರವರೊಂದಿಗೆ ಪಗಡೆಯಾಡಿ ಎಲ್ಲವನ್ನು ಕಳೆದುಕೊಂಡ ಪಾಂಡವರು ಕೊನೆಗೆ ತಮ್ಮ ಹೆಂಡತಿ ದ್ರೌಪದಿಯನ್ನು ಪಣಕ್ಕಿಟ್ಟು ಪಗಡೆಯಾಟವನ್ನಾರಂಭಿಸುತ್ತಾರೆ. ಅಲ್ಲಿಯೂ ದುರ್ಯೋದನ ಅಧರ್ಮದಿಂದಲೇ ಗೆಲುವು ಸಾಸುತ್ತಾನೆ. ತುಂಬಿದ ಸಭೆಯಲ್ಲಿ ದುರ್ಯೋದನನ ಆದೇಶದಂತೆ ದುಶ್ಯಾಸನ ಪಣಕ್ಕಿಟ್ಟ ದ್ರೌಪದಿಯ ಸೀರೆ ಸೆಳೆದು ಅವಳನ್ನು ಅವಮಾನಿಸುತ್ತಾನೆ. ಆ ಸಂದರ್ಭದಲ್ಲಿ ದುರ್ಯೋದನನ ಪತ್ನಿ ಭಾನುಮತಿ ದ್ರೌಪದಿಯನ್ನು ಸಂತೈಸುತ್ತಾಳೆ. ಒಬ್ಬಳು ಸ್ತ್ರೀಯನ್ನು ಅವಮಾನಿಸದಂತೆ, ಆಕೆಯ ಮನ ನೋಯಿಸದಂತೆ ದುರ್ಯೋದನ ಹಾಗೂ ಕೌರವ ಸಹೋದರರೊಂದಿಗೆ ಭಾನುಮತಿ ಬೇಡಿಕೊಳ್ಳುತ್ತಾಳೆ. ಆಕೆ ದುರ್ಯೋದನನ ದುಷ್ಟಬುದ್ಧಿಯನ್ನು ಹೋಗಲಾಡಿಸಲು ಪ್ರಯತ್ನಿಸುತ್ತಾಳೆ. ಆತನ ಮನಪರಿವರ್ತನೆಗೂ ಪ್ರಯತ್ನಿಸುತ್ತಾಳೆ.
ಮಹಾಭಾರತದ ಇನ್ನೊಂದು ಪುರಾಣ ಕಥೆಯಲ್ಲಿ ಭಾನುಮತಿಯ ಹೆಸರು ಉಲ್ಲೇಖಗೊಂಡಿದೆ. ಭಾನುಮತಿ ಮತ್ತು ಕರ್ಣ ಜತೆಗೂಡಿ ಪಗಡೆಯಾಟ ಆಡುತ್ತಾರೆ. ಆ ಸಂದರ್ಭದಲ್ಲಿ ಕರ್ಣ ಜಯಗಳಿಸುತ್ತಾನೆ. ಒಪ್ಪಂದದಂತೆ ಭಾನುಮತಿ ಕರ್ಣನಿಗೆ ತನ್ನ ಕೊರಳಲ್ಲಿದ್ದ ಮುತ್ತಿನ ಹಾರವನ್ನು ನೀಡಬೇಕಿರುತ್ತದೆ. ಬೆಲೆಬಾಳುವ ಮುತ್ತುಗಳಿಂದ ಕೂಡಿದ ಹಾರವನ್ನು ಆಕೆ ಕೊಡಲು ನಿರಾಕರಿಸುತ್ತಾಳೆ. ಇಲ್ಲಿ ತನ್ನ ಒಡವೆ ಬಗ್ಗೆ ಆಕೆಗಿದ್ದ ಸಹಜ ವ್ಯಾಮೋಹವನ್ನು ಕಾಣಬಹುದು.
ಕರ್ಣ ಅವಳ ಕೈ ಹಿಡಿದು ಎಳೆದಾಗ ಮುತ್ತಿನ ಹಾರ ತುಂಡರಿಸಿ ಮುತ್ತುಗಳು ಚೆಲ್ಲಾಪಿಲ್ಲಿಯಾಗುತ್ತವೆ. ಅದೇ ಸಂದರ್ಭದಲ್ಲಿ ಅಲ್ಲಿಗೆ ದುರ್ಯೋದನ ಬರುತ್ತಾನೆ. ಮುತ್ತುಗಳನ್ನು ಆರಿಸಿಕೊಡಲೇ ಎಂದು ಕೇಳುತ್ತಾನೆ. ದುರ್ಯೋದನನಿಗೆ ತನ್ನ ಪತ್ನಿಯ ಮೇಲೆ ಇಲ್ಲವೇ, ತನ್ನ ಸ್ನೇಹಿತ ಕರ್ಣನ ಮೇಲೆ ಸಂಶಯ ಬರುವುದಿಲ್ಲ. ತನ್ನ ಪತ್ನಿಯ ನಿಷ್ಠೆ ಏನು ಎಂಬುದನ್ನು ಅರ್ಥೈಸಿಕೊಂಡಿರುತ್ತಾನೆ ಹಾಗೂ ಗೆಳೆಯನ ಪ್ರಾಮಾಣಿಕತೆಯನ್ನು ನಂಬಿರುತ್ತಾನೆ. ಹಾಗಾಗಿ ಭಾನುಮತಿ ಮತ್ತು ದುರ್ಯೋದನ ನಡುವೆ ಶಂಕೆ ಇಲ್ಲದ ಪ್ರೇಮನಿಷ್ಠೆ ಇತ್ತು ಎಂಬುದನ್ನು ಮನಗಾಣಬಹುದು. ಅಪನಂಬಿಕೆ, ಸಂಶಯದ ಮನೋಭಾವದಿಂದಾಗಿ ಸಾಕಷ್ಟು ಸಂಸಾರದಲ್ಲಿ ಬಿರುಕು ಮೂಡುತ್ತಿದೆ. ಆದರೆ ದುರ್ಯೋದನ ಭಾನುಮತಿ ನಡುವಿನ ಪರಸ್ಪರ ನಂಬಿಕೆಯೇ ಅವರ ಸಂಸಾರ ನೌಕೆಯನ್ನು ದಡ ಸೇರಿಸುತ್ತದೆ. ಈ ಘಟನೆ ದುರ್ಯೋದನನ ನಂಬಿಕೆ, ಸ್ನೇಹಪರತೆ, ವಿಶ್ವಾಸ ಮಾತ್ರ ಅಲ್ಲ, ಅಂತಹ ಗೌರವ, ನಂಬಿಕೆಯನ್ನು ಉಳಿಸಿಕೊಂಡ ಭಾನುಮತಿ ಕೂಡಾ ಶ್ರೇಷ್ಠಳಾಗಿ ಕಾಣಿಸುತ್ತಾಳೆ.
ಹೆಣ್ಣಿಗೆ ಹೆಣ್ಣೇ ಶತ್ರು ಅಂತಾರೆ. ಆದರೆ ಭಾನುಮತಿ ಹಾಗಲ್ಲ. ಪಾಂಡವರ ಪತ್ನಿ ದ್ರೌಪದಿ ತನ್ನ ಪಾಲಿಗೆ ಶತ್ರುವೇ ಎಂದು ಪರಿಗಣಿಸಬೇಕಿತ್ತು. ಆದರೆ ಆಕೆ ಹಾಗೆ ಮಾಡಲಿಲ್ಲ. ತನ್ನಂತೆ ಆಕೆ ಕೂಡಾ ಒಬ್ಬಳು ಹೆಣ್ಣು, ಆಕೆ ಶತ್ರುವಿನ ಕಡೆಯವಳೇ ಆದರೂ ಆಕೆಯ ಮಾನರಕ್ಷಣೆಗೆ ನಿಲ್ಲುತ್ತಾಳೆ. ತನ್ನವರಿಂದ ಇತರರಿಗೆ ಅನ್ಯಾಯ, ಅವಮಾನಗಳು ಆಗುತ್ತದೆ ಎಂದಾಗ ಅದನ್ನು ವಿರೋಸುವುದಕ್ಕೂ ಹಿಂಜರಿಯದ ಸೂಕ್ಷ್ಮಮತಿ ಅವಳು.

Related Articles

ಪ್ರತಿಕ್ರಿಯೆ ನೀಡಿ

Latest Articles