ಭಗವದ್ಗೀತೆ ಉಚಿತ ಆನ್‌ಲೈನ್ ಕ್ಲಾಸ್

ಭಗವದ್ಗೀತೆಯನ್ನು ನಿರಂತರವಾಗಿ ಪ್ರಚುರ ಪಡಿಸುವ ಉದ್ದೇಶದಿಂದ ಬನ್ನಿ ಭಗವದ್ಗೀತೆ ಕಲಿಯೋಣ ಎಂಬ ವಿಶೇಷ ಕಾರ್ಯಕ್ರಮವನ್ನು ಗೀತಾ ಪರಿವಾರ್ ಎಂಬ ಸಂಸ್ಥೆ ಹಮ್ಮಿಕೊಂಡಿದ್ದು, ಆನ್‌ಲೈನ್ ಮೂಲಕ ತರಗತಿಗಳು ನಡೆಯಲಿವೆ. ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಒಟ್ಟು ಹತ್ತು ಭಾಷೆಗಳಲ್ಲಿ ತರಗತಿಗಳು ನಡೆಯಲಿದ್ದು ಆಸಕ್ತರು ಭಾಗವಹಿಸಬಹುದು.

ಜೂನ್ 2020ರಿಂದ ಇಲ್ಲಿಯವರೆಗೆ 1,50,000 ಕ್ಕಿಂತಲೂ ಹೆಚ್ಚು ಗೀತಾಪ್ರೇಮಿ ಸಾಧಕರಿಗೆ ಪ್ರವೇಶ ನೀಡಲಾಗಿದೆ. ಜುಲೈ 2021 ರಲ್ಲಿ ಆರಂಭವಾಗುವ ಬ್ಯಾಚ್‌ಗೆ 50,000 ಕ್ಕಿಂತ ಹೆಚ್ಚು ಪ್ರಶಿಕ್ಷಕಾರ್ಥಿಗಳನ್ನು ಸೇರಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನ ಮುಖವಾಣಿಯಿಂದ ಬಂದ “ನ ಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೇ ಪ್ರಿಯಕೃತ್ತಮಃ” ಘೋಷಣೆಯಂತೆ, ಯಾರು ಮನಃಪೂರ್ವಕ ಸಾಧನೆಯಿಂದ ಗೀತೆಯನ್ನು ಪಠಿಸಬಲ್ಲವರಾಗುತ್ತಾರೋ ಅವರು ನಿಶ್ಚಿತವಾಗಿಯೂ ಭಗವಂತನ ಕೃಪೆಗೆ ಪಾತ್ರರಾಗುತ್ತಾರೆ. ಈ ದಿವ್ಯಭಾವನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ನೀವೂ ಗೀತೆಯ ಶುದ್ಧ ಸಂಸ್ಕೃತ ಪಠಣಕ್ಕಾಗಿ ಈ ಆನ್‌ಲೈನ್ ಉಚಿತ ಗೀತೆ ಕಲಿಕೆ ತರಗತಿಗಳಿಗೆ ನೋಂದಾಯಿಸಿಕೊಳ್ಳಿ.

ಗೀತಾ ಪರಿವಾರ 20 ದಿನಗಳಲ್ಲಿ 2 ಅಧ್ಯಾಯಗಳ ಶುದ್ಧ ಸಂಸ್ಕೃತ ಪಠಣದ ಶಿಕ್ಷಣ.

● ಎಲ್ಲ ಹಂತಗಳಿಗೂ ನಿಃಶುಲ್ಕ ಪ್ರವೇಶ.

● ಅಧ್ಯಾಯಗಳನ್ನು ಓದಿ ವಿಡಿಯೊ ಮಾಡಿ ಕಳುಹಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ *’ಗೀತಾಗುಂಜನ’ ಇ-ಪ್ರಮಾಣಪತ್ರ.

● ವಾರದಲ್ಲಿ 5 ದಿನ (ಸೋಮವಾರದಿಂದ ಶುಕ್ರವಾರದವರೆಗೆ)

  • Zoom ಮೂಲಕ ತಲಾ 40 ನಿಮಿಷಗಳ ಒಟ್ಟು 20 ತರಗತಿಗಳು

● ವಾರಾಂತ್ಯಗಳಲ್ಲಿ ಹಿಂದೀ ಮತ್ತು ಇಂಗ್ಲಿಷ್‌ನಲ್ಲಿ ಅರ್ಥ ವ್ಯಾಖ್ಯಾನ ತರಗತಿಗಳು (Weekly Interpretation Session in Hindi & English).

● ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ (IST) ದಿನದಲ್ಲಿ 10 ಬೇರೆಬೇರೆ ಸಮಯದ ತರಗತಿಗಳ ಆಯ್ಕೆ.

● 10 ಭಾಷೆಗಳಲ್ಲಿ ತರಗತಿಗಳು ನಡೆಯುತ್ತವೆ. ಯಾವುದನ್ನಾದರೂ ಆಯ್ದುಕೊಳ್ಳಬಹುದು (ಹಿಂದೀ, ಇಂಗ್ಲಿಷ್, ಮರಾಠಿ, ಗುಜರಾತಿ, ತೆಲುಗು, ತಮಿಳು, ಕನ್ನಡ, ಮಲಯಾಳಂ, ಬಂಗಾಳಿ, ಒಡಿಯಾ).

● ಈ ಕೆಳಗಿನ ಲಿಂಕ್‌ ಬಳಸಿ ನಿಮ್ಮ ನೋಂದಾವಣೆ ಪತ್ರ ಕಳುಹಿಸಿ: https://learngeeta.com/reg/ Please select your Language and Time slots carefully in Online registration form. NRIs should be careful on time, all mentioned time in form are IST.

Related Articles

ಪ್ರತಿಕ್ರಿಯೆ ನೀಡಿ

Latest Articles