ಭಜನೆ- ಪ್ರವಚನ- ಕೀರ್ತನ

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಬೆಂಗಳೂರಿನ ಪೂರ್ಣಪ್ರಜ್ಞ ಲೇಔಟ್ನಲ್ಲಿರುವ ಕಲ್ಪವೃಕ್ಷ ಕ್ಷೇತ್ರ- ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಸನ್ನಿಧಾನದ ಸಂಯುಕ್ತ ಆಶ್ರಯದಲ್ಲಿ ಜನವರಿ 4 ರಿಂದ 7 ರ ವರೆಗೆ ಪ್ರತಿದಿನ ಸಂಜೆ 6 ರಿಂದ 8 ಗಂಟೆಯವರೆಗೆ ಭಜನ-ಪ್ರವಚನ-ಕೀರ್ತನ ಕಾರ್ಯಕ್ರಮಗಳನ್ನು ಏರ್ಪಡಿಸಿದೆ.

ಪ್ರತಿದಿನ ಸಂಜೆ 7 ಗಂಟೆಗೆ ಪವಮಾನಾಚಾರ್ ಕೊಲ೯ಹಳ್ಳಿ ಅವರಿಂದ ಪ್ರವಚನ.

 ಜನವರಿ 4 ರಂದು ಸಂಜೆ 6 ಗಂಟೆಗೆ ಶ್ರೀ ಗೋವರ್ಧನ ಭಜನಾ ಮಂಡಳಿಯ ಸದಸ್ಯರಿಂದ ಭಜನೆ.

ಜನವರಿ 5, ಸಂಜೆ 6 ಗಂಟೆಗೆ : ಶ್ರೀ ಹನುಮಗಿರಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ.

ವಿದುಷಿ ಗಾಯತ್ರಿ ರವೀಂದ್ರ

ಜನವರಿ 6, ಸಂಜೆ 6 ಗಂಟೆಗೆ : ವಿದುಷಿ ಗಾಯತ್ರಿ ರವೀಂದ್ರ ಮತ್ತು ಕು|| ಪೂಜಾ ರವೀಂದ್ರ ಇವರಿಂದ “ಹರಿನಾಮ ಸಂಕೀರ್ತನೆ” ವಾದ್ಯ ಸಹಕಾರ : ವಿದ್ವಾನ್ ಮಧುಸೂದನ ಮುತಾಲಿಕ್ (ತಬಲಾ) ವಿದ್ವಾನ್ ಶ್ರೀ ದುಶ್ಯಂತ್ (ಕೀ-ಬೋರ್ಡ್).

ಜನವರಿ 7, ಸಂಜೆ 6 ಗಂಟೆಗೆ: ಶ್ರೀ ರಮಾ ತ್ರಿವಿಕ್ರಮ ಭಜನಾ ಮಂಡಳಿಯ ಸದಸ್ಯರಿಂದ ಭಜನೆ.


ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪೂರ್ಣಪ್ರಜ್ಞ ಬಡಾವಣೆ, ಬೆಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles