ಕಷ್ಟ ಪರಿಹಾರಕೆ ಆಂಜನೇಯ ಮಂತ್ರ ಪಠಣೆ

ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಒಂದಲ್ಲ ಒಂದು ರೀತಿಯ ಕಷ್ಟಗಳು ಎದುರಾಗುತ್ತಲೇ ಇರುತ್ತವೆ. ಕಷ್ಟಗಳು ಮನುಷ್ಯನಿಗಲ್ಲದೇ ಮರಗಳಿಗೆ ಬರುತ್ತವೆಯೇ? ಎನ್ನುವ ಪ್ರಶ್ನೆ ಕಕಾಡಬಹುದು ಅವುಗಳಿಗೂ ಕಷ್ಟಗಳು ಬರುತ್ತವೆ. ಆದರೆ ಜೀವಿಗಳಲ್ಲಿ ಅತ್ಯಂತ ಬುದ್ಧಿವಂತ ಎನಿಸಿಕೊಂಡಿರುವ ಮಾನವನಿಗೆ ತನ್ನ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ಶಕ್ತಿಯೂ ಇದೆ.
ಕಷ್ಟದ ಸಂದರ್ಭಗಳಲ್ಲಿ ನಮಗೆ ನೆನಪಾಗುವುದು ಕಾಣದ ಶಕ್ತಿ. ನಿರಾಕಾರ ಶಕ್ತಿಯ ಮೂಲಕ ಅಭಯ ನೀಡುವ ಭಗವಂತನ ನಾಮಸ್ಮರಣೆ ಬದುಕಿಗೊಂದು ದಾರಿ ತೋರುತ್ತದೆ. ಭಕ್ತಿಯಿಂದ ಪೂಜಿಸಿದರೆ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆ ಮೂಡುತ್ತದೆ. ಇಷ್ಟದೈವವನ್ನು ಭಕ್ತಿಯಿಂದ ಪೂಜಿಸಿದರೆ ಕಷ್ಟಗಳು ಪರಿಹಾರ ಆಗುತ್ತವೆ ಎನ್ನುವ ನಂಬಿಕೆ.

ಹನುಮಂತ ಎಂದರೆ ಧೈರ್ಯ ಮತ್ತು ಆತ್ಮವಿಶ್ವಾಸದ ಸಂಕೇತ. ಹಾಗಾಗಿ ಸ್ವತಃ ತಾನೇ ರಾಮನನ್ನು ಲಂಕೆಗೆ ಕರೆದುಕೊಂಡು ಹೋಗಿ ಸೀತೆಯನ್ನು ರಾಮನಿಗೆ ಮರಳಿ ತಂದುಕೊಟ್ಟವರು ಹನುಮಂತ. ಸ್ವತಃ ಭಗವಂತನಿಗೆ ಸಹಾಯ ಮಾಡಿದವನು ಆಂಜನೇಯ. ಹಾಗಾಗಿ ಧೈರ್ಯ ಮತ್ತು ಸ್ಥೈರ್ಯ ಹೆಚ್ಚಾಗಬೇಕು ಎಂದರೆ ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡಬೇಕು.
ಮತ್ತೆ ಮತ್ತೆ ಕಾಡುವ ಕಷ್ಟಗಳ ಪರಿಹಾರಕ್ಕೆ ಆಂಜನೇಯನ ಈ ಮಂತ್ರವನ್ನು ಪಠಿಸಬೇಕು.


ಮಂತ್ರ 
||ಓಂ ಏಂ ರೀಂ ಕ್ಲಿಂ ಧಿನಂ ಕಂಪೆ ಧರ್ಮಾತ್ಮ ಪ್ರೇಮಾದ್ಬಿ ರಾಮವಲ್ಲಭ ಅದ್ವೈಯಂ ಮಾರುತೆ ವಿರಮೇ ಭ್ಯಕ್ತೆ ಸತ್ವ ರಾಮ ಕ್ಲಿಂ ರೀಂ ಏಂ ಓಂ||
ಈ ಮಂತ್ರವನ್ನು ಪ್ರತಿನಿತ್ಯ ಪಠಣೆ ಮಾಡಬೇಕು ಅಥವಾ ಪ್ರತಿದಿನ 108 ಬಾರಿ ಹನುಮಂತನ ನಾಮವನ್ನು ಜಪಿಸಬೇಕು ಅಥವಾ ಅಷ್ಟೋತ್ತರ ನಾಮವನ್ನು ಜಪಿಸಬೇಕು, ನಂತರ ಪೂಜೆ ಮಾಡಿ ದೀಪಾರಾಧನೆ ಮಾಡಬೇಕು.
ಈ ಮಂತ್ರವನ್ನು ಸದಾ ಜಪ ಮಾಡಬೇಕು ಆಂಜನೇಯಸ್ವಾಮಿ ಮಂತ್ರವನ್ನು ಪ್ರತಿನಿತ್ಯ ಜಪ ಮಾಡುವುದರಿಂದ ನಮ್ಮ ಜೀವನದಲ್ಲಿ ಬರುವ ಕಷ್ಟಗಳನ್ನು ನಿವಾರಣೆಯಾಗುತ್ತವೆ ಶನಿ ದೋಷ ನಿವಾರಣೆಯಾಗುತ್ತವೆ ಸಾಲದ ಸಮಸ್ಯೆ ಮಾನಸಿಕ ಸಮಸ್ಯೆ ಆರ್ಥಿಕ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ದೊರೆಯುತ್ತದೆ ಸಕಲ ಕಷ್ಟಗಳು ನಿವಾರಣೆಯಾಗುತ್ತವೆ, ಇಷ್ಟಾರ್ಥಗಳು ಈಡೇರುತ್ತವೆ ಹಾಗೂ ಆಂಜನೇಯಸ್ವಾಮಿ ಕೃಪಾಕಟಾಕ್ಷದಿಂದ ದೈಹಿಕ ಶಕ್ತಿ, ಮಾನಸಿಕ ಶಕ್ತಿ ಕೂಡ ಹೆಚ್ಚಾಗುತ್ತದೆ. ಎಂತಹದೇ ಕಷ್ಟ ಬಂದರೂ ಕೂಡ ಸುಲಭವಾಗಿ ಎದುರಿಸುವ ಧೈರ್ಯ ಆತ್ಮಸ್ಥೈರ್ಯ ಬರುತ್ತದೆ. ಜೀವನದಲ್ಲಿ ಸುಖ ಸಂತೋಷ ಇರುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles