ಆಂಜನೇಯನ ಮನದಲಿ ನೆನೆದರೆ ಸಾಲದೇ….

ಹನುಮ ದೇವರಿಗೆ ವೀಳ್ಯದೆಲೆ ಅರ್ಪಿಸುವುದರಿಂದ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ ಎಂಬುದು ಭಕ್ತರ ನಂಬಿಕೆ. ಆಂಜನೇಯನಿಗೆ ವೀಳ್ಯದೆಲೆ ಹಾರ, ಅಲಂಕಾರ ಮಾಡಿಸುವುದರ ಮಹತ್ವ ಏನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಆಂಜನೇಯ, ಹನುಮಂತ, ವಾಯುಪುತ್ರ, ಭಜರಂಗಿ, ಮಾರುತಿ… ಹೀಗೆ ನಾನಾ ಹೆಸರು ಕರೆಸಿಕೊಳ್ಳುವ ಹನುಮ ದೇವರು ಶ್ರೀರಾಮನ ಪರಮ ಭಕ್ತ. ಆಂಜನೇಯನನ್ನು ಆರಾಧಿಸಿದರೆ ಶನಿ ದೇವರು ಕೂಡಾ ಪ್ರಸನ್ನನಾಗುತ್ತಾನೆ ಎಂಬ ನಂಬಿಕೆ ಭಕ್ತರದ್ದು. ಹಾಗಾಗಿ ಶನಿವಾರದಂದು ಆಂಜನೇಯ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ.
ಹನುಮ ದೇವರಿಗೆ ವೀಳ್ಯದೆಲೆ ಅರ್ಪಿಸುವುದರಿಂದ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ ಎಂಬುದು ಭಕ್ತರ ನಂಬಿಕೆ. ಆಂಜನೇಯನಿಗೆ ವೀಳ್ಯದೆಲೆ ಹಾರ, ಅಲಂಕಾರ ಮಾಡಿಸುವುದರ ಮಹತ್ವ ಏನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಮಿಗೆ ಚಿಗುರು ವೀಳ್ಯದೆಲೆ ಹಾರವನ್ನು ಹಾಕಿದರೆ ಕಾಯಿಲೆಯಿಂದ ನರಳುವವರು ಬೇಗ ಗುಣಮುಖರಾಗುತ್ತಾರೆ. ಸಂಸಾರದಲ್ಲಿ ನೆಮ್ಮದಿ ಇಲ್ಲದವರು ಸ್ವಾಮಿಗೆ ವೀಳ್ಯದೆಲೆ ಹಾರ ಹಾಕಿಸಿದರೆ ಸಂಸಾರದಲ್ಲಿ ನೆಮ್ಮದಿ ಸಿಕ್ಕುತ್ತದೆ.

ಸಣ್ಣಮಕ್ಕಳು ಎಷ್ಟೇ ಆಹಾರ ತಿಂದರೂ ತುಂಬಾ ಸಣ್ಣಗಿದ್ದು ನಿಶ್ಯಕ್ತರಾಗಿದ್ದರೆ, ಇಂತಹ ಸಮಯದಲ್ಲಿ ಸ್ವಾಮಿಗೆ ವೀಳ್ಯದೆಲೆ ಹಾರ ಹಾಕಿಸಿ ಪ್ರಾರ್ಥಿಸಿದರೆ, ಮಕ್ಕಳ ಆರೋಗ್ಯ ಚೆನ್ನಾಗಿದ್ದು, ಚೆನ್ನಾಗಿ ಬೆಳೆಯುತ್ತಾರೆ.

ವ್ಯಾಪಾರ ಮಾಡುವಾಗ ತುಂಬಾ ನಷ್ಟವಾದರೆ, ಅಂಥವರು ಸ್ವಾಮಿಗೆ ವೀಳ್ಯದೆಲೆ ಹಾರ ಹಾಕಿಸಿ, ವೀಳ್ಯದೆಲೆ, ಹಣ್ಣುಗಳು, ಹಾಗೂ ದಕ್ಷಿಣೆ ಸಮೇತ ತಾಂಬೂಲ ದಾನ ಮಾಡಿದರೆ, ವ್ಯಾಪಾರ ಚೆನ್ನಾಗಿ ಆಗುತ್ತದೆ.

ಯಾವುದೇ ವ್ಯಕ್ತಿಯನ್ನು ತಾತ್ಸಾರದಿಂದ ನೋಡುತ್ತಿದ್ದರೆ, ಅಂಥವರು ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಹಾರ ಹಾಕಿಸಿ ಪ್ರಾರ್ಥಿಸಿದರೆ, ಬಹಳ ಗೌರವಾನ್ವಿತ ವ್ಯಕ್ತಿಯಾಗುತ್ತಾರೆ.

ಶನೈಶ್ಚರ ದೃಷ್ಟಿ ಇರುವವರು, ಆಂಜನೇಯನಿಗೆ ವೀಳ್ಯದೆಲೆ ಹಾರ ಹಾಕಿಸಿ, ತುಳಸಿ ಅರ್ಚನೆ ಮಾಡಿಸಿದರೆ, ಶನಿದೋಷ ನಿವಾರಣೆಯಾಗುತ್ತದೆ. ಸುಂದರಕಾಂಡ ಪಾರಾಯಣ ಮಾಡಿ, ಸ್ವಾಮಿಗೆ ವೀಳ್ಯದೆಲೆ ಹಾರ ಹಾಕಿಸಿದರೆ ಸಕಲ ಕಾರ್ಯಗಳೂ ವಿಜಯವಾಗುತ್ತದೆ.

ಹನುಮಾನ್ ಚಾಲೀಸಾ ಓದಿ ಸ್ವಾಮಿಗೆ ವೀಳ್ಯದೆಲೆ ಹಾರ ಹಾಕಿಸಿ, ಪೂಜಿಸಿದರೆ, ಪರಮಾತ್ಮನ ಅನುಗ್ರಹ ಎಂದೆಂದೂ ಇರುತ್ತದೆ.

ವಾದ ವಿವಾದಗಳಲ್ಲಿ ಸ್ವಾಮಿಯನ್ನು ಪ್ರಾರ್ಥಿಸಿ, ವೀಳ್ಯದೆಲೆ ಹಾರ ಹಾಕಿಸಿ, ಪೂಜಿಸಿ ಪ್ರಸಾದ ತಿಂದರೆ ಜಯವು ಸತ್ಯದ ಕಡೆ ಆಗುತ್ತದೆ.

ಎಷ್ಟು ವೀಳ್ಯದೆಲೆ ಹಾರ 22 ಅಥವಾ 23 ಜೋಡಿ ವೀಳ್ಯದೆಲೆ ಹಾರವನ್ನು ಹಾಕಿಸಿ, ವೀಳ್ಯದೆಲೆ ಪ್ರಸಾದ ತಿನ್ನುತ್ತಾ ಬಂದರೆ ಸರ್ವ ರೋಗಗಳು ನಿವಾರಣೆಯಾಗುತ್ತವೆ. ಹಸಿರಾಗಿರುವ, ಚಿಗುರಿನ ವೀಳ್ಯದೆಲೆ ಹಾರ ಹಾಕಿಸಿ. ಶ್ರೀ ರಾಮದೇವರ ಪ್ರಸಾದದ ತುಳಸಿಯನ್ನು “ಆಂಜನೇಯ” ದೇವರ ತಲೆಯ ಮೇಲಿಟ್ಟು ಅರ್ಚನೆ ಮಾಡಿದರೆ, ಇಷ್ಟಾರ್ಥ ಸಿದ್ಧಿ, ಸಕಲ ಕಾರ್ಯಗಳು ಬೇಗ ನೆರವೇರುತ್ತದೆ.

ಸಂಗ್ರಹ: ಕಣ್ಣೂರು ವಿ.ಭಾಗ್ಯ

Related Articles

ಪ್ರತಿಕ್ರಿಯೆ ನೀಡಿ

Latest Articles