ಭಜನೆ-ಪ್ರವಚನ-ಕೀರ್ತನ

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ತು ವತಿಯಿಂದ ಬೆಂಗಳೂರಿನ ಶೇಷಾದ್ರಿಪುರದ ಪ್ಲಾಟ್ ಫಾರಂ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಮಾರ್ಚ್ 1 ರಿಂದ 4ರ ವರೆಗೆ “ಭಜನ-ಪ್ರವಚನ-ಕೀರ್ತನ” ಕಾರ್ಯಕ್ರಮ ಏರ್ಪಡಿಸಿದ್ದು, ವಿವರಗಳು ಈ ರೀತಿ ಇವೆ :

ಭಜನೆ: ಮಾರ್ಚ್ 1, ಮಂಗಳವಾರ ಸಂಜೆ 6 ಗಂಟೆಗೆ, ಈಜುಕೊಳ ಬಡಾವಣೆಯ ಶ್ರೀ ವಿಜಯ ವಿಠಲ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಮಾರ್ಚ್ 2, ಬುಧವಾರ ಸಂಜೆ 6 ಗಂಟೆಗೆ ರಾಜಾಜಿನಗರದ ರುಕ್ಮಿಣಿ ಮಹಿಳಾ ಸಂಘ ದ ಸದಸ್ಯರಿಂದ ಭಜನೆ, ಮಾರ್ಚ್ 3, ಗುರುವಾರ ಸಂಜೆ 6 ಗಂಟೆಗೆ ಶೇಷಾದ್ರಿಪುರದ ಶ್ರೀ ಸುಶಮೀಂದ್ರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ.

ಪ್ರವಚನ: ಮಾರ್ಚ್ 1, 2 ಮತ್ತು 3 ರಂದು ಸಂಜೆ 7 ಗಂಟೆಗೆ ಶ್ರೀ ಆಯನೂರು ಮಧುಸೂದನಾಚಾರ್ ಇವರಿಂದ “ರಾಯರ ಗ್ರಂಥಗಳು” ವಿಷಯವಾಗಿ ಪ್ರವಚನ.

ಹರಿನಾಮ ಸಂಕೀರ್ತನೆ: ಮಾರ್ಚ್ 4, ಶುಕ್ರವಾರ ಸಂಜೆ 6 ಗಂಟೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ ಪ್ರಯುಕ್ತ ವಿದುಷಿ ಶ್ರೀಮತಿ ವಾಣಿ ಶ್ರೀಶ ಇವರಿಂದ ಗಾಯನ ಕಾರ್ಯಕ್ರಮ. ವಾದ್ಯ ಸಹಕಾರ: ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯), ಶ್ರೀ ಸರ್ವೋತ್ತಮ (ತಬಲಾ).

Related Articles

ಪ್ರತಿಕ್ರಿಯೆ ನೀಡಿ

Latest Articles