ರಾಯರ ಮಠದಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮ, ಅನ್ನಸಂತರ್ಪಣೆ ಸ್ಥಗಿತ

ಬೆಂಗಳೂರು: ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಪರಮ ಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂ ಗಳವರ ಆದೇಶದಂತೆ ಹಾಗೂ ಕರ್ನಾಟಕ ಸರ್ಕಾರದ ಕೋವಿಡ್ 19 ರ ನಿಯಮಾನುಸಾರ ಶ್ರೀ ಮಠದಲ್ಲಿ ವ್ಯವಸ್ಥಾಪಕರಾದ ಆರ್ ,ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಭಕ್ತರಸುರಕ್ಷತೆಗಾಗಿ ಪ್ರಾಕಾರದಲ್ಲಿ ಸಾಮಾಜಿಕ ಮತ್ತು ವೈಯಕ್ತಿಕ ಅಂತರವನ್ನು ಕಾಪಾಡಿಕೊಳ್ಳಲು ಸ್ಕ್ವಯರ್ ಬಾಕ್ಸ್ ಹಾಕಲಾಗಿದೆ ಹಾಗೂ ದ್ವಾರದ (ಬಾಗಿಲು) ಮುಂಭಾಗ ದಲ್ಲಿ ಸ್ಯಾನಿಟೈಜರ್ ಮೊದಲಾದ ಸಕಲ ವ್ಯವಸ್ಥೆಯನ್ನು ಮಾಡಲಾಗಿಯೆಂದು ನಂದಕಿಶೋರಾಚಾ ರ್ಯರು ತಿಳಿಸಿದರು.

ಈ ಸಂದರ್ಭದಲ್ಲಿ ಭಕ್ತರು ಸಹ ಮುಖ ಕವಚ ಮಾಸ್ಕನ್ನು ಧರಿಸಿಕೊಂಡು ವೈಯಕ್ತಿಕ ಸಾಮಾಜಿಕ ಅಂತರದೊಂದಿಗೆ ಶ್ರೀ ಗುರು ರಾಯರ ದರ್ಶನ ಪಡೆದು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

ಈ ಸಂದರ್ಭದಲ್ಲಿ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರು ಮಾತನಾಡುತ್ತಾ ಈ ಸದ್ಯಕ್ಕೆ ಅನ್ನ ಸಂತರ್ಪಣೆ ಹಾಗೂ ಪ್ರವಚನ ದಾಸವಾಣಿ ಶ್ರೀ ಹರಿ ಭಜನೆ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles