ಸಂಕ್ರಾಂತಿ ಹಬ್ಬದ ವಿಶೇಷ ಸಿಹಿ ತಿನಿಸು ಎಳ್ಳು ಶೇಂಗಾ ಹೋಳಿಗೆ ಮಾಡೋದು ಹೇಗೆ?

ಉತ್ತರ ಕರ್ನಾಟಕದವರಿಗೆ ಸಂಕ್ರಾಂತಿ ಹಬ್ಬದಂದು ಎಳ್ಳು -ಬೆಲ್ಲ, ಬಗೆಬಗೆ ಖಾದ್ಯಗಳ ಜತೆಗೆ ಎಳ್ಳು-ಶೇಂಗಾ ಹೋಳಿಗೆ ಇಲ್ಲದೇ ಹಬ್ಬದೂಟ ಸಂಪೂರ್ಣ ಆಗುವುದೇ ಇಲ್ಲ. ಆ ಸಿಹಿ ತಿನಿಸನ್ನು ಮನೆಯಲ್ಲೇ ಹೇಗೆ ಮಾಡಬಹುದು ಎಂಬುದರ ಕುರಿತ ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

ಕಡಲೆಬೀಜ – 1 ಕಪ್, ಎಳ್ಳು – ಒಂದು ಕಪ್ , ಹಾಲು – ಅರ್ಧ ಕಪ್, ಮೈದಾ – ಮುಕ್ಕಾಲು ಕಪ್, ರವೆ – ಕಾಲು ಕಪ್, ಬೆಲ್ಲ – ಮುಕ್ಕಾಲು ಕಪ್, ನೀರು – ಅರ್ಧ ಕಪ್, ಉಪ್ಪು ಚಿಟಿಕೆಯಷ್ಟು, ಏಲಕ್ಕಿ ಪುಡಿ – ಒಂದು ಚಮಚ.

ತಯಾರಿಸುವ ವಿಧಾನ :

ಒಂದು ಬಟ್ಟಲಿಗೆ ಮೈದಾ, ರವೆ ಮತ್ತು ಉಪ್ಪು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನೀರನ್ನು ಸ್ವಲ್ಪ ಸೇರಿಸಿ ಮೃದುವಾದ ಹಿಟ್ಟಿನ ಹದಕ್ಕೆ ಬೆರೆಸಿಕೊಳ್ಳಿ. ಇದನ್ನು 5 ನಿಮಿಷಗಳ ಕಾಲ ಬಿಡಿ. ಒಂದು ಬಾಣಲೆಯಲ್ಲಿ ಕಡಲೆಕಾಯಿಯನ್ನು ಹುರಿದು ತಣ್ಣಗಾದ ನಂತರ ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ಎಳ್ಳನ್ನು ಹುರಿದು, ಬೆಲ್ಲ, ಏಲಕ್ಕಿ ಸೇರಿಸಿ ಕಡಲೆಬೀಜ ಸೇರಿದಂತೆ ಎಲ್ಲವನ್ನು ಪುಡಿಮಾಡಿ. ಮಿಶ್ರಣಕ್ಕೆ ಹಾಲನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ.ಈಗ ಮೈದಾ ಹಿಟ್ಟನ್ನು ತೆಗೆದುಕೊಂಡು ಸಣ್ಣದಾಗಿ ಅದನ್ನು ಹೊಸೆದು ಅದರ ನಡುವೆ ಒಂದು ಚಮಚ ಕಡಲೆ ಹೂರಣವನ್ನು ಸೇರಿಸಿ. ಮೈದಾದಲ್ಲಿ ಕಡಲೆ ಮಿಶ್ರಣ ಪೂರ್ಣ ಮುಚ್ಚುವಂತೆ ಕೈಯಲ್ಲೇ ವೃತ್ತಾಕಾರವಾಗಿಸಿ. ಮೈದಾ ಹಿಟ್ಟಿನ ಸಹಾಯದಿಂದ ಚಪಾತಿ ಹದಕ್ಕೆ ಅದನ್ನು ನಯವಾಗಿ ಹೊಸೆದುಕೊಳ್ಳಿ. ನಂತರ ಅದನ್ನು ತವಾ ಮೇಲೆ ಸಣ್ಣ ಉರಿಯಲ್ಲಿ ಎರಡೂ ಬದಿಗಳನ್ನು ತಿರುಗಿಸಿ ಕಾಯಿಸಿಕೊಳ್ಳಬೇಕು.

Related Articles

ಪ್ರತಿಕ್ರಿಯೆ ನೀಡಿ

Latest Articles