ಯುವ ಜನಾಂಗದಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಗೊಳ್ಳಲಿ: ಶ್ರೀ ರಂಭಾಪುರಿ ಜಗದ್ಗುರುಗಳು

ರಂಭಾಪುರಿ ಪೀಠ (ಬಾಳೆಹೊನ್ನೂರು) :
ಯುವ ಜನಾಂಗದಲ್ಲಿ ಅದ್ಭುತ ಶಕ್ತಿಯಿದೆ. ಉತ್ತಮ ಸಂಸ್ಕಾರ ಮತ್ತು ಸದ್ವಿಚಾರಗಳನ್ನು ಬೆಳೆಸಿದರೆ ಗುಣಾತ್ಮಕ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರೀ ರಂಭಾಪುರಿ ಪೀಠದಲ್ಲಿ ಮಾರ್ಚ್ 25 ರಂದು ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ‘ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ’ ಚಿಂತನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಯೌವನ, ಧನ ಸಂಪತ್ತು, ಅಧಿಕಾರ, ಅವಿವೇಕತನ ಈ ನಾಲ್ಕರಲ್ಲಿ ಒಂದಿದ್ದರೆ ಸಾಕು. ಮನುಷ್ಯ ಜೀವನ ಹಾಳಾಗಲಿಕ್ಕೆ ಸಾಧ್ಯ. ಆದರೆ ಈ ನಾಲ್ಕು ಒಬ್ಬರಲ್ಲಿ ಮನೆ ಮಾಡಿದರೆ ಸರ್ವನಾಶ. ಆದ್ದರಿಂದ ಯೌವಾನಾವಸ್ಥೆಯಲ್ಲಿ ಬಹಳ ಜಾಗರೂಕತೆಯಿಂದ ಬದುಕು ಕಟ್ಟಿಕೊಳ್ಳಬೇಕಾಗಿದೆ. ಸಂಸ್ಕಾರ ಮತ್ತು ಅವುಗಳ ಪರಿಪಾಲನೆಯಿಂದ ಸುಖ ಶಾಂತಿಯ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸಬೇಕೆಂದರು.
ಸಾನ್ನಿಧ್ಯ ವಹಿಸಿದ ಶ್ರೀ ಕೇದಾರ ಜಗದ್ಗುರು ಭೀಮಾಶಂಕರ ಭಗವತ್ಪಾದರು, “ವೀರಶೈವ ಧರ್ಮದಲ್ಲಿ ಬುದ್ಧಿಗಿಂತ ಸಂಸ್ಕಾರಕ್ಕೆ ಬಹಳಷ್ಟು ಮಹತ್ವ ಕೊಟ್ಟಿದ್ದಾರೆ. ತತ್ವ ಸಿದ್ಧಾಂತಗಳ ಅರಿವಿನ ಹಾದಿಯಲ್ಲಿ ನಡೆದಾಗ ಸಶಕ್ತ ಜೀವನ ಪಡೆಯಲು ಸಾಧ್ಯವಾಗುತ್ತದೆ’ ಎಂದು ನುಡಿದರು.

ಮೈಸೂರು ಜಪದಕಟ್ಟೆ ಮಠದ ಮುಮ್ಮಡಿ ಚಂದ್ರಶೇಖರ ಶ್ರೀಗಳು ‘ಸಿದ್ಧಾಂತ ಶಿಖಾಮಣಿ ಭಾವಾರ್ಥ ನಿರೂಪಣೆ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿ, “ಇದೊಂದು ಅಮೂಲ್ಯ ಕೃತಿ. ಜೀವನಾದರ್ಶನದ ಮೌಲ್ಯಗಳನ್ನು ಕಾಣಬಹುದು. ಜೀವಾತ್ಮ ಪರಮಾತ್ಮನಾಗಲು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ ಸಿದ್ಧಾಂತಗಳು ನಮ್ಮೆಲ್ಲರ ಬಾಳ ಬದುಕಿಗೆ ಬೆಳಕು ಕೊಡುತ್ತವೆ ಎಂದರು.

ಹಣವಾಳ ಗ್ರಾ.ಪಂ.ಸದಸ್ಯ ಸೋಮನಾಥಯ್ಯ ಕುಲಕರ್ಣಿ ಅವರು ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ ವಿಚಾರವಾಗಿ ಮಾತನಾಡಿ, ಯುವ ಜನಾಂಗದಲ್ಲಿರುವ ಕ್ರಿಯಾ ಕರ್ತೃತ್ವ ಶಕ್ತಿ ಸದ್ಬಳಕೆ ಮಾಡಿಕೊಂಡರೆ ನಾಡು ನುಡಿ ಸಮೃದ್ಧಗೊಳ್ಳಲು ಸಾಧ್ಯ. ಧರ್ಮಾಚರಣೆಯಿಂದ ಯುವ ಜನಾಂಗ ದೂರ ಸರಿದರೆ ಭವಿಷ್ಯವಿಲ್ಲ. ಸಂಸ್ಕಾರವ0ತರಾಗಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ದೃಢ ಸಂಕಲ್ಪ ಕೈಗೊಳ್ಳಬೇಕಾಗಿದೆ ಎಂದರು.
ಸಮಾರಂಭ ಉದ್ಘಾಟಿಸಿದ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡರು ಮಾತನಾಡಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಅಗಸ್ತö್ಯ ಮಹರ್ಷಿಗೆ ಶಿವಾದ್ವೆöÊತ ಸಿದ್ಧಾಂತ ಬೋಧಿಸಿದ ಸ್ಥಳ ಶ್ರೀ ರಂಭಾಪುರಿ ಪೀಠವಾಗಿದೆ. ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಧಿಕಾರಕ್ಕೆ ಬಂದ ನಂತರ ಶ್ರೀ ಪೀಠವನ್ನು ಸಾಮಾಜಿಕ ಶೈಕ್ಷಣಿಕ ಧಾರ್ಮಿಕವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀ ಪೀಠ ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಆಧ್ಯಾತ್ಮಿಕವಾಗಿ ಗುರುತಿಸುವುದರಲ್ಲಿ ಸಂದೇಹವಿಲ್ಲ ಎಂದರು.
ಕಣ್ವಕುಪ್ಪಿ ಗವಿಮಠದ ಡಾ. ನಾಲ್ವಡಿ ಶಾಂತಲಿ0ಗ ಶ್ರೀಗಳು ಮಾತನಾಡಿ ಗುರು ಮತ್ತು ಗುರಿಯಿಟ್ಟು ಬಾಳಿದರೆ ಬದುಕು ಉಜ್ವಲವಾಗುವುದೆಂದರು. ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ನೇತೃತ್ವ ವಹಿಸಿ ಯುವ ಜನತೆ ಧರ್ಮ ಪ್ರಜ್ಞೆ ಬೆಳೆಸಿಕೊಂಡು ಮುನ್ನಡೆಯಬೇಕೆಂದರು.

ಮುಖ್ಯ ಅತಿಥಿಗಳಾಗಿ ಸಿ.ಮೃತ್ಯುಂಜಯಸ್ವಾಮಿ ಕಾರ್ಯದರ್ಶಿಗಳು, ಸಣ್ಣ ನೀರಾವರಿ ಇಲಾಖೆ ಕರ್ನಾಟಕ ಸರ್ಕಾರ, ಡಾ|| ಬೇಳೂರು ರಾಘವೇಂದ್ರ ಶೆಟ್ಟಿ, ಅಧ್ಯಕ್ಷರು ಕರಕುಶಲ ಅಭಿವೃದ್ಧಿ ನಿಗಮ ಕರ್ನಾಟಕ ಸರ್ಕಾರ, ಎನ್.ಜೆ. ರಾಜಶೇಖರ (ಸುಭಾಷ) ಅಧ್ಯಕ್ಷರು ಶ್ರೀ ಬಸವೇಶ್ವರ ವೀರಶೈವ ಸೇವಾ ಸಂಘ(ರಿ) ಶಿವಮೊಗ್ಗ ಭಾಗವಹಿಸಿದ್ದರು. ಸುಳ್ಳ, ಶಿರಕೋಳ, ಮಳಲಿ, ಸಂಗೊಳ್ಳಿ, ಎಂ.ಚ0ದರಗಿ ಶ್ರೀಗಳು ಸೇರಿದಂತೆ ನಾಡಿನ 25 ಕ್ಕೂ ಹೆಚ್ಚು ಶ್ರೀಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶ್ರೀಗಳು, ಚಳಗೇರಿ ವೀರಸಂಗಮೇಶ್ವರ ಶ್ರೀಗಳು, ತರೀಕೆರೆ ತಾಲೂಕಾ ವೀರಶೈವ ಸಮಾಜದ ಅಧ್ಯಕ್ಷ ಎಂ.ಬಿ. ಗಿರಿರಾಜು, ಚಿಕ್ಕಮಗಳೂರು ತಾಲೂಕಾ ವೀರಶೈವ ಸಮಾಜದ ಅಧ್ಯಕ್ಷ ಬಿ.ಎ. ಶಿವಶಂಕರ, ಬೆಂಗಳೂರಿನ ಬಸವರಾಜ ಕನಕಪುರ, ಹುಬ್ಬಳ್ಳಿಯ ವೀರೇಶ ಪಾಟೀಲ ಹಾಗೂ ದೇವರಹಿಪ್ಪರಗಿಯ ಬಾಳಯ್ಯ ಇಂಡಿಮಠ ಇವರೆಲ್ಲರಿಗೆ ಶ್ರೀ ರಂಭಾಪುರಿ-ಕೇದಾರ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಶಿವಮೊಗ್ಗದ ಕುಮಾರಿ ಜಿ.ಜಿ. ರಕ್ಷಿತಾರಿಂದ ಭರತ ನಾಟ್ಯ ಜರುಗಿತು. ಶಿವಮೊಗ್ಗದ ಮಧುರ ಕಲಾವೃಂದದ ನಾಗರತ್ನ ಸುರೇಶ ಸಂಗಡಿಗರು ಭಕ್ತಿ ಗೀತೆ ಹಾಡಿದರು. ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಆರ್.ಡಿ. ಮಹೇಂದ್ರ ಸ್ವಾಗತಿಸಿದರು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.
ಬೆಳಗ್ಗೆ ಉಭಯ ಜಗದ್ಗುರುಗಳವರಿಂದ ಧರ್ಮ ಧ್ವಜಾರೋಹಣ ನೆರವೇರಿತು. ಹರಿದ್ರಾ ಲೇಪನ ಪೂಜೆಯೊಂದಿಗೆ ಶ್ರೀ ವೀರಭದ್ರಸ್ವಾಮಿ ಚಿಕ್ಕರಥೋತ್ಸವ ಜರುಗಿತು. ಸಿದ್ಧರಬೆಟ್ಟ, ಸುಳ್ಳ, ಶಿರಕೋಳ, ಮಳಲಿ, ಸಂಗೊಳ್ಳಿ ಮೊದಲಾದ ಮಠಾಧೀಶರು ಪಾಲ್ಗೊಂಡಿದ್ದರು.

ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು.

Related Articles

ಪ್ರತಿಕ್ರಿಯೆ ನೀಡಿ

Latest Articles