ಮಲ್ಲೇಶ್ವರಂ ಶ್ರೀಕಂಠೇಶ್ವರ ಭವನದಲ್ಲಿ 116ನೇ ಶ್ರೀರಾಮೋತ್ಸವ

ಬೆಂಗಳೂರು: ಶ್ರೀರಾಮ ಭಕ್ತ ಸಭಾದ ವತಿಯಿಂದ ಮಲ್ಲೇಶ್ವರಂ 5ನೇ ಮುಖ್ಯರಸ್ತೆಯಲ್ಲಿರುವ ಶ್ರೀ ಶ್ರೀಕಂಠೇಶ್ವರ ಭವನ (ಐಸಿಐಸಿಐ ಬ್ಯಾಂಕ್ ಪಕ್ಕ)ದಲ್ಲಿ ಸಂಸ್ಥೆಯ 116ನೇ ಶ್ರೀರಾಮೋತ್ಸವವನ್ನು ಏಪ್ರಿಲ್ 2 ರಿಂದ 11
ರವರೆಗೆ ಏರ್ಪಡಿಸಿದ್ದು ಕಾರ್ಯಕ್ರಮಗಳು ಈ ರೀತಿ ಇವೆ :

ಏಪ್ರಿಲ್ 2: ಬೆಳಗ್ಗೆ 8-30ಕ್ಕೆ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ಅಮೃತಹಸ್ತದಿಂದ ಕಾರ್ಯಕ್ರಮದ ಉದ್ಘಾಟನೆ, ಸಂಜೆ 5-30ಕ್ಕೆ ಶ್ರೀ ರಾಮವಿಠಲಾಚಾರ್ಯರಿಂದ ಪಂಚಾಂಗ ಶ್ರವಣ, ನಂತರ ವಿ|| ಸಮೀರಾಚಾರ್ ಮತ್ತು ಸಂಗಡಿಗರಿಂದ ದಾಸಗಾನಲಹರಿ,

ಏಪ್ರಿಲ್ 3 : ಬೆಳಗ್ಗೆ 10-30ಕ್ಕೆ ಶ್ರೀ ಕಲ್ಲಾಪುರ ಪವಮಾನಾಚಾರ್ ಇವರಿಂದ ಶ್ರೀ ಗೋಪಾಲದಾಸರ ಬಗ್ಗೆ ಪ್ರವಚನ. ಸಂಜೆ 5-15ಕ್ಕೆ ಶ್ರೀ ಸತ್ಯನಾರಾಯಣಾಚಾರ್ಯರಿಂದ ಶ್ರೀ ಕನಕದಾಸರ ಬಗ್ಗೆ ಪ್ರವಚನ. ನಂತರ ವಿ|| ವಿವೇಕ್ ಸದಾಶಿವಮ್ ಮತ್ತು ಸಂಗಡಿಗರಿಂದ ಹಾಡುಗಾರಿಕೆ.

ಏಪ್ರಿಲ್ 4 : ಸಂಜೆ 5-15ಕ್ಕೆ ವಿ|| ಕೆ. ಜೆ. ಶ್ರೀಲಕ್ಷ್ಮಿ ಮತ್ತು ಸಂಗಡಿಗರಿಂದ ಸಂಗೀತ. ನಂತರ ವಿ|| ಶುಭಾ ಸಂತೋಷ್ ಮತ್ತು ಸಂಗಡಿಗರಿಂದ ವೀಣಾ ವಾದನ.

ಏಪ್ರಿಲ್ 5 : ಸಂಜೆ 6-30ಕ್ಕೆ ಕು|| ಅನಘಾ ಹೆಚ್ ಜೆ, ಕು|| ಭೂಮಿಕಾ ಎಸ್ ಮತ್ತು ಕು|| ಅನ್ವಿತ ಸಾವಿತ್ರಿ ಇವರಿಂದ “ದಾಸರ ಪದಗಳ ಗಾಯನ” ತಬಲಾ : ಶ್ರೀ ಶ್ರೀನಿವಾಸ ಕಾಖಂಡಕಿ, ಕೀ-ಬೋರ್ಡ್ : ಶ್ರೀ ಅಮಿತ್ ಶರ್ಮಾ. ನಂತರ ವಿ|| ಶ್ರೀ ಸೀತಾರಾಮ ಮುನಿಕೋಟಿ ಇವರಿಂದ ಹರಿಕಥೆ- ವಿಷಯ : ಶ್ರೀ ತುಳಸಿದಾಸರು.

ಏಪ್ರಿಲ್ 6 : ಸಂಜೆ 6-30ಕ್ಕೆ ಡಾ|| ರಾಯಚೂರು ಶೇಷಗಿರಿದಾಸ್ ಮತ್ತು ಸಂಗಡಿಗರಿಂದ ಹರಿದಾಸ ಗಾನ ವೈಭವ.

ಏಪ್ರಿಲ್ 7 : ಸಂಜೆ 6-30ಕ್ಕೆ ವಿ|| ರಜಿತ್ ಮೂಡಿತ್ತಾಯ ಹಾಗೂ ವಿ|| ರಂಜಿತ್ ಮೂಡಿತ್ತಾಯ ಮತ್ತು ಸಂಗಡಿಗರಿಂದ ಸಂಗೀತ.

ಏಪ್ರಿಲ್ 8: ಸಂಜೆ 5-30ಕ್ಕೆ ಕೀರ್ತನ ಸಾಮ್ರಾಟ್ ವಿ|| ಮೈಸೂರು ರಾಮಚಂದ್ರಾಚಾರ್ ಮತ್ತು ಸಂಗಡಿಗರಿಂದ ಹರಿದಾಸ ಗಾನಾಮೃತ.

ಏಪ್ರಿಲ್ 9 : ಸಂಜೆ 5-15ಕ್ಕೆ ಶ್ರೀ ಖೇಡಾ ವೇದವ್ಯಾಸಾಚಾರ್ಯರಿಂದ ಶ್ರೀ ವಿಜಯದಾಸರ ಬಗ್ಗೆ ಪ್ರವಚನ. ನಂತರ ಶ್ರೀ ಕೃಷ್ಣ ಪಾರಿಜಾತ ಯಕ್ಷಗಾನ-ಉತ್ತರ ಕನ್ನಡದ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯ ಸದಸ್ಯರಿಂದ.

ಏಪ್ರಿಲ್ 10 : ಬೆಳಗ್ಗೆ 9ಕ್ಕೆ ಮೆರವಣಿಗೆ, ಸಂಜೆ 5ಕ್ಕೆ ಶ್ರೀ ಪುರಂದರದಾಸರ ತತ್ವ ಚಿಂತನೆ ಕುರಿತು ಶ್ರೀ ಆಯನೂರು ಮಧುಸೂದನಾಚಾರ್ ಇವರಿಂದ ಪ್ರವಚನ. ನಂತರ ಶ್ರೀ ಚತುರ್ವೇದಿ ವೇದವ್ಯಾಸಾಚಾರ್ ಅವರಿಂದ ಪ್ರವಚನ. 7-15ಕ್ಕೆ ಹಾಡುಗಾರಿಕೆ : ವಿ|| ಮಾಧುರಿ ಕೌಶಿಕ್ ಮತ್ತು ವೃಂದದವರಿಂದ.

ಏಪ್ರಿಲ್ 11 : ಬೆಳಗ್ಗೆ 8ಕ್ಕೆ ಶ್ರೀರಾಮ ತಾರಕ ಹೋಮ, ಭಜನೆ, ಮತ್ತು ಶ್ರೀ ರಾಮ ಪಟ್ಟಾಭಿಷೇಕ. ಸಂಜೆ 6ಕ್ಕೆ ಶ್ರೀ ರಾಮ ಭಕ್ತ ಸಭಾದ ಸದಸ್ಯರಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಭಾಗವಹಿಸಿ ಶ್ರೀ ರಾಮನ ಕೃಪೆಗೆ ಪಾತ್ರರಾಗಬೇಕೆಂದು ಸಂಸ್ಥೆಯ ಪದಾಧಿಕಾರಿಗಳು ವಿನಂತಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles