ಶರಣು ಗುರುವೆ ಶರಣು

*ರಚನೆ : ಶ್ರೀಮತಿ ಜ್ಯೋತಿ ಕೋಟಗಿ

*ಶ* ರಣು ಗುರುವೆ ಶರಣು ನಿನಗೆ

*ಶ* ರಣು ದೇವನಿಗಿಂತ ಮಿಗಿಲಾದವಗೆ

*ಶಾ* ಕಿಣಿಯರ ಆಟಮಾಟ ಸುಳ್ಳೆಂದು

*ಶಾ* ಲೆಯನ್ನು ದೇವ ಮಂದಿರ ಮಾಡಿದವಗೆ

*ಶಿ* ಲೆಯಲ್ಲಿ ಕಲೆಯನು ಅರಳಿಸಿ

*ಶಿ* ಖರದೆತ್ತರಕೆ ನಮ್ಮ ಬೆಳಸಿದಾತಗೆ

*ಶೀ* ಲ ಮಾಡದಿರಿ ಎಂದು ತಿಳಿಹೇಳಿ

*ಶೀ* ಲ ಸುಶೀಲ ಸಂಸ್ಕಾರ ನೀಡಿದಾತಗೆ

*ಶು* ದ್ಧ ಭಾವಗಳ ಮೂಡಿಸಿದ

*ಶು* ಭ್ರ ಮನದ ದೇವ ಮಾನವಗೆ

*ಶೂ* ನ್ಯವೀ ಜಗತ್ತು ಎಂದ್ಹೇಳಿ

*ಶೂ* ನ್ಯದ ಬೆಲೆಯ ತಿಳಿಸಿದಾತಗೆ

*ಶೃಂ* ಖಲೆಯಿಂದ ನಮ್ಮ ಬಿಡಿಸಿ

*ಶೃಂ* ಗಾರಗೊಳಿಸಿ ಆನಂದಿಸಿದವಗೆ

*ಶೆ* ಲೆ ಇಲ್ಲವಾದರೆ ನಾವೆಲ್ಲಿ

*ಶೆ* ಲೆ ನೀನು ನಮಗೆಲ್ಲ ಪ್ರಭುವೇ

*ಶೇ* ಷಧರನು ಕರ ಮುಗಿದ ನಿನಗೆ

*ಶೇ* ಷಶಯನನೂ ಶಿರ ಬಾಗಿದಾತಗೆ

*ಶೈ* ತ್ಯೋಪಚಾರ ಮಾಡುವೆ ನಿನಗೆ

*ಶೈ* ಕ್ಷಣಿಕ ಲೋಕದ ಹೆಮ್ಮೆಯ ದಿಗ್ಗಜಗೆ

*ಶೊ* ತ್ತಿಯ ಜ್ಞಾನವಿದ್ದರೂ

*ಶೊ* ತ್ರದಾಸೆ ಇಲ್ಲದವನಿಗೆ

*ಶೋ* ಷಿತರನ್ನು ಹುರಿದುಂಬಿಸಿ

*ಶೋ* ಧನೆ ಮಾಡಿ ಜಯ ತಂದವಗೆ

*ಶೌ* ರ್ಯ  ಪರಾಕ್ರಮಗಳ ಕಲಿಸಿ

*ಶೌ* ರಿಯನ್ನಾಗಿ ಮಾಡಿದಾತಗೆ

*ಶಂ* ಕರ ರೂಪಣೆ ನೀನಾಗಿ

*ಶಂ* ಖನಾದ ಮೊಳಗಿಸಿದಾತಗೆ

*ಶರಣು ಗುರವೆ ಶರಣು ನಿನಗೆ*

Related Articles

ಪ್ರತಿಕ್ರಿಯೆ ನೀಡಿ

Latest Articles