ಧನುರ್ಮಾಸ ಸಂಗೀತೋತ್ಸವ

ಬೆಂಗಳೂರು: ಬಳೇಪೇಟೆಯಲ್ಲಿರುವ ಪುರಾತನ ದೇವಾಲಯವಾದ ಶ್ರೀ ಲಾಲ್ ದಾಸ್ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ, ಶ್ರೀ ಲಾಲ್ ದಾಸ್ ಭಕ್ತ ಆಂಜನೇಯ ಸ್ವಾಮಿ ಭಜನಾ ಮಂಡಳಿಯು ಡಿಸೆಂಬರ್ 28 ರಂದು ಬೆಳಗ್ಗೆ 6-30ಕ್ಕೆ ಏರ್ಪಡಿಸಿದ್ದ “ಉದಯರಾಗ” ಕಾರ್ಯಕ್ರಮದಲ್ಲಿ ರಮ್ಯಾ ಸುಧೀರ್ ಅವರು,”ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ” ಎಂಬ ಶ್ಲೋಕದಿಂದ ಕಾರ್ಯಕ್ರಮವನ್ನು ಆರಂಭಿಸಿ, “ಏಳು ನಾರಾಯಣನೇ ಏಳು ಲಕ್ಷ್ಮೀರಮಣ” (ಪುರಂದರದಾಸರು), “ಶ್ರೀಮನ್ನಾರಾಯಣ” (ಅನ್ನಮಯ್ಯ) , “ಕಂಡೆ ಕಂಡೆನು ಕೃಷ್ಣಾ ನಿನ್ನಯ” (ವಾದಿರಾಜರು), “ಗೋವಿಂದ ಹರೇ ಗೋಪಾಲ ಹರೇ” (ಭಜನ್), “ನಾರಾಯಣನ ಸಗುಣ” (ಅನ್ನಮಯ್ಯ), “ಭಕ್ತಜನಪಾಲಕ” (ವಾದಿರಾಜರು), “ಏನ್ ಸವಿ ಏನ್ ಸವಿ ಹರಿನಾಮ” (ಪುರಂದರದಾಸರು), “ಶರಣು ವೆಂಕಟರಮಣ ನಿನ್ನ ಚರಣವ ನಂಬಿಹೆ ನಾನು” (ಪುರಂದರದಾಸರು), “ಅನ್ನಿಮಂತ್ರಮುಲು ಇಂದೆ” (ಅನ್ಯಮಯ್ಯ), ಇಷ್ಟು ಕೃತಿಗಳನ್ನು ಹಾಡಿ, ಕನಕದಾಸರ “ಅಂಬುಜದಳಾಕ್ಷಗೆ ಮಂಗಳ” ಎಂಬ ಹಾಡಿನೊಂದಿಗೆ ಇಂದಿನ “ಉದಯರಾಗ” ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.

ಮೃದಂಗದಲ್ಲಿ ವಿದ್ವಾನ್ ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಹಾಗೂ ವಿದ್ವಾನ್ ಶ್ರೀ ಸಾಗರ್ ವಶಿಷ್ಟ ಅವರು, ಹಾರ್ಮೋನಿಯಂ ನಲ್ಲಿ ವಿದ್ವಾನ್ ಶ್ರೀ ನಾಗೇಶ್ ಅವರು ಸಾಥ್ ನೀಡಿದರು.

ವರದಿ : ದೇಸಾಯಿ ಸುಧೀಂದ್ರ

Related Articles

ಪ್ರತಿಕ್ರಿಯೆ ನೀಡಿ

Latest Articles