‘ಸಂಸ್ಕೃತಿಯ ಸಾಧನಾ ಪದ್ಧತಿ ಯೋಗ’

ಮೈಸೂರು: ‘ಭಾರತೀಯ ಸಂಸ್ಕೃತಿಯ ಒಂದು ವಿಶಿಷ್ಟ ಸಾಧನಾ ಪದ್ಧತಿ ಯೋಗ’ ಎಂದು ವಿಜಯಪುರದ ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಹೇಳಿದರು.

ಜೆಎಸ್‍ಎಸ್ ಮಹಾವಿದ್ಯಾಪೀಠದ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸೋಮವಾರ ನಡೆದ ‘ಜ್ಞಾನವಾರಿಧಿ-35’ ವರ್ಚ್ಯುವಲ್‌ ಕಾರ್ಯಕ್ರಮದಲ್ಲಿ ‘ಪತಂಜಲಿ ಯೋಗ ಸೂತ್ರ’ ಕುರಿತು ಅವರು ಉಪನ್ಯಾಸ ನೀಡಿದರು.

‘ಪತಂಜಲಿ ಮಹರ್ಷಿಗಿಂತಲೂ ಪೂರ್ವದಲ್ಲಿ ಯೋಗ ಪ್ರಚಲಿತದಲ್ಲಿತ್ತು. ಆದರೆ, ಅದನ್ನು ಶಾಸ್ತ್ರೀಯ ಚೌಕಟ್ಟಿಗೆ ತಂದು ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟವರು ಪತಂಜಲಿ ಮಹರ್ಷಿ. ಅವರಿಂದ ರಚಿತವಾದ ಗ್ರಂಥವೇ ‘ಪತಂಜಲಿ ಯೋಗ ಸೂತ್ರ’ ಎಂದು ತಿಳಿಸಿದರು. ‘ಯೋಗದ ಸಾರಾಂಶವನ್ನೆಲ್ಲ ಸಂಕ್ಷಿಪ್ತಗೊಳಿಸಿ ಪತಂಜಲಿ ಮುನಿಗಳು 195 ಸೂತ್ರಗಳನ್ನು ರಚಿಸಿದ್ದಾರೆ. ಯೋಚನೆಗಳು ಅಕ್ಲಿಷ್ಟವಾಗಿರಬೇಕೆ ಹೊರತು ಕ್ಲಿಷ್ಟವಾಗಿರಬಾರದು. ಇದ್ದದ್ದನ್ನು ಬಿಟ್ಟು ಇಲ್ಲದ್ದನ್ನು ಚಿಂತಿಸುವುದು ಮನಸ್ಸಿನ ವಿಕಲ್ಪ’ ಎಂದರು.

ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಪಂಡಿತರು, ಸಾರ್ವಜನಿಕರು ಭಾಗವಹಿಸಿದ್ದರು. ಬಿ. ಭಾನುಮತಿ ಹಾಗೂ ಭಾರತಿ ಪ್ರಾರ್ಥಿಸಿದರು. ಡಾ. ದೇವನೂರು ಮಹೇಂದ್ರಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles