* ಗೀತಕೃಷ್ಣ ಬೆಂಗಳೂರು
ಶ್ರೀ ಹರೀ… ನಿನ್ನಯ ಕರುಣೆಗೆ , ಈ ಸೂರ್ಯೋದಯವೇ ಸಾಕ್ಷಿ... ಇದನ್ನು ಕಾಣುತ್ತಿರುವ ನಮ್ಮ ಈ ಕಣ್ಣುಗಳೇ ಸಾಕ್ಷಿ... ನಿನ್ನಯ ಕರುಣೆಯೇ ಈ ಜಗಕೆಲ್ಲಾ ಬೆಳಕನ್ನು ಚೆಲ್ಲುತಿಹುದು , ಇರುಳಿನ ಬದುಕಿಗೆ ಸಿಹಿ ನಿದ್ರೆಯಾಗಿಹುದು ... ನೀ ಮಾಡುತ್ತಿರುವ ಪ್ರತಿ ಕ್ಷಣದ ಉಪಕಾರವನ್ನು ನಮ್ಮ ಮನಸ್ಸು ಅರಿಯುವಂತಾಗಲಿ , ಹರಿಯೇ ನಿನ್ನ ನೆನೆಯುವಂತಾಗಲಿ , ನಿನ್ನಲ್ಲಿ ಪ್ರೀತಿ ಬೆಳೆದು ಅದು ಭಕ್ತಿ ರೂಪ ತಾಳಲಿ , ಬದುಕಿದು ಧನ್ಯವಾಗಲಿ ಜಗನ್ಮಾನ್ಯವಾಗಲಿ ... ಸಾರ್ಥಕದ ಪಥದಲ್ಲಿ ಈ ಬದುಕಿನ ಬಂಡಿ ಸಾಗಲೀ , ನಿನ್ನೂರ ಸೇರುವಂತಾಗಲಿ ...