ದಾಸಸಾಹಿತ್ಯಕ್ಕೆ ಶ್ರೀಕಾರ ಹಾಕಿದ ಶ್ರೀ ಶ್ರೀಪಾದರಾಜರು

*ಡಾ.ವಿದ್ಯಾಶ್ರೀ ಕುಲಕರ್ಣಿ ಮಾನವಿ

  
ಶ್ರೀಮದಾಚಾರ್ಯರ ಹರಿಸರ್ವೋತ್ತಮತ್ವ ತತ್ವಗಳನ್ನು ಕನ್ನಡೀಕರಿಸಿ, ಪದ ಪದ್ಯ ಸುಳಾದಿಗಳನ್ನು ಜನಸಾಮಾನ್ಯರಿಗೂ ತಲುಪುವಂತೆ ಮಾಡಿ ದಾಸಸಾಹಿತ್ಯ ಮಧ್ವಸಿದ್ಧಾಂತದ ಆಗಸದಲ್ಲಿ, ಧೃವ ನಕ್ಷತ್ರದಂತೆ ಬೆಳಗುತ್ತಿರುವವರು, ಧೃವಾಂಶಸಂಭೂತರೆಂದು ಪ್ರಖ್ಯಾತರಾದವರು ಶ್ರೀ ಶ್ರೀಪಾದರಾಜರು.
ದೇವಭಾಷೆಯಾದ ಸಂಸ್ಕೃತದಲ್ಲಿರುವ ವೇದ, ಉಪನಿಷತ್ತುಗಳು, ಆಗಮ ನಿಗಮಗಳು, ಭಾಗವತ, ಭಾರತ ಹಾಗೂ ರಾಮಾಯಣ ಪುರಾಣಗಳಲ್ಲಿರುವ ಕಥೆಗಳಲ್ಲಿನ ಸಾರವನ್ನು, ತತ್ವ ಸತ್ವ ಮಹತ್ವಗಳನ್ನು ಅರ್ಥವಾಗುವ ರೀತಿಯಲ್ಲಿ ಸರಳೀಕರಣ ಮಾಡಿ ಕನ್ನಡದಲ್ಲಿ ತಿಳಿಸಿಕೊಟ್ಟ, ದಾಸಸಾಹಿತ್ಯವು ಸಾಮಾನ್ಯ ಜನರಿಗೆ ತಲುಪಿ ಜೀವನಕ್ಕೆ ಮಾರ್ಗದರ್ಶಕವಾಗುವಲ್ಲಿ ಯಶಸ್ವಿಯಾಯಿತು.
ದಾಸಸಾಹಿತ್ಯ ಜನಪ್ರಿಯ ಸಾಹಿತ್ಯ. ಜನಹಿತದ ಸಾಹಿತ್ಯ. ಹರಿದಾಸರಿಗೆ ಎಂದೂ ಸ್ವಾರ್ಥವಿರಲಿಲ್ಲ. ಆತ್ಮೋದ್ಧಾರದ ಬಗ್ಗೆ ಮಾತ್ರ ಚಿಂತನೆಯಿರಲಿಲ್ಲ. ತಮ್ಮ ಉದ್ಧಾರಕ್ಕಾಗಿ ಮಾತ್ರವೇ ತಾವು ಇರುವುದೆಂದು ಅವರು ಎಂದೂ ಮೂಗು ಮುಚ್ಚಿ ಕೂಡಲಿಲ್ಲ. ಬದಲಾಗಿ ತಾವಿರುವ ಸಮಾಜದ ಬಗ್ಗೆ ಪ್ರಾಮಣಿಕ ಕಳಕಳಿ ಇತ್ತು. ಜೀವನ ದರ್ಶನ, ಸಮಾಜ ವಿಮರ್ಶೆ, ಲೋಕಾನುಭವಗಳು ದಾಸರ ಪದಪದ್ಯಗಳಲ್ಲಿ ತುಂಬಿ ತುಳುಕುತ್ತಿವೆ. ಗೃಹಸ್ಥಧರ್ಮ ಸಾಧನೆಗೆ ಅಡ್ಡಿಯಲ್ಲ ಎನ್ನುವುದನ್ನೂ ತೋರಿಸಿಕೊಟ್ಟವರು ಹರಿದಾಸರು.
ಧ್ಯಾನವು ಕೃತಯುಗದಿ, ಯಜನ ಯಜ್ಞವು ತ್ರೇತಾಯುಗದಿ, ದಾನವಾಂತಕನ ದೇವತಾರ್ಚನೆ ದ್ವಾಪರದಿ, ಕಲಿಯುಗದ ಗಾಯನದಿ ಕೇಶವ ಎಂದೊಡನೆ ಬಂದು ಕೈಗೂಡುವುದು ರಂಗವಿಠಲ ಎಂಬ ಶ್ರೀಪಾದರಾಜರು ಸರಳ ಕನ್ನಡದಲ್ಲಿ ದಾಸಸಾಹಿತ್ಯವನ್ನು ಜನಮಾನಸದ ಹೃದಯದಲ್ಲಿ ಶ್ರೀಕಾರ ಹಾಕಿದರು.
ಹರಿದಾಸರು ಎಂದಾಕ್ಷಣ ನಮಗೆ ಪುರಂದರದಾಸರು, ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರು ಮುಂತಾದವರು ಕೃತಿಗಳು ತಲೆಯಲ್ಲಿ ಸುಳಿದಾಡುತ್ತವೆ. ದೇವಭಾಷೆಯಾದ ಸಂಸ್ಕೃತದಲ್ಲಿರುವ ವೇದ, ಉಪನಿಷತ್ತುಗಳು, ಆಗಮ ನಿಗಮಗಳು, ಭಾಗವತ, ಭಾರತ ಹಾಗೂ ರಾಮಾಯಣ ಪುರಾಣಗಳಲ್ಲಿರುವ ಕಥೆಗಳಲ್ಲಿನ  ಸಾರವನ್ನು, ತತ್ವ ಸತ್ವ ಮಹತ್ವಗಳನ್ನು ಅರ್ಥವಾಗುವ ರೀತಿಯಲ್ಲಿ ಸರಳೀಕರಣ ಮಾಡಿ ಕನ್ನಡದಲ್ಲಿ ತಿಳಿಸಿಕೊಟ್ಟ, ದಾಸಸಾಹಿತ್ಯವು ಸಾಮಾನ್ಯ ಜನರಿಗೆ ತಲುಪಿ ಜೀವನಕ್ಕೆ ಮಾರ್ಗದರ್ಶಕವಾಗುವಲ್ಲಿ ಯಶಸ್ವಿಯಾಯಿತು.
ದಾಸಸಾಹಿತ್ಯ ಜನಪ್ರಿಯ ಸಾಹಿತ್ಯ. ಜನಹಿತದ ಸಾಹಿತ್ಯ. ಹರಿದಾಸರಿಗೆ ಎಂದೂ ಸ್ವಾರ್ಥವಿರಲಿಲ್ಲ. ಆತ್ಮೋದ್ಧಾರದ ಬಗ್ಗೆ ಮಾತ್ರ ಚಿಂತನೆಯಿರಲಿಲ್ಲ. ತಮ್ಮ ಉದ್ಧಾರಕ್ಕಾಗಿ ಮಾತ್ರವೇ ತಾವು ಇರುವುದೆಂದು ಅವರು ಎಂದೂ ಮೂಗು ಮುಚ್ಚಿ ಕೂಡಲಿಲ್ಲ. ಬದಲಾಗಿ ತಾವಿರುವ ಸಮಾಜದ ಬಗ್ಗೆ ಪ್ರಾಮಣಿಕ ಕಳಕಳಿ ಇತ್ತು. ಜೀವನ ದರ್ಶನ, ಸಮಾಜ ವಿಮರ್ಶೆ, ಲೋಕಾನುಭವಗಳು ದಾಸರ ಪದಪದ್ಯಗಳಲ್ಲಿ ತುಂಬಿ ತುಳುಕುತ್ತಿವೆ. ಗೃಹಸ್ಥಧರ್ಮ ಸಾಧನೆಗೆ ಅಡ್ಡಿಯಲ್ಲ ಎನ್ನುವುದನ್ನೂ ತೋರಿಸಿಕೊಟ್ಟವರು ಹರಿದಾಸರು. ಈ ಎಲ್ಲ ಹರಿದಾಸರ, ಹರಿದಾಸಸಾಹಿತ್ಯದ ಮೂಲ ಪ್ರೇರಣೆ ಶ್ರೀ ಮಧ್ವಾಚಾರ್ಯರು.
ಹರಿದಾಸ ಸಾಹಿತ್ಯ ನಿರ್ಮಾಣಕ್ಕೆ ಕನ್ನಡ ಸಾಹಿತ್ಯದಲ್ಲಿ ಶ್ರೀಮಧ್ವಾಚಾರ್ಯರ ದ್ವಾದಶ ಸ್ತೋತ್ರವೇ ಮೂಲಪ್ರೇರಣೆಯಾಯಿತು. ಪಂಡಿತರ ಸೊತ್ತಾಗಿದ್ದ ಸಂಸ್ಕೃತದ ಮಹಾಮಂತ್ರಗಳನ್ನು, ಕಾವ್ಯಗಳನ್ನು, ವೇದೋಪನಿಷತ್ತುಗಳನ್ನು, ಸಾಮಾನ್ಯ ಜನರಿಗೂ ಅರ್ಥವಾಗುವ ತಿಳಿಗನ್ನಡದಲ್ಲಿ ಶ್ರೀಪಾದರಾಜರು ಹೇಳಿದರು. ಐದುಶತಮಾನಗಳ ಹಿಂದೆಯೇ, ವೈದಿಕವಿದ್ವನ್ಮಣಿಗಳು ಕನ್ನಡವೆಂದರೆ ಮೈಲಿಗೆಯೆಂದು ಮೂಗುಮುರಿಯುತ್ತಿದ್ದ  ಕಾಲದಲ್ಲಿ, ಪೀಠಾಧಿಪತಿಗಳಾದವರು ಸಂಸ್ಕೃತ ಬಿಟ್ಟು ಬೇರೆ ಭಾಷೆಯನ್ನು ಉಪಯೋಗಿಸುವುದು ಊಹಿಸಲೂ ಸಾಧ್ಯವಿಲ್ಲದ್ದ ಪರಿಸ್ಥಿತಿಯಲ್ಲಿ, ಶ್ರೀಪಾದರಾಜರು ಕನ್ನಡಕ್ಕೆ ಅಗ್ರಪಟ್ಟ ಕಟ್ಟಿ, ಸಿದ್ದಾಂತವನ್ನು, ಸಾಹಿತ್ಯವನ್ನು, ಬದುಕಿನ ಮೌಲ್ಯವನ್ನೂ ಕನ್ನಡದಲ್ಲೇ ಪ್ರಕಟಿಸಿದರು.
ಧ್ಯಾನವು ಕೃತಯುಗದಿ, ಯಜನ ಯಜ್ಞವು ತ್ರೇತಾಯುಗದಿ, ದಾನವಾಂತಕನ ದೇವತಾರ್ಚನೆ ದ್ವಾಪರದಿ, ಕಲಿಯುಗದ ಗಾಯನದಿ ಕೇಶವ ಎಂದೊಡನೆ ಬಂದು ಕೈಗೂಡುವುದು ರಂಗವಿಠಲ ಎಂಬ ಶ್ರೀಪಾದರಾಜರು ಸರಳ ಕನ್ನಡದಲ್ಲಿ ದಾಸಸಾಹಿತ್ಯವನ್ನು ಜನಮಾನಸದ ಹೃದಯದಲ್ಲಿ ಶ್ರೀಕಾರ ಹಾಕಿದರು.
ಶ್ರೀ ಸ್ವರ್ಣವರ್ಣತೀರ್ಥರು  ಬ್ರಹ್ಮಚರ್ಯ, ತಪಸ್ಸು ತೇಜಸ್ಸುಗಳಿಂದ ಪ್ರಜ್ವಲಿಸುತ್ತಿದ್ದ ಇವರ ದೇಹಕಾಂತಿಯೂ ಸಹ ಹೊನ್ನಿನಂತೆ ಕಂಗೊಳಿಸುತ್ತಿತ್ತು. ಇವರು ಒಮ್ಮೆ  ಶ್ರೀರಂಗಪಟ್ಟಣವನ್ನು ಕುರಿತು ಪ್ರವಾಸಗೊಂಡು ಮಧ್ಯರಂಗಕ್ಷೇತ್ರವಾದ ಶಿವನ ಸಮುದ್ರಕ್ಕೆ ಆಗಮಿಸಿ, ಯತಿಪುಂಗವರಾದ ಶ್ರೀಪುರುಷೋತ್ತಮತೀರ್ಥರನ್ನು ಕಾಣುವ ತವಕದಿಂದ ಕಣ್ವ ನದೀತೀರದಲ್ಲಿರುವ ಆಶ್ರಮಕ್ಕೆ ಭೇಟಿ ಇತ್ತರು. ಈ ಸಮಯದಲ್ಲಿ ಅಲ್ಲಿ ಲಕ್ಷ್ಮೀನಾರಾಯಣನೆಂಬ ಬಾಲಕನ ಭೇಟಿ ಭಗವತ್ಸಂಕಲ್ಪವಾಗಿತ್ತು. ಆ ಬಾಲಕನ ``ಅತ್ತನೋಡಿ ಇತ್ತನೋಡಿ ಸುತ್ತನೋಡಿ ಗೊತ್ತುಮಾಡಿ’’ ಎಂಬ ಮಾರ್ಮಿಕಮಾತಿನಿಂದಲೇ ಬೆರಗಾಗಿ, ಶ್ರೀಪುರುಷೋತ್ತಮತೀರ್ಥರೊಡನೆ ಇದ್ದ ಬಾಲಯತಿಗಳನ್ನು ನೋಡಿ ಇವರಂತಯೇ ನಮಗೂ ಒಬ್ಬನನ್ನು ಪಡೆಯುವ ಆಕಾಂಕ್ಷೆಯನ್ನು ತಿಳಿಸಿದರು. ಶ್ರೀಪುರುಷೋತ್ತಮತೀರ್ಥರು ಬಾಲಕನ ಮಾತಾ-ಪಿತೃಗಳನ್ನು ಬರಮಾಡಿಕೊಂಡು ಅವರ ಮನವೊಲಿಸಿ ತಾಯಿಗೆ ಸಾಂತ್ವನವನ್ನು ನೀಡಿ, ಬಾಲಕನ ಶ್ರೇಯೋಭಿವೃದ್ದಿಗೆ ತಾವು ಬದ್ಧ ಕಂಕಣ ರಾಗ ಬೇಕೆಂದು ತಿಳಿಸಿ, ಬಾಲಕನನ್ನು ಶ್ರೀಸ್ವರ್ಣವರ್ಣತೀರ್ಥರಿಗೆ ಒಪ್ಪಿಸುವಂತೆ ಮಾಡಿದರು.
ಬಾಲಕನನ್ನು  ಶ್ರೀರಂಗಕ್ಕೆ ಕರೆದೊಯ್ದು ಬ್ರಹ್ಮೋಪದೇಶ ಪೂರ್ವಕವಾಗಿ ಯತ್ಯಾಶ್ರಮವನ್ನು ಅನುಗ್ರಹಿಸಿ ೧೪೧೨ರಲ್ಲಿ ಶ್ರೀ ಲಕ್ಷ್ಮೀನಾರಾಯಣ ಮುನಿ ಗಳೆಂದು ನಾಮಕರಣ ಮಾಡಿದರು.
ಅತಿ ಚಿಕ್ಕವಯಸ್ಸಿನಲ್ಲಿಯೇ `ಯೋಗಿ’ ಎಂತಲೂ, `ಮುನಿ’ ಎಂತಲೂ  ಪ್ರಶಸ್ತಿಗಳನ್ನು ಸಂಪ್ರತಿಪನ್ನ ವಿದ್ವಚ್ಚಕ್ರ ಚೂಡಾಮಣಿಗಳಿಂದ ಪಡೆದವರು.
ಶ್ರೀವಿಭುದೇಂದ್ರತೀರ್ಥರಲ್ಲಿ ಪ್ರೌಢವ್ಯಾಸಂಗ ಎಂಟು ವರ್ಷಗಳ ಕಾಲ ಮುಗಿಸಿ, ತಮ್ಮ ತವರುಮನೆಯಾದ ಶ್ರೀರಂಗಕ್ಕೆ ಹಿಂತಿರುಗಿ ಶ್ರೀಸ್ವರ್ಣವರ್ಣತೀರ್ಥರಿಗೆ ತಂದೊಪ್ಪಿಸಿದರು.
ಶ್ರೀ ಶ್ರೀಪಾದರಾಜರು ವಾಗ್ವಜ್ರವೆಂಬ ಪರವಾದಿಗಳಿಗೆ ವಜ್ರಾಯುಧ ಸದೃಶವಾದ ಸಂಸ್ಕೃತ ಗ್ರಂಥಗಳನ್ನು ರಚಿಸಿದ್ದಾರೆ. ಇದು ನಮಗೆ ದೊರೆತಿರುವ ಏಕೈಕ ಗ್ರಂಥವಾಗಿದೆ. ಕನ್ನಡ ಪದ್ಯಸುಳಾದಿಗಳನ್ನು ಭಕ್ತಿ-ಭಾವುಕತೆಯ ಬಗೆ ಬಗೆಯ ಅಭಿವ್ಯಕ್ತಿಗೆ ಹೆಚ್ಚು ಮಹತ್ವವನ್ನು ನೀಡಿ, ದಾಸ ಪಂಥ ಪ್ರವರ್ತಕ ರೆಂದು ಪ್ರಸಿದ್ಧರಾದರು.
`ಧ್ಯಾನವು ಕೃತಯುಗದಲಿ ಯಜನ
ಯಜ್ಞವು ತ್ರೇತಾಯುಗದಲ್ಲಿ
ದಾನವಾಂತಕನ ದೇವತಾರ್ಚನೆಯು ದ್ವಾಪರ
ಯುಗದಲ್ಲಿ ಕಲಿಯುಗದಿ
ಗಾನದಿ ಕೇಶವನೆಂದರೆ ಕೈಗೂಡುವನು ರಂಗವಿಠಲ’
- ಶ್ರೀಪಾದರಾಜರು
ಕರ್ನಾಟಕ ಸಂಗೀತದ ರಾಗತಾಳಗಳ ಬಳಕೆಯಲ್ಲಿ ಅತ್ಯಂತ ಗೊಂದಲವಿದ್ದ ಕಾಲದಲ್ಲಿ, ಅದಕ್ಕೊಂದು ನಿಶ್ಚಿತ ರೂಪವನ್ನು ನೀಡುವ ಕಾರ್ಯಕ್ಕೆ ಚಾಲನೆ ನೀಡಿದವರು ಶ್ರೀಪಾದರಾಜರು. ಶ್ರೀ ವ್ಯಾಸರಾಜರ ಹಾಗೂ ಪುರಂದರದಾಸರ ಮೂಲಕ ಕರ್ನಾಟಕ ಸಂಗೀತ ಪದ್ಧತಿಗೇ ಒಂದು ವ್ಯವಸ್ಥಿತ ಸ್ವರೂಪವನ್ನು ಅವರು ನೀಡಿದರು. ಅಂತರಂಗದ ಭಕ್ತಿಗೆ ಹಾಡಿನ ಅಭಿವ್ಯಕ್ತಿಯನ್ನು ನೀಡಿ ಲೋಕನೀತಿಯನ್ನು ಮನಗಾಣಿಸಿದರು.
ಶ್ರೀಪಾದರಾಜರು ಕನ್ನಡ ನೆಲದ ಜಾನಪದ ನೆಲೆಯಿಂದ ಗೇಯ ಪ್ರಾಕಾರಗಳನ್ನು ಎತ್ತಿಕೊಂಡು ಕರ್ನಾಟಕ ಸಂಗೀತದಲ್ಲಿ ಕೆಲವು ಸಾರ್ಥಕ ಪ್ರಯೋಗಗಳನ್ನು ನಡೆಸಿದರು. ಈ ಪ್ರಯೋಗಗಳ ನಂತರವೇ ಪುರಂದರ ದಾಸರು ದೇಶಿಯನ್ನು ಮಾರ್ಗಿಯನ್ನಾಗಿ ಬೇರ್ಪಡಿಸಿ ವೃತ್ತನಾಮ, ಸಾಂಗತ್ಯ, ಕಂದ, ತ್ರಿಪದಿ, ತತ್ವಸುವ್ವಾಲಿ, ಸೀಸಪದ್ಯ, ಸುಳಾದಿಗಳಲ್ಲಿ ಹೊಸ ಪ್ರಯೋಗ ನಡೆಸಿದರು.
ಸುಳಾದಿಗಳನ್ನು ಮೊಟ್ಟಮೊದಲ ಬಾರಿಗೆ ಸಾಹಿತ್ಯದಲ್ಲಿ ಪ್ರಯೋಗಿಸಿದ ಸಂಪ್ರದಾಯ ಪ್ರವರ್ತಕರು ಶ್ರೀಪಾದರಾಜರು. ಸುಳಾದಿ ಸಾಮಾನ್ಯವಾಗಿ ತಾಳಮಾಲಿಕೆಯ ಸಂಗೀತರೂಪ. ಕೆಲವೊಮ್ಮೆ ಅದು ರಾಗ ತಾಳ ಮಾಲಿಕೆಯೂ ಸಹ ಆಗಬಹುದು. ಸುಳಾದಿ ಎಂಬುದು `ಸುಳು-ಹಾದಿ’ ಎಂಬ ಮೂಲದಿಂದ ಬಂದಿರುವ ಸಾಧ್ಯತೆಯಿದೆ. ಕೆಲವರು `ಸುಲಭದ ಹಾದಿಯೇ’ ಸುಳಾದಿ ಎಂದು ಹೇಳಿ ಭಾವವನ್ನು ಅಂತರಂಗದ ಒತ್ತಡವನ್ನು ಸುಲಭವಾಗಿ ಅಭಿವ್ಯಕ್ತಿಸುವ ವಿಶಿಷ್ಟ ಮಾರ್ಗಕ್ಕೆ ಸುಳಾದಿ ಎಂದೂ ಕರೆದಿದ್ದಾರೆ.
ಗೀತಗೋವಿಂದದ ಶ್ಲೋಕ ಸಂಗೀತದ ಪ್ರಭಾವವನ್ನು ಪ್ರಥಮಬಾರಿಗೆ ಶ್ರೀಪಾದರಾಜರು ತಮ್ಮ ಕನ್ನಡದ ವೃತ್ತನಾಮಗಳಲ್ಲಿ ಬಳಕೆಗೆ ತಂದರು. ಪಲ್ಲವಿ ಅನುಪಲ್ಲವಿ ಚರಣಗಳಿಂದ ಕೂಡಿದ ಅನೇಕ ದೇವರ ನಾಮಗಳನ್ನು ವಿವಿಧ ರಾಗಗಳಲ್ಲಿ ರಚನೆ ಮಾಡಿ, ಭಾಗವತರ ತಂಡವನ್ನೇ ಸಿದ್ಧಮಾಡಿ ಗೋಪಿನಾಥ ದೇವರೆದುರು ನರ್ತನ ಸೇವೆಯ ವ್ಯವಸ್ಥೆ ಮಾಡಿದ್ದ ಶ್ರೀಪಾದರಾಜರು ನರ್ತನಕ್ಕಾಗಿಯೇ ಅನುವಾಗುವ ಕೆಲವು ವಿಶಿಷ್ಟ ಕೃತಿಗಳನ್ನು ರಚಿಸಿದರು.
ಶ್ರೀಪಾದರಾಜರು ಕೀರ್ತನೆಗಳ ಕಲಾವಿದರು, ಸುಳಾದಿಗಳ ಸಂಪ್ರದಾಯ ಪ್ರವರ್ತಕರು, ಉಗಾಭೋಗಗಳ ಉತ್ಕÈಷ್ಟ ದಾರ್ಶನಿಕರು, ವೃತ್ತಿ ಶ್ರೇಷ್ಠ ವೃತ್ತ ನಾಮಭಾಗವತೋತ್ತಮರು. ದಂಡಕಗಳ ದಂಡಧಾರಿಗಳು, ಸಂಗೀತದ ಸಂಪೂರ್ಣ ಪ್ರಭುತ್ವವಿದ್ದ ಶ್ರೀಪಾದರಾಜರು ಸಾಹಿತ್ಯದ ಪಾಂಡಿತ್ಯ, ಭಕ್ತಿಯ ಮಹತ್ವ, ಸರಸ ಕವಿಯ ಪಟುತ್ವಗಳ ಪ್ರತಿಭಾಮೂರ್ತಿಗಳು. ತಮ್ಮ ಕೃತಿಗಳಲ್ಲಿ ಕಥಾಹಂದರವನ್ನು ಆಕರ್ಷಕವಾಗಿ ಬೆಳೆಸುವ ಆತ್ಮೀಯ ಕಲಾತ್ಮಕತೆ ಶ್ರೀಪಾದರಾಜರಿಗೆ ಸಹಜವಾಗಿಯೇ ಸಿದ್ಧಿಸಿದೆ.
ಅಂಕಿತ ದೊರೆತದ್ದು  
ಒಂದು ದಿನ ಶ್ರೀ ವ್ಯಾಸರಾಜರಿಗೆ ಸ್ವಪ್ನದಲ್ಲಿ ತಮ್ಮ ಗುರುವರ್ಯರೊಡನೆ ಫಂಡರಪುರಕ್ಕೆ ಬರಬೇಕೆಂಬ ಆಹ್ವಾನವನ್ನು ಪಾಂಡುರಂಗ ನೇ ಇತ್ತಂತೆ ಗೋಚರವಾಯಿತು. ನಂತರ ಅದರಂತೆ ಶ್ರೀಪಾದರಾಜರು ಹಾಗೂ ಶ್ರೀ ಬ್ರಹ್ಮಣ್ಯತೀರ್ಥರೊಡನೆ ಶ್ರೀ ವ್ಯಾಸರಾಜರು ಫಂಡರಾಪುರ ಕ್ಷೇತ್ರಕ್ಕೆ ಆಗಮಿಸಿದರು. ಅಲ್ಲಿ ಬಿಡಾರ ಹೂಡಿ ಸತ್ಸಿದ್ಧಾಂತ ಪ್ರಚಾರಕಾರ್ಯದೊಡನೆ ವಿಠಲೋಪಾಸನೆ ಮಾಡುತ್ತಿದ್ದಾಗ ಶ್ರೀಪಾದರಾಜರ ಸ್ವಪ್ನದಲ್ಲಿ ವಿಠ್ಠಲನು ಕಾಣಿಸಿಕೊಂಡು ಶ್ರೀಭೀಮರಥಿ ಪುಷ್ಪಾವತಿ ಸಂಗಮ ಸ್ಥಳದಲ್ಲಿ ಪಾಂಡವವಂಶೀಯನಾದ ಶ್ರೀ ಕ್ಷೇಮಕಾಂತ ಮಹಾರಾಜನು ಒಂದು ದೇವರ ಪೆಟ್ಟಿಗೆಯನ್ನು ಭೂಸ್ಥಾಪನೆ ಮಾಡಿರುವುದಾಗಿ ತಿಳಿಸಿ ಅದನ್ನು ಪಡೆದು ಪ್ರತಿ ನಿತ್ಯ ಪೂಜಿಸಲು ಆದೇಶ ನೀಡಿದಂತಾಯಿತು. ಶ್ರೀಪಾದರಾಜರು ಅರಣೋದಯದಲ್ಲೇ ಎದ್ದು ಸಕಲರಿಗೂ ಈ ಸನ್ಮಂಗಳಕರವಾದ ಸ್ವಪ್ನವೃತ್ತಾಂತವನ್ನು ಹೇಳಿ, ಸ್ವಪ್ನ ನಿರ್ದೇಶನದ ನಿರ್ದಿಷ್ಟ ಸ್ಥಳದಲ್ಲಿ ಎಲ್ಲರನ್ನೂ ಕರೆತಂದು ಖನನ ಮಾಡಿಸಿ ನೋಡಲಾಗಿ ಭೂಗರ್ಭದಲ್ಲಿ ಒಂದು ದೇವರ ಪೆಟ್ಟಿಗೆಯು ದೊರೆಯಿತು. ಅದನ್ನು ಸಂಸ್ಥಾನಕ್ಕೆ ಸಕಲ ಗೌರವ ಪೂಜಾದಿಗಳೊಡನೆ ಅತಿ ಸಂಭ್ರಮದಿಂದ ತಂದು ತೆಗೆದು ನೋಡಲಾಗಿ ಅದರಲ್ಲಿ ಎರಡು ಸಂಪುಟಗಳು ದೊರೆತವು. ಒಂದನ್ನು ತೆಗೆದು ನೋಡಿದಾಗ ಶ್ರೀಜಾಂಬವತಿ ದೇವಿಯರಿಂದಲೂ, ನಂತರ ಅರ್ಜುನನಿಂದಲೂ ಬಹುಕಾಲ ಪೂಜಿತವಾಗಿದ್ದ ಶ್ರೀರುಕ್ಮಿಣಿ ಸತ್ಯಭಾಮಾ ಸಮೇತ ಶ್ರೀರಂಗವಿಠ್ಠಲ ಮೂರ್ತಿಯ ದರ್ಶನವಾಯಿತು. ಪರಮಾನಂದಭರಿತರಾಗಿ ಹೃದಯಾರವಿಂದರಾಗಿ ಎಷ್ಟು ನೋಡಿದರೂ ಅತೃಪ್ತರಾಗಿ ಪುನಃ ಪುನಃ ಆ ಮೂರ್ತಿಗಳನ್ನೇ ನೋಡುತ್ತಾ ಶ್ರೀಪಾದರಾಜರು ಭಕ್ತಿ ಭಾವದಲ್ಲಿ ಮೈಮರೆತರು.
ಅದುವರೆಗೆ ಗೋಪೀನಾಥ ಮುದ್ರಿಕೆಯಿಂದ ಕನ್ನಡ ದೇವರನಾಮಗಳನ್ನು ಮಾಡುತ್ತಿದ್ದ ಶ್ರೀಪಾದರಾಯರು ಈ ವಿಗ್ರಹ ದೊರೆತ ಮೇಲೆ ರಂಗವಿಠಲ ಮುದ್ರಿಕೆಯಿಂದ ಪದಪದ್ಯ ರಚನೆ ಮಾಡಲು ಪ್ರಾರಂಭಿಸಿದರು.
ಶ್ರೀಪಾದರಾಯರು ಕನ್ನಡ ಸಾಹಿತ್ಯಕ್ಕೆ, ಭಗವದ್ಭಕ್ತರಿಗೆ, ದಾಸಕೂಟಸ್ತರಿಗೆ ಮಾಡಿರುವ ಉಪಕಾರ ಬಹುಸ್ಮರಣೀಯವಾದುದು. ಸಂಸ್ಕೃತ ಮಂತ್ರಮಾತುಗಳಲ್ಲಿಯ ಮಂಗಳಾತ್ಮಕ ಪಾವಿತ್ಯçವನ್ನು ಕನ್ನಡಕ್ಕೆ ತಂದುಕೊಟ್ಟ ಕೀರ್ತಿಗೆ ಶ್ರೀಪಾದರಾಜರು ಭಾಜನರಾದರು. ದಾಸಸಾಹಿತ್ಯವೆಂಬ ಹೊಸ ಕಲ್ಪನೆಯೊಂದು ಅವರ ಬ್ರಹ್ಮಚೈತನ್ಯದಿಂದ ಪಲ್ಲವಿಸಿ ಕನ್ನಡ ಭಾಷೆ ಹಾಗೂ ಸಾಹಿತ್ಯಗಳಿಗೆ ಹೊಸ ಆಯಾಮವನ್ನು ಮೂಡಿಸಿತು.
ತಮ್ಮ ಕಾಲದಲ್ಲಿ ಸಂಸ್ಕೃತ ವಿದ್ಯೆಯು ಉನ್ನತ ಮಟ್ಟದಲ್ಲಿದ್ದರೂ, ಅದು ಭಕ್ತಿ ಪ್ರಚೋದನೆಗೆ ಹೆಚ್ಚು ತೀವ್ರವಾಗಿ ಪ್ರಯೋಜನವಾಗುತ್ತಿಲ್ಲವೆಂಬುದನ್ನು ಮನಗಂಡ ಶ್ರೀಪಾದರಾಜರು ದೇಶಕಾಲೋಚಿತವಾಗಿ, ವಿಜಯನಗರ ಸಾಮ್ರಾಜ್ಯದಲ್ಲಿ ಜನ ಸಾಮಾನ್ಯರಲ್ಲೂ ಹಿಂದೂ ಸಂಸ್ಕೃತಿ, ಸಂಪ್ರದಾಯ ಪರಂಪರೆಗಳ ಬಗ್ಗೆ ಸುಲಭವಾಗಿ ತಿಳಿಸಿ ಸಂಘಟನೆಯನ್ನು ಪ್ರಚೋದಿಸಲು ದಾಸಪಂಥವನ್ನು ಉದ್ಘಾಟಿಸಿದರು. ಸಕಲ ತತ್ವ ವಿಷಯಗಳನ್ನೂ, ಸಂಗೀತ ಬದ್ಧವಾಗಿ ಕನ್ನಡದಂತಹ ಲಲಿತಭಾಷೆಯಲ್ಲಿ ಜನರಿಗೆ ಕೊಟ್ಟು ಶ್ರೀಪಾದರಾಜರು ಈ ಮಾರ್ಗದಲ್ಲಿ ತಾವೇ ಮೊದಲು ಕನ್ನಡದಲ್ಲಿ ದೇವರ ನಾಮಗಳನ್ನು ಉಗಾಭೋಗಗಳನ್ನು, ಸುಳಾದಿಗಳನ್ನು ರಚನೆಮಾಡಿ ಗಂಭೀರವಾದ ಗಂಧರ್ವ ಕಂಠದಿಂದ ದೇವರೆದುರಿಗೆ ಗಾನಮಾಡಿ ತೋರಿಸಿದರು.
ಶ್ರೀಪಾದರಾಜರು ರಂಗವಿಠಲ ಎಂಬ ಅಂಕಿತ ದಿಂದ ತಮ್ಮ ಪದಪದ್ಯ ಸುಳಾದಿಗಳನ್ನು ರಚಿಸಿದರು. ಹರಿಸರ್ವೋತ್ತಮತ್ವ, ಜಗತ್ಸತ್ಯತ್ವ, ತಾರತಮ್ಯ, ಪಂಚಭೇದ ಮುಂತಾದ ಮೂಲಭೂತ ತತ್ವಗಳನ್ನು ಕನ್ನಡದಲ್ಲಿ ಸಕಲಸಜ್ಜನರಿಗೂ ಮನದಟ್ಟಾಗುವಂತೆ ಮೃದುಶೈಲಿಯಲ್ಲಿ ಅಭಿವ್ಯಕ್ತಿಸಿದರು.
ತಪೋಮಹಿಮರಾದ ಶ್ರೀಪಾದರಾಜರು ಮುಳುಬಾಗಿಲಿಗೆ ಬಂದು ನೆಲೆಸಿ, ವಿಶ್ವವಿದ್ಯಾನಿಲಯವನ್ನು, ಧಾರ್ಮಿಕ ಪ್ರಚಾರ ಮಂಡಳಿಯನ್ನು ಸಂಘಟಿಸಿ, ದಶಕಗಳ ಕಾಲ ಸಹಸ್ರ ಸಹಸ್ರ ವಿದ್ಯಾರ್ಥಿಗಳನ್ನು ವಿದ್ವಾಂಸರನ್ನಾಗಿಮಾಡಿದರು. ಶ್ರೀ ವ್ಯಾಸರಾಜರಂತಹ ವಿದ್ವದ್ವಿಭೂತಿಗಳನ್ನು ನಿರ್ಮಿಸಿ ಶಕಪುರುಷರೆನಿಸಿಕೊಂಡರು.
ಶ್ರೀಪಾದರಾಜರ ಶಿಷ್ಯವಾತ್ಸಲ್ಯ
 ವೇದ, ಶೃತಿ, ಸ್ಮೃತಿ, ಶಾಸ್ತ್ರ, ಪುರಾಣ, ವ್ಯಾಕರಣ, ಛಂದಸ್ಸು, ತರ್ಕ, ಮೀಮಾಂಸೆ, ಷಡ್ದರ್ಶನಗಳಾಗಲೀ, ಸಾಹಿತ್ಯ, ಸಂಗೀತ ಕಲೆ, ಎಲ್ಲವೂ ಕರಗತವಾಗಿದ್ದ ಭವ್ಯ ವಿಶ್ವಕೋಶದಂತಿದ್ದ ಶ್ರೀವ್ಯಾಸರಾಯರ ಗುರುಗಳಾಗಿದ್ದವರು.
ಒಂದು ದಿನ ವ್ಯಾಸರಾಜರು ಶ್ರೀಪಾದರಾಜರನ್ನು ಬಿಟ್ಟು ತಾವು ಹಿಂತಿರುಗಬೇಕಾದ ಸಮಯ ಬಂದಾಗ ಹೃದಯ ತುಂಬಿ ಬಂದಂತಾಗಿ ಗುರುಗಳಿಗೆ ನಮಸ್ಕರಿಸಿ ಹೊರಡಲು ಅನುಜ್ಞೆ ಕೇಳಿದರು. ಅಖಂಡ ಬ್ರಹ್ಮಚರ್ಯದ ಪ್ರಖರ ತೇಜಸ್ಸಿನಿಂದ, ಕಠಿಣ ತಪಶ್ಚರ್ಯೆಯ ವರ್ಚಸ್ಸು ಪಾಂಡಿತ್ಯ ಪ್ರತಿಭೆಗಳ ಪ್ರಬುದ್ಧ ಸಂಗಮದ ದಿವ್ಯ ಮಂಗಳ ಮೂರ್ತಿಯಾಗಿದ್ದ ಶ್ರೀ ವ್ಯಾಸರಾಜರನ್ನು ಶ್ರೀಪಾದರಾಜರು ಹೃತ್ಪೂರ್ವಕ ಆಶೀರ್ವದಿಸಿದರು. ಇಡೀ ಜಗತ್ತಿನಲ್ಲಿ ವಿಶೇಷ ಪೂಜ್ಯತಮವಾದ ವಿದ್ಯಾವೈಭವವು ಶಾರದಾದೇವಿಯಲ್ಲಿಯೂ, ಪ್ರತಿಭಟರನ್ನು ತತ್ತರಗೊಳಿಸಿ ಪರಾಜಯ ಭೀತಿಯ ತರಂಗಗಳೆನ್ನಿಬ್ಬಿಸುವ ಪ್ರತಿಭಾ ಸಂಪತ್ತು ಭಾರ್ಗವನಲ್ಲಿಯೂ, ಅಪ್ರತಿಹತವಾದ ಕುಶಲಬುದ್ಧಿಯ ಬೃಹಸ್ಪತ್ಯಾಚಾರ್ಯರಲ್ಲಿಯೂ, ಅತ್ಯಾಶ್ಚರ್ಯಕರ ತೇಜೋವಿರಾಜಮಾನ ಪ್ರಭಾವವು ಸೂರ್ಯನಲ್ಲಿಯೂ, ಸಮಸ್ತ ಜನಗಳ ಚಿತ್ತಭಿತ್ತಿಯಲ್ಲಿ ಆನಂದದ ಅಲೆಗಳನ್ನೆಬ್ಬಿಸುವ ನೈಪುಣ್ಯವು ಸುಧಾಕರನಲ್ಲಿಯೂ, ವಿಶ್ವವನ್ನೇ ಪರಿಶುದ್ಧಗೊಳಿಸುವ ಶುಚಿತ್ವವು ಯಜ್ಞಪುರುಷನಲ್ಲಿಯೂ, ಅಚಲವಾದ ಸಿಂಹಧೈರ್ಯವು ಪರ್ವತರಾಜನಲ್ಲಿಯೂ, ಅನನ್ಯ ಸಾಮಾನ್ಯ ದಾತೃತ್ವವು ಕಲ್ಪವೃಕ್ಷದಲ್ಲಿಯೂ, ಅಚಿಂತ್ಯ ಅದ್ಬುತ ಮಹಾತ್ಮ್ಯ ಶಕ್ತಿಯು ಭಗವಂತನಾದ ವಾಸುದೇವನಲ್ಲಿಯೂ ನೆಲೆಗೊಂಡಿರುವುದು ಸುಪ್ರಸಿದ್ಧವಾದ ಸಂಗತಿಯಾಗಿದೆ. ಆದರೆ ಈ ಸಮಸ್ತ ಸದ್ಗುಣ ಸಂಪತ್ತು ಅಖಂಡಾಭ್ಯುದಯ ವಿಕ್ರಮ ವಿಖ್ಯಾತನಾದ ನಿನ್ನಲ್ಲಿ ಸಮನ್ವಯಗೊಂಡು ಅಪೂರ್ವ ರೀತಿಯಲ್ಲಿ ಶೋಭಿಸುತ್ತಿದೆ. ಅತ್ಯಂತ ಮಹತ್ಕಾರ್ಯ ಸಾಧನೆಗಾಗಿಯೇ ಲೋಕೋದ್ಧಾರಾರ್ಥವಾಗಿಯೇ ಅವತರಿಸಿರುವ ನಿನ್ನಿಂದ ಜಗತ್ಕಲ್ಯಾಣ ಸಾಧನೆಯಾಗಲಿ’ ಎಂದು ಹೇಳಿ ಬೀಳ್ಕೊಟ್ಟರು.

 ಮಹಾಮಹಿಮರಾದ ಶ್ರೀ ಶ್ರೀಪಾದರಾಜರು, ಮುಳಬಾಗಿಲಿನ ಸಮೀಪದಲ್ಲಿರುವ ನರಸಿಂಹತೀರ್ಥಕ್ಷೇತ್ರದಲ್ಲಿ ವೃಂದಾವನವನ್ನು ಸಶರೀರದಿಂದ ಪ್ರವೇಶಮಾಡಿ, ಇಂದಿಗೂ ಸಮಸ್ತ ಆಸ್ತಿಕ ಜನರುಗಳಿಗೆ ಅವರವರ ಮನೋಭಿಲಾಷೆಗಳನ್ನು ಪೂರೈಸುತ್ತಾ ವಿರಾಜಮಾನರಾಗಿರುವರು.
ರಾಯಚೂರು, ಮಾನವಿ, ಚೀಕಲಪರ್ವಿ, ಈ ಭಾಗವೆಲ್ಲ ಹರಿದಾಸರ ತೊಟ್ಟಿಲು ಎಂದು ಪ್ರಸಿದ್ಧವಾಗಿದ್ದರೆ, ಶ್ರೀಪಾದರಾಜರ ಕಾರ್ಯ ಕ್ಷೇತ್ರವಾದ ಮುಳಬಾಗಿಲು ಕ್ಷೇತ್ರವೆಂದರೆ ಹರಿದಾಸರ ತವರೂರಾಗಿದೆ. ಒಂದೊಂದು ಘಟ್ಟ ದಾಟಿ ಬಂದ ಹರಿದಾಸಸಾಹಿತ್ಯ ಇಂದಿಗೂ ಸಹಸ್ರ ಸಹಸ್ರ ಕೀರ್ತನೆಗಳಿಂದ ಮನೆಮನಗಳನ್ನು ಬೆಳಗುತ್ತಿರುವ ಹರಿದಾಸಸಾಹಿತ್ಯದ ಜೀವಸೆಲೆಯಾಗಿ, ಹರಿದಾಸಸಾಹಿತ್ಯದ ಭದ್ರವಾದ ಮೂಲನೆಲೆ ಹಾಕಿ ಕೊಟ್ಟ ಶ್ರೀಪಾದರಾಜರು ಹರಿದಾಸಸಾಹಿತ್ಯದ ತಾಯಿಯಂತೆ. ಜನಸಾಮಾನ್ಯರ ಮೇಲೆ ಮಮತೆಯನ್ನು ಹರಿಸಿದ ಹರಿದಾಸಸಾಹಿತ್ಯದ ಗಂಗೆಯಂತೆ, ಭಗವಂತನನ್ನು ಭಕ್ತಿ ಮಾರ್ಗದ ಮೂಲಕ ಪ್ರಾರ್ಥಿಸಿ, ಅನನ್ಯವಾಗಿ ಗಾನನರ್ತನಗಳಿಂದ ಪೂಜಿಸಿ ಒಲಿಸಿಕೊಳ್ಳುವ ಪರಿಯನ್ನು ಮನೆಮನದಲ್ಲಿ ಬಿತ್ತಿದ ಶ್ರೀಪಾದರಾಜರು ದಾಸಸಾಹಿತ್ಯದ ಪ್ರವರ್ತಕರು.  ಅವರ ಆರಾಧನೆ ಪ್ರಯುಕ್ತ ಈ ಭಕ್ತಿಪೂರ್ವಕ ಲೇಖನ ಕುಸುಮ. 

ಲೇಖಕರು: ಕನ್ನಡ ಅಧ್ಯಾಪಕಿ, ಪೂರ್ಣಪ್ರಮತಿ ಶಾಲೆ, ಬೆಂಗಳೂರು

Related Articles

ಪ್ರತಿಕ್ರಿಯೆ ನೀಡಿ

Latest Articles