ರಾಯರ ಸನ್ನಿಧಿಯಲ್ಲಿ ಪ್ರವಚನ- ಶ್ರೀಹರಿ ಭಜನೆ – ದಾಸವಾಣಿ ಸಮಾರೋಪ

ಬೆಂಗಳೂರು: ಜಯನಗರದ 5 ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಶ್ರೀ108 ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಹಾಗೂ ಟಿಟಿಡಿ ಹಿಂದೂ ಧರ್ಮ ಪ್ರಚಾರ ಪರಿಷತ್ನ ಸಹಕಾರದೊಂದಿಗೆ ನಾಲ್ಕು ದಿನಗಳ ಕಾಲ ಪ್ರತಿದಿನ ಸಂಜೆ 6 ರಿಂದ 7 ರವರಗೆ ಭಜನಾ ಮಂಡಳಿಯವರು ಭಜನೆ ನೆರವೇರಿಸಿದರು.

ನಂತರ ವಿದ್ವಾನ್- ಅಗ್ನಿಹೋತ್ರಿ ವೇಣುಗೋಪಾಲಾಚಾರ್ಯ ರು “ಕಲಿಯುಗ ಕಲ್ಪತರು” ಎಂಬ ಶ್ರೀ ರಾಯರ ಗ್ರಂಥದ ಪ್ರವಚನವನ್ನು ಸಂಜೆ 7 ರಿಂದ 8 ರವರೆಗೆ ನಡೆಸಿಕೊಟ್ಟರು.

ಡಿ. 31 ರಂದು ಶ್ರೀಹರಿ ಭಜನೆ ಹಾಗೂ ಪ್ರವಚನದ ಮಂಗಳ ಮಹೋತ್ಸವದಲ್ಲಿ ವಿದ್ವಾನ್-ವೇಣುಗೋಪಾಲಾಚಾರ್ಯರಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ರಾಜಾ ಕೆ. ವಾದೀಂದ್ರಾಚಾರ್ಯರು ಶ್ರೀ ಗುರುರಾಯರ ಶೇಷವಸ್ತ್ರ ಫಲಮಂತ್ರಾಕ್ಷತೆಯೊಂದಿಗೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿ.ಕೆ ಆಚಾರ್, ಶ್ರೀ ಮಠದ ಸಿಬ್ಬಂದಿಗಳು ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಜ್ಞಾನಯಜ್ಞ ಪ್ರವಚನದಲ್ಲಿ ಭಗವತ್ ಭಕ್ತರು ಸನ್ನಿಧಿಯಲ್ಲಿ ಭಾಗವಹಿಸಿ ಶ್ರೀ ರಾಯರ ಅನುಗ್ರಹಕ್ಕೆ ಪಾತ್ರರಾದರೆ0ದು ಪುರೋಹಿತರಾದ ನಂದಕಿಶೋರ್ ಆಚಾರ್ಯರು ತಿಳಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles