ಜ್ಞಾನಯಜ್ಞ, ದಾಸವಾಣಿ, ಶ್ರೀಹರಿ ಭಜನೆ ಏಪ್ರಿಲ್ 26 ರಿಂದ

ಬೆಂಗಳೂರು: ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ 108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಹಾಗೂ ಟಿಟಿಡಿ ಹಿಂದೂ ಧರ್ಮ ಪ್ರಚಾರ ಪರಿಷತ್ ನ ಸಹಕಾರದೊಂದಿಗೆ ಇದೇ ಏಪ್ರಿಲ್ 26 ನೇ ತಾರೀಖಿನಿಂದ 29 ರವರೆಗೆ ವಿಶೇಷವಾಗಿ ಶ್ರೀಹರಿ ಭಜನೆ, ಪ್ರವಚನ, ದಾಸವಾಣಿ, ಉತ್ಸವ ಇತ್ಯಾದಿ ವಿಶೇಷ ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ.

ವಿದ್ವಾನ್ ವಿನಾಯಕ ಆಚಾರ್ಯ

26 ನೇ ತಾರೀಕು ಸಂಜೆ 6 ರಿಂದ 7 ವರೆಗೆ ಶ್ರೀಲಕ್ಷ್ಮೀನಾರಾಯಣ ಭಜನಾ ಮಂಡಳಿ ಜಯನಗರ ವೃಂದದಿಂದ ಶ್ರೀಹರಿ ಭಜನೆ, ಸಂಜೆ 7 ರಿಂದ 8 ರವರೆಗೆ ಪ್ರವಚನ ವಿದ್ವಾನ್ ವಿನಾಯಕ ಆಚಾರ್ಯರಿಂದ, 27 ರಂದು ಸಂಜೆ 6 ರಿಂದ 7 ರವರೆಗೆ ಶ್ರೀ ಭೀಮೇಶ ಕೃಷ್ಣ ಭಜನಾ ಮಂಡಳಿ ಶ್ರೀನಿವಾಸನಗರ ವೃಂದದಿಂದ ಶ್ರೀ ಹರಿ ಭಜನೆ, 7 ರಿಂದ 8 ಪ್ರವಚನ, 28 ರಂದು ಸಂಜೆ 6 ರಿಂದ ದೀಪೋತ್ಸವ, ಪಲ್ಲಕ್ಕಿ ಉತ್ಸವ ರಥೋತ್ಸವ, ಗಜವಾಹನ ಉತ್ಸವದೊಂದಿಗೆ ಸ್ವಸ್ತಿವಾಚನ ಮಹಾ ಮಂಗಳಾರತಿ 8 ರವರೆಗೆ, ರಾತ್ರಿ 8 ರಿಂದ 9-30 ರವರೆಗೆ ಕುಮಾರಿ-ಸುಶ್ರಾವ್ಯ ಆಚಾರ್ಯ ವೃಂದದಿಂದ “ದಾಸವಾಣಿ” ಕಾರ್ಯಕ್ರಮ ನೆರವೇರಲಿದೆ.

ಸುಶ್ರಾವ್ಯ ಆಚಾರ್ಯ

29 ರಂದು ಸಂಜೆ 6 ರಿಂದ 7ವರೆಗೆ ಶ್ರೀ ವಾಣಿ ಭಜನಾ ಮಂಡಳಿ ಚಿಕ್ಕಲಸಂದ್ರ ವೃಂದದಿಂದ ಶ್ರೀಹರಿ ಭಜನೆ, 7 ರಿಂದ 8 ವರೆಗೆ ಪ್ರವಚನ ಮಂಗಳ ಮಹೋತ್ಸವದ ಎಲ್ಲಾ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀಮಠದ ಆವರಣದಲ್ಲಿ ನಡೆಯಲಿದೆ ಎಂದು ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ , ಕೆ ವಾದೀಂದ್ರ ಆಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀಕೃಷ್ಣಗುಂಡಾಚಾರ್ಯ, ಶ್ರೀ ನಂದಕಿಶೋರ್ ಆಚಾರ್ಯ, ಶ್ರೀ ಸುಧೀಂದ್ರ ದೇಸಾಯಿ ಹಾಗೂ ಮಠದ ಸಿಬ್ಬಂದಿಗಳು ಮತ್ತು ಭಕ್ತರು ಉಪಸ್ಥಿತರಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles