ಕಳಿತ ಬಾಳೆಹಣ್ಣು ಇದ್ರೆ ಮಾಡಬಹುದು ಉಣ್ಣಿಯಪ್ಪಂ

ಸಾಮಾಗ್ರಿಗಳು: ಅಕ್ಕಿ – 2 ಕಪ್, ಬಾಳೆಹಣ್ಣು – 3, ಬೆಲ್ಲ – 1 ಕಪ್, ತೆಂಗಿನ ತುರಿ – 2 ಚಮಚ (ತುರಿದದ್ದು), ಕಪ್ಪು ಎಳ್ಳು – 1/4 ಚಮಚ, ನೀರು – 1 ಕಪ್, ಏಲಕ್ಕಿ ಹುಡಿ – 3/4 ಕಪ್, ಉಪ್ಪು – ಚಿಟಿಕೆಯಷ್ಟು, ಒಣ ಶುಂಠಿ ಪುಡಿ – 1/4 ಚಮಚ, ಬೇಕಿಂಗ್ ಸೋಡಾ – 1/4 ಚಮಚ, ಕರಿಯಲು ತುಪ್ಪ

ಮಾಡುವ ವಿಧಾನ: ರಾತ್ರಿ ಪೂರ್ತಿ ಅಕ್ಕಿಯನ್ನು ನೆನೆಸಿಡಿ, 6 ಗಂಟೆಗಳಷ್ಟು ಕಾಲ ಅಕ್ಕಿ ನೆನೆಯಲಿ. ಮರುದಿನ ಬೆಳಗ್ಗೆ, ನೀರನ್ನು ಬಸಿದು ಅಕ್ಕಿಯನ್ನು ಕಡೆದು ಹಿಟ್ಟು ಮಾಡಿಟ್ಟುಕೊಳ್ಳಿ. ತುಂಬಾ ಮೃದುವಾಗಿ ಇದನ್ನು ಸಿದ್ಧಪಡಿಸದಿರಿ. ಇನ್ನು ಇದನ್ನು ಪಕ್ಕದಲ್ಲಿರಿಸಿ. ಬಾಳೆಹಣ್ಣನ್ನು ಸುಲಿದು ಇದನ್ನು ಮೃದು ಪೇಸ್ಟ್‎ನಂತೆ ಸಿದ್ಧಪಡಿಸಿ. ಬೆಲ್ಲವನ್ನು ನೀರಿನಲ್ಲಿ ಕರಗಿಸಿಕೊಳ್ಳಿ. ಬೆಲ್ಲದ ಹಿಟ್ಟಿನಲ್ಲಿ ಗಂಟು ಬಾರದಂತೆ ಇದನ್ನು ಕರಗಿಸಿಕೊಳ್ಳಿ. ಇದನ್ನು ತಣ್ಣಗಾಗಿಸಿ ಮತ್ತು ಬಾಳೆಹಣ್ಣಿನ ಮಿಶ್ರಣಕ್ಕೆ ಬೆರೆಸಿಕೊಳ್ಳಿ. ಎರಡನ್ನೂ ಚೆನ್ನಾಗಿ ಮಿಶ್ರ ಮಾಡಿಕೊಂಡು ತೆಳ್ಳನೆಯ ಹಿಟ್ಟನ್ನು ಸಿದ್ಧಪಡಿಸಿ. ಈಗ, ಅಕ್ಕಿ ಹಿಟ್ಟನ್ನು ಸೇರಿಸಿ, ಇದಕ್ಕೆ ಏಲಕ್ಕಿ ಹುಡಿ, ಒಣ ಶುಂಠಿ ಹುಡಿ, ಕಾಳುಮೆಣಸಿನ ಹುಡಿ, ಉಪ್ಪು ಮತ್ತು ಬೇಕಿಂಗ್ ಸೋಡಾವನ್ನು ಸೇರಿಸಿ. ನಂತರ ಬಾಳೆಹಣ್ಣು ಮಿಶ್ರಣವನ್ನು ಬೆರೆಸಿ ಚೆನ್ನಾಗಿ ಹಿಟ್ಟನ್ನು ಕರಗಿಸಿಕೊಳ್ಳಿ.
ನೀರನ್ನು ಸ್ವಲ್ಪ ಸ್ವಲ್ಪ ಸೇರಿಸಿ. ನಿಧಾನವಾಗಿ ಮಿಶ್ರಮಾಡಿ ಇದರಿಂದ ಹಿಟ್ಟು ಅರ್ಧ ದಪ್ಪಗಾಗಿ ಇರುತ್ತದೆ. ಇದನ್ನು30-45 ನಿಮಿಷಗಳ ಕಾಲ ಹಾಗೆಯೇ ಬಿಡಿ
ಪ್ಯಾನ್ ಬಿಸಿ ಮಾಡಿಕೊಂಡು ಅದಕ್ಕೆ ತುಪ್ಪ ಹಾಕಿ. ತುಪ್ಪದಲ್ಲಿ ತೆಂಗಿನ ಹೋಳನ್ನು ಹುರಿದುಕೊಳ್ಳಿ ಮತ್ತು ಹಿಟ್ಟಿಗೆ ಇದನ್ನು ಮಿಶ್ರಮಾಡಿ.
ಉಣ್ಣಿಯಪ್ಪ ಸಿದ್ಧಪಡಿಸುವ ಕಡಾಯಿಯನ್ನು ಸಿದ್ಧಪಡಿಸಿಕೊಳ್ಳಿ. ಕಡಾಯಿಯಲ್ಲಿ ತುಪ್ಪವನ್ನು ಬಿಸಿ ಮಾಡಿ. ಹಿಟ್ಟು ಹಾಕಿ. ಎರಡೂ ಬದಿ ಹೊಂಬಣ್ಣ ಬರುವವರೆಗೆ ಕರಿಯಿರಿ. ಕರಿಯಲು ಎಣ್ಣೆ ಬಳಸಬಹುದು. ತುಪ್ಪ ಬಳಸಿದರೆ ರುಚಿ ಜಾಸ್ತಿ.

Related Articles

ಪ್ರತಿಕ್ರಿಯೆ ನೀಡಿ

Latest Articles