ಜೀವನ ಪಾಠ

*ಎಚ್ ಜಿ ಮಳಗಿ

ನೋವು ನೀಡಿದವರಿಗಾಗಿ ಗೋಳಾಡದಿರು ಮಗುಳ್ನಕ್ಕು ಹೇಳು ನಿನಗಿಂತ ಒಳ್ಳೆಯವರು ಸಿಗುವರೆಂದು/

ಅಸೂಯಿಸುವರ ಕಂಡು ಕೊರಗದಿರು, ಹೇಳುತಿಹರವರು ನೀ ಅವರಿಗಿಂತ ಉತ್ತಮನೆಂದು/

ಸೇಡಿನಲಿ ಸಮಯ ವ್ಯರ್ಥ ಮಾಡದಿರು, ಅವರ ಕರ್ಮ ಅವರ ಗತಿ ಕಾಣಿಸುವದೆಂದು/

ನಿನ್ನ ಯೋಜನೆಗಳನು ಅನ್ಯರೆದುರು ಹೇಳದಿರು, ತೋರಿಸು ಸಾಧನೆಯು ಅವರಿಗಿಂತ ನೀ ಉತ್ತಮನೆಂದು/

ಮನವಿದು ಭಾವನೆಯ ಬಜಾರವಲ್ಲ ಹೃದಯವಿದು, ಜಾಹೀರಾತು ಸರಕಿನದಲ್ಲ ಬಂದದ್ದು ಬಂದಂತೆ ಸ್ವೀಕರಿಸುವೆನೆಂದು/

ಸಹಾಯ ನೀಡಿ ಪ್ರತಿಫಲಕ್ಕೆ ಕೈ ಚಾಚದಿರು, ಮುಗುಳ್ನಕ್ಕು ಹೇಳು ನೀ ಮಾಡಿರುವುದು ವ್ಯಾಪಾರವಲ್ಲವೆಂದು/

ಇಂದಿನ ಸನ್ನಿವೇಶ ಇರದು ಎಂದೆಂದೂ, ಎಚ್ಚರಿಂದ ನೋಡಿ ಬರಲಿಕಿದೆ ಶ್ರೇಷ್ಠವಾದದ್ದು /

ಬಿಟ್ಟೋಡದಿರು ಮೈದಾನವ ಕೂಗಿ ಹೇಳು, ನಿನ್ನ ಸಮಯ ಮುಂದೆ ಇದೆಯೆಂದು/

ಸಣ್ಣ ತಪ್ಪಿಗೆ ಸಂಬಂಧವ ಮುರಿಯದಿರು, ಕೃತಕತೆಯ ದೂಡಾಚೆ ಘೋಷಿಸು /ಪೂರ್ಣರಲ್ಲ ಯಾರೂ ಕಕ್ಕುಲತೆಯ ಮುಂದೆ, ಪೂರ್ಣತೆ ಏನೂ ಅಲ್ಲವೆಂದು/

ಸಿಟ್ಟಿನಲಿ ಉತ್ತರಿಸದಿರು, ಸಂತೋಷದಿ ವಚನ ನೀಡದಿರು, ದುಃಖದಲಿ ನಿರ್ಧರಿಸದಿರು ಶಾಂತಿಯಲಿ ನೋಡುವೆನಿವನೆಲ್ಲವನೆಂದು/

ಪ್ರಾಮಾಣಿಕರಲ್ಲದವರಿಂದ ನಿಷ್ಠತೆಯ ನಿರೀಕ್ಷಿಸದಿರು, ಕೂಗಿ ಸಾರು ನೀ ಸ್ವತಂತ್ರನೆಂದು/

ಜೀವನ ಚಿಕ್ಕದು ಕಾಲ ವೇಗ ಅಮೋಘ ಮರುತಿರುಗಿಲ್ಲ, ಉತ್ತರದ ಗೋಜಿಲ್ಲವದಕೆ ಬಂದದ್ದನ್ನು ಸಂತೋಷದಿ ಅನುಭವಿಸು ಮತ್ತಿದು ಬರದೆಂದು /

ಆರಂಭ ಕಠಿಣವೆಂದು ಶರಣಾಗದಿರೆಂದೆಂದು/

ಶುಭ ಹಾರೈಕೆ ತರುವುದು ಶುಭವನ್ನೇ /

ಇದೇ ಪ್ರಕೃತಿಯ ನಿತ್ಯ ನಿಯಮವೆಂದು/

ಕಷ್ಟಗಳು ಕ್ಷಣಿಕ ಸಹನೆ ಸಾಮರ್ಥ್ಯ ತಿಳಿಯವು ಪರೀಕ್ಷಿಸಲು ಬರುವವೆಂದು ವಿಶ್ವಾಸವೆಲ್ಲವದ ಮುರಿದು ಕ್ಷಮೆ ಕೇಳೆನೆಂದು/

ಸರೋವರದಿ ಬಿದ್ದ ನೀರ ಹನಿ ಕಳೆದುಕೊಳ್ವದಸ್ತಿತ್ವ ಕಮಲದೆಲೆಯ ಮೇಲೆ ಬಿದ್ದ ಹನಿ ಹೊಳೆವುದೆಂದೆಂದು/

ಕಳೆದ ಹೊತ್ತು ಕರಗಿದ ಸ್ವತ್ತು ಬರದೆಂದೆಂದೂ, ಸೇರಿಸದಿರು ಮನದಿ ದ್ವೇಷ ರೋಷಕಿಲ್ಲ ನಿನ್ನಲಿ ಸ್ಥಳವೆಂದು/

ನಿನಗೆ ನೀನೆಂದು ನೆರಳು ಜೊತೆಗಾರನೆಂದು, ಬದುಕಿಗೋ ಮಸಣಕೋ ನಾಕವೋ ನರಕವೋ ತಿಳಿ ಇಲ್ಲಿಲ್ಲದೇನಲ್ಲಿಲ್ಲವೆಂದು/

ನೋವೊಂದು ಕಲಿಸೀತು ಪಾಠ, ಪ್ರತಿ ಪಾಠವೊಂದು ಬದಲಿಸೀತು ನಿನ್ನ ವ್ಯಕ್ತಿತ್ವವ, ಕಲಿಯುವುದ ನಿಲ್ಲಿಸದಿರು ಜೀವನ ಕಲಿಸುತಿದೆ ಎಂದೆಂದೂ./

Related Articles

ಪ್ರತಿಕ್ರಿಯೆ ನೀಡಿ

Latest Articles