ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀರಾಯರ ದರ್ಶನಕ್ಕೆ ಭಕ್ತರಿಗೆ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು: ಇಲ್ಲಿನ ಜಯನಗರ 5ನೇ ಬ್ಲಾಕ್‌ನಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಕೋವಿಡ್ ನಿಯಮಾವಳಿಗಳನ್ನು ಮಾಡಲಾಗಿದ್ದು ಭಕ್ತರು ಪಾಲಿಸುವಂತೆ ಶ್ರೀಮಠದ ವ್ಯವಸ್ಥಾಪಕರು ಭಕ್ತರಲ್ಲಿ ವಿನಂತಿ ಮಾಡಿದ್ದಾರೆ.

ರಾಯರ ಮಠಕ್ಕೆ ದರ್ಶನಕ್ಕೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸತಕ್ಕದ್ದು. ಮಠದ ಆವರಣದಲ್ಲಿ ಧರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ಇಡಲಾಗಿದೆ. ಮಠದ ಆವರಣದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಕ್ಕಾಗಿ ಸ್ಕ್ವೇರ್ ಬಾಕ್ಸ್ ಹಾಕಲಾಗಿದೆ.
ಗುರುವಾರದ ದಿನ ಪ್ರದಕ್ಷಿಣೆಗೆ ಅವಕಾಶ ಇರುವುದಿಲ್ಲ. ಪ್ರಾಕಾರದಲ್ಲಿ ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವುದಕ್ಕಾಗಿ 50 ಜನರಿಗೆ ಮಾತ್ರ ಸೀಮಿತಗೊಳಿಸಿ, ಶ್ರೀ ಗುರುರಾಯರ ದರ್ಶನ ಪಡೆದ ನಂತರ ಭಕ್ತರನ್ನು ಹೊರಗಡೆ ಕಳುಹಿಸಿ ನಂತರ ಪುನ:ಭಕ್ತರನ್ನು ಒಳಗಡೆ ಬಿಡಲಾಗುವುದು ಎಂದಿನಂತೆ ಇತರ ಸೇವೆಗಳು ನೆರವೇರಲಿದೆ .ಆದರೆ ಪ್ರತಿ ಗುರುವಾರ ಇನ್ನು ಮುಂದೆ ಸಾರ್ವಜನಿಕವಾಗಿ ಅನ್ನಸಂತರ್ಪಣೆ ಇರುವುದಿಲ್ಲ. ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ಹಾಗೂ ಪರಮಪೂಜ್ಯ ಮಂತ್ರಾಲಯದ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.ಈ ಸಂದರ್ಭದಲ್ಲಿ ಕಿಶೋರ್ ಆಚಾರ್ಯ ಹಾಗೂ ಮಠದ ಸಿಬ್ಬಂದಿಗಳು ಭಕ್ತಾದಿಗಳು ಉಪಸ್ಥಿತರಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles