* ಗೀತಕೃಷ್ಣ ಬೆಂಗಳೂರು



ಶ್ರೀ ಹರೀ… ನಿನ್ನಯ  ಕರುಣೆಗೆ ,
ಈ ಸೂರ್ಯೋದಯವೇ ಸಾಕ್ಷಿ...

ಇದನ್ನು ಕಾಣುತ್ತಿರುವ
ನಮ್ಮ ಈ ಕಣ್ಣುಗಳೇ  ಸಾಕ್ಷಿ...

ನಿನ್ನಯ  ಕರುಣೆಯೇ
ಈ  ಜಗಕೆಲ್ಲಾ  ಬೆಳಕನ್ನು ಚೆಲ್ಲುತಿಹುದು ,
ಇರುಳಿನ  ಬದುಕಿಗೆ 
ಸಿಹಿ  ನಿದ್ರೆಯಾಗಿಹುದು ...

ನೀ  ಮಾಡುತ್ತಿರುವ
ಪ್ರತಿ ಕ್ಷಣದ  ಉಪಕಾರವನ್ನು
ನಮ್ಮ  ಮನಸ್ಸು  ಅರಿಯುವಂತಾಗಲಿ ,
ಹರಿಯೇ ನಿನ್ನ  ನೆನೆಯುವಂತಾಗಲಿ ,

ನಿನ್ನಲ್ಲಿ  ಪ್ರೀತಿ ಬೆಳೆದು
ಅದು ಭಕ್ತಿ ರೂಪ ತಾಳಲಿ ,
ಬದುಕಿದು  ಧನ್ಯವಾಗಲಿ
ಜಗನ್ಮಾನ್ಯವಾಗಲಿ ...

ಸಾರ್ಥಕದ  ಪಥದಲ್ಲಿ  
ಈ ಬದುಕಿನ  ಬಂಡಿ ಸಾಗಲೀ ,
ನಿನ್ನೂರ  ಸೇರುವಂತಾಗಲಿ ...


ಪ್ರತಿಕ್ರಿಯೆ ನೀಡಿ