ಮೈಸೂರಿನ ಉದಯಗಿರಿಯ ಶ್ರೀರಾಮಧಾಮ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ

ಮೈಸೂರು: ಇಲ್ಲಿನ ಉದಯಗಿರಿಯಲ್ಲಿರುವ ಶ್ರೀ ರಾಮಧಾಮ ಕ್ಷೇತ್ರದಲ್ಲಿ ಜೀರ್ಣೋದ್ಧಾರಗೊಂಡ ಶಿಲಾಮಯ ಗರ್ಭಗೃಹದಲ್ಲಿ ಶ್ರೀ ಮಹಾಗಣಪತಿ, ಶ್ರೀ ಮಹಾಲಿಂಗೇಶ್ವರ, ಲಕ್ಷö್ಮಣ, ಆಂಜನೇಯ ಸೀತಾ ಸಹಿತ ಪಟ್ಟಾಭಿರಾಮ ದೇವರ ಪುನಃ ಪ್ರತಿಷ್ಠೆ ಹಾಗೂ ಶ್ರೀ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಮೃತ್ತಿಕಾ ವೃಂದಾವನ ಪ್ರತಿಷ್ಠೆ ಜನವರಿ 7 2021ರಂದು ಬೆಳಗ್ಗೆ 10.15.ಕ್ಕೆ ನಡೆಯಲಿದೆ.

ಜನವರಿ 8ರಂದು ಬೆಳಗ್ಗೆ 10.15ಕ್ಕೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶ ತೀರ್ಥರು, ಉಡುಪಿ ಪೇಜಾವರ ಮಠದ ಶ್ರೀಶ್ರೀ ವಿಶ್ವಪ್ರಸನ್ನ ತೀರ್ಥರು ಭಾಗವಹಿಸಲಿದ್ದಾರೆ.

ಜನವರಿ 3ರಂದು ಆರಂಭ

ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು 2021ರ ಜನವರಿ 3ರಂದು ಆರಂಭಗೊಳ್ಳಲಿದ್ದು 8 ರವರೆಗೆ ನಡೆಯಲಿದೆ.

ಜನವರಿ 3ರಂದು ಬೆಳಗ್ಗೆ 7 ಗಂಟೆಗೆ ಪ್ರಾರ್ಥನೆ, ಪಂಚಗವ್ಯ, ಪುಣ್ಯಾಹ, ನಾಂದೀ ಶ್ರಾದ್ಧ, ಕಂಕಣ ಬಂಧ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಸೇರಿದಂತೆ ವಾಸ್ತು ಪೂಜಾ ಹೋಮ, ಸುದರ್ಶನ ಹೋಮ.

ಜ.4: ವಿಷ್ಣುಗ್ರಾಯತ್ರಿ ಹೋಮ, ಬಿಂಬ ಶುದ್ಧಿ, ಪವಮಾನ ಸೂಕ್ತ ಹೋಮ, ಪಾರಾಯಣಗಳು ಸಂಜೆ ಮೃತ್ತಿಕಾಧಿವಾಸ, ಉದಕ ಶಾಂತಿ.

ಜ.5: ವಿಷ್ಣು ಗಾಯತ್ರಿ ಮಂತ್ರ ಹೋಮ, ಮೂಲಮಂತ್ರ ಹೋಮ, ಪುರುಷ ಸೂಕ್ತ ಹೋಮ, ಬಿಂಬಶುದ್ಧಿ, ಸಂಜೆ ಚಕ್ರಾಬ್ಜ ಮಂಡಲ ಪೂಹಾ, ಆಶ್ಲೇಷ ಬಲಿ.

ಜ.6: ವಿಷ್ಣು ಗಾಯತ್ರಿ ಮಂತ್ರಹೋಮ, ನವಗ್ರಹ ಹೋಮ,ಶಿವಪಂಚಾಕ್ಷರೀ ಮಂತ್ರ ಹೋಮ, ಶ್ರೀ ಸೂಕ್ತ ಹೋಮ, ಶ್ರೀರಾಮಮಂತ್ರ ಹೋಮ, ಸಂಜೆ ಗಂಧಾಧಿವಾಸ, ಅಷ್ಟಾವಾನ, ರಾತ್ರಿ ಜಾಗರಣೆ.

ಜ.7: ಪ್ರತಿಷ್ಠಾ ಕಲಶ, ತತ್ವ ಹೋಮ, ಪರಿವಾರದೇವತಾ ಸಹಿತ ಶ್ರೀರಾಮ ದೇವರ ಅಷ್ಟಬಂಧ ಪ್ರತಿಷ್ಠಾಪೂರ್ವಕ ನೇತ್ರೋನ್ಮೀಲನ, ಮಂಗಲದ್ರವ್ಯ ನಿರೀಕ್ಷಣಾ ಕಲಷಾಭಿಷೇಕ ಮಹಾಮಂಗಳಾರತಿ, ಸಂಜೆ ಪೂಜಾ ಮಂಡಲ ರಚನಾ, ದೀಪಾರಾಧನೆ, ಶ್ರೀಗಳಿಂದ ಪ್ರವಚನ

ಜ. 8: ಪರಿವಾರ ದೇವತಾ ಸಹಿತ ಶ್ರೀರಾಮನಿಗೆ 108 ಬ್ರಹ್ಮಕಲಶಾಭಿಷೇಕ, ಮಹಾ ಪೂಜಾರಾಧನೆ, ಮಹಾಮಂತ್ರಾಲಯ ತೀರ್ಥ ಪ್ರಸಾದ ಜ.7, 8ರಂದು ಮಧ್ಯಾಹ್ನ 12.30ರಿಂದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles