ಶ್ರೀ ರಾಯರ ಸನ್ನಿಧಿಯಲ್ಲಿ ದಾಸವಾಣಿ ಸೇವೆ

ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ ಶ್ರೀ108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರ ನೇತೃತ್ವದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ ವಿಶೇಷ ಅಲಂಕಾರ ಹಾಗೂ ಉತ್ಸವ ದೀಪೋತ್ಸವ ಮಹಾಮಂಗಳಾರತಿ ನೆರವೇರಿಸಲಾಯಿತು. ಸಂಗೀತ ಸೇವೆ ಸಲ್ಲಿಸುವ ಭಕ್ತರು ಹೆಚ್ಚಿನ ಮಾಹಿತಿಗಾಗಿ ಕಿಶೋರ್ ಆಚಾರ್ಯ ಹಾಗೂ ಸುಧೀಂದ್ರ ದೇಸಾಯಿ ಇವರನ್ನು ಸಂಪರ್ಕಿಸಬಹುದು. “ಯುವ ಪ್ರತಿಭೆಗಳಿಗೆ” ಮೊದಲು ಆದ್ಯತೆ ಎಂದು ಆರ್ ಕೆ ವಾದೀಂದ್ರ ಆಚಾರ್ಯರು ತಿಳಿಸಿದ್ದಾರೆ. ಸಂಪರ್ಕಿಸಬೇಕಾದ ಸಂಖ್ಯೆ 8660349906-9980400535

ವಿದುಷಿ ಶ್ರೀಮತಿ ವಿಜಯಾ ಭಟ್ ಅವರ “ದಾಸವಾಣಿ” ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇಂದು ಸಂಜೆ ನಡೆದ “ದಾಸವಾಣಿ” ಕಾರ್ಯಕ್ರಮದಲ್ಲಿ ವಿದುಷಿ ಶ್ರೀಮತಿ ವಿಜಯಾ ಭಟ್ ಅವರು, ಶ್ರೀ ವಾದಿರಾಜರು ರಚಿಸಿದ “ಗಜಮುಖ ವಂದಿಸುವೆ” ಎಂಬ ಗಣೇಶನ ಕೃತಿಯೊಂದಿಗೆ ತಮ್ಮ ಗಾಯನ ಸೇವೆಯನ್ನು ಪ್ರಾರಂಭಿಸಿ, ಕಮಲೇಶದಾಸರ “ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ”, ಶ್ರೀ ಜಗನ್ನಾಥದಾಸರ “ಶರಣು ಶ್ರೀ ಗುರು ರಾಘವೇಂದ್ರಗೆ”, “ಹರಿಯೋಗ ತಾ ಎಂದು” (ಪುರಂದರದಾಸರು), “ದಾನ ಧರ್ಮವ ಮಾಡಿ” (ಕನಕದಾಸರು), “ಭಿಕ್ಷೆಯ ಹಾಕಿರಿ ಜೋಳಿಗೆಗೆ” (ವಿದ್ಯಾಪ್ರಸನ್ನ ತೀರ್ಥರು), “ಗಂಗಾ ತೀರದ ಮನೆ ನಮ್ಮದು” (ಪುರಂದರದಾಸರು), “ಶಾರದೆಯೇ ಕರುಣಾ ವಾರಿಧಿಯೇ” (ವಿಜಯದಾಸರು), “ಒಂದೇ ಮನದಿ ಭಜಿಸೋ” (ಪುರಂದರದಾಸರು), “ಇಂದು ನೋಡಿದೆ ನಂದತೀರ್ಥ” (ಜಗನ್ನಾಥದಾಸರು), “ಇಂಥಾ ಹೆಣ್ಣನು ನಾನೆಲ್ಲಿ ಕಾಣೆನು” (ಪುರಂದರದಾಸರು), “ದೇವಕಿ ಕಂದ ಮುಕುಂದ” (ಪುರಂದರದಾಸರು) ಮುಂತಾದ ಅಪರೂಪದ ಕೃತಿಗಳನ್ನು ಪ್ರಸ್ತುತಪಡಿಸಿದರು.

ಇವರಿಗೆ ಪಕ್ಕವಾದ್ಯದಲ್ಲಿ, ಪಿಟೀಲುನಲ್ಲಿ ವಿದ್ವಾನ್ ಶ್ರೀ ಬ್ರಹ್ಮಚಾರಿ ಮಾಲೂರು, ಮೃದಂಗದಲ್ಲಿ ವಿದ್ವಾನ್ ಶ್ರೀ ಶಂಕರ್ ಹೊಸಕೋಟೆ ಅವರು ಸಾಥ್ ನೀಡಿದರು. ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ವಾದೀಂದ್ರಾಚಾರ್ಯರು , ಪ್ರಧಾನ ಅರ್ಚಕರೂ, ಕಾರ್ಯಕ್ರಮದ ಮುಖ್ಯಸ್ಥರೂ ಆದ ಶ್ರೀ ನಂದಕಿಶೋರ್ ಆಚಾರ್ಯರು ಹಾಗೂ ನೆರೆದಿದ್ದ ಭಕ್ತಾದಿಗಳು ಕಾರ್ಯಕ್ರಮವನ್ನು ವೀಕ್ಷಿಸಿ, ಸಂತಸಪಟ್ಟರು.


Related Articles

ಪ್ರತಿಕ್ರಿಯೆ ನೀಡಿ

Latest Articles