ಭಕ್ತಿಯಿಂದ ನಮಿಸುವವರಿಗೆ ಸಕಲ ಸುಖವನ್ನು ಕೊಡುವ ಮಾತೆ ಶ್ರೀಲಲಿತೆ

*ಕೃಷ್ಣಪ್ರಕಾಶ್ ಉಳಿತ್ತಾಯ

ಇಂದ್ರಗೋಪಪರಿಕ್ಷಿಪ್ತಸ್ವರತೂಣಾಭಜಂಘಿಕಾ|
ಗೂಢಗುಲ್ಫಾಕೂರ್ಮಪೃಷ್ಠಜಯಿಷ್ಣುಪ್ರಪದಾನ್ವಿತಾ

ಇಂದ್ರಗೋಪಗಳಿಂದ ಮಾಡಿದ ಅಥವಾ ಮಚ್ಚಿದ ಮನ್ಮಥನ ಬತ್ತಳಿಕೆಯೇ ಲಲಿತಾ ಪರಮೇಶ್ವರಿಯ ಮೀನಖಂಡಗಳು. ತಾಯಿಯ ಮೀನಖಂಡಗಳು ಹೀಗೆ ಋಷಿಗೆ ಕಾಣುವುದನ್ನು ಮನ್ಮಥನ ಬತ್ತಳಿಕೆಗೆ ಹೋಲಿಸುತ್ತಾನೆ. ತಾಯಿಯ ನಡಿಗೆ ಮನ್ಮಥನ ಬತ್ತಳಿಕೆಗಳನ್ನು ಹೊತ್ತು ತರುವಂತೆ ಭಾಸವಾಗಿದೆ ಋಷಿಗೆ. ಇಂದ್ರಗೋಪಾ ಅಂದರೆ ಕೆಂಪು ಬಣ್ಣದ ಒಂದು ಬಗೆಯ ಹುಳು.
ಗೂಢಗುಲ್ಫಾ: ಮಾಂಸದಿಂದ ತುಂಬಿರುವ ಗುಲ್ಫವುಳ್ಳವಳು ಲಲಿತೆ.
ಕೂರ್ಮಪೃಷ್ಠಜಯಿಷ್ಣುಪ್ರಪದಾನ್ವಿತಾ: ಲಲಿತೆಯ ಪಾದದ ಮೇಲ್ಭಾಗ ಆಮೆಯಪೃಷ್ಠದಂತೆ ವೃತ್ತಾಕಾರವಾಗಿ ಖಂಡಾಕಾರವಾಗಿದೆ.

ಲಲಿತೆಯನ್ನು ಋಷಿ ಕೇವಲ ಬ್ರಹ್ಮಾನಂದಸ್ವರೂಪಿಣಿಯಾಗಿ ಕಾಣದೆ ರಸಾನಂದಸ್ವರೂಪಿಣಿಯಾಗಿಯೂ ಕಾಣುವುದನ್ನು ಇಲ್ಲಿ ನಾವು ನೋಡಬಹುದು. ಇಡೀ ಲಲಿತಾ ಸಹಸ್ರದ ಪ್ರಧಾನ ವಿವಕ್ಷೆಯಾಗಿ ಯೋಗ-ಭೋಗ ಸಮನ್ವಿಯೆಯಾಗಿರುವ ದೇವಿ ಲಲಿತೆ. ತಾಯಿಯನ್ನು ಭಕ್ತಿಪೂರ್ವಕವಾಗಿ ನಮಿಸುವರಿಗೆ ಪ್ರಾರ್ಥಿಸುವವರಿಗೆ ಬ್ರಹ್ಮಾನಂದದ ಜತೆಗೇ ಅಖಿಲ ಜಗತ್ತಿನ ಸುಖವನ್ನೂ ಕೊಟ್ಟು ಕಾಪಾಡುವವಳು ತಾಯಿ. ಈ ದೃಷ್ಟಿಯಿಂದ ಇಲ್ಲಿನ ವರ್ಣನೆಗಳನ್ನು ನೋಡಬೇಕು.

Related Articles

ಪ್ರತಿಕ್ರಿಯೆ ನೀಡಿ

Latest Articles