ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ

ಪುತ್ತೂರು(ದ.ಕ): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನಲಿರುವ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲೊ ಅ.9ರಂದು ಮೃತ್ಯುಂಜಯ ಹೋಮ ನಡೆಯಲಿದೆ. ಮೃತ್ಯುಂಜಯ ಹೋಮ ಸೇವೆ ಮಾಡಿಸುವ ಭಕ್ತರು ದೇವಸ್ಥಾನದ ಕೌಂಟರ್‍ನಲ್ಲಿ ರಶೀದಿ ಪಡೆದುಕೊಳ್ಳುವಂತೆ ದೇವಳದ ಪ್ರಕಟಣೆ ತಿಳಿಸಿದೆ.

ದೇವಸ್ಥಾನ ವಿಶೇಷತೆ
ಮಹಾಲಿಂಗೇಶ್ವರ ದೇವಾಲಯ ಪೂರ್ವಾಭಿಮುಖವಾಗಿದೆ. ಪಶ್ಚಿಮಕ್ಕೆ ದೊಡ್ಡ ಕೆರೆ ಇದೆ. ಎದುರು ಭಾಗದಲ್ಲಿ ರುಧ್ರಭೂಮಿ ಇದೆ. ವಿಶ್ವೇಶ್ವರ ನೆಲೆಸಿಹ ಕಾಶಿಯನ್ನು ಬಿಟ್ಟರೆ, ಶಿವದೇವಾಲಯದ ಬಳಿ ರುದ್ರಭೂಮಿ ಇರುವುದು ಪುತ್ತೂರಿನಲ್ಲಿ ಮಾತ್ರ. ಈ ದೇವಾಲಯದ ಹೊರಭಾಗದಲ್ಲಿ ಅಂದರೆ ದ್ವಾರದಲ್ಲಿ ಶಿವನ 16 ಅಡಿ ಎತ್ತರದ ಶಿವನ ಮೂರ್ತಿಯಿದೆ. ಪ್ರವೇಶ ದ್ವಾರ ದಾಟಿ ಬಂದರೆ, ಪ್ರದಕ್ಷಿಣ ಪಥದಲ್ಲಿ ಪಾರ್ವತಿ, ಸುಬ್ರಹ್ಮಣ್ಯ, ಗಣಪತಿ ಮೊದಲಾದ ಪರಿವಾರ ದೇವತೆಗಳ ಗುಡಿಗಳಿವೆ. ಗರ್ಭಗೃಹದಲ್ಲಿ ಶಿವಲಿಂಗವಿದೆ.


Related Articles

ಪ್ರತಿಕ್ರಿಯೆ ನೀಡಿ

Latest Articles