ಚಂದ್ರಗ್ರಹಣ ಇಂದು, ಆಚರಿಸಬೇಕಾದ ನಿಯಮಗಳು

ಚಂದ್ರಗ್ರಹಣದ ಸೂತಕ ಅವಧಿಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಗ್ರಹಣದ ಸೂತಕ ಕಾಲವು 09 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ ಮತ್ತು ಗ್ರಹಣ ಮುಗಿದ ನಂತರ ಕೊನೆಗೊಳ್ಳುತ್ತದೆ.

– ಸೂತಕ ಕಾಲದ ಆರಂಭದ ನಂತರ, ಪೂಜೆ ಇತ್ಯಾದಿ ಶುಭ ಮತ್ತು ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ. – ಚಂದ್ರಗ್ರಹಣದ ಸಮಯದಲ್ಲಿ ಪ್ರಯಾಣ ಮಾಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ.ಆದ್ದರಿಂದ, ಗ್ರಹಣ ಅವಧಿಯಲ್ಲಿ ಪ್ರಯಾಣವನ್ನು ತಪ್ಪಿಸಬೇಕು.

– ಚಂದ್ರಗ್ರಹಣದ ಸಮಯದಲ್ಲಿ ಮಲಗಬಾರದು ಅಥವಾ ಚೂಪಾದ ವಸ್ತುಗಳನ್ನು ಬಳಸಬಾರದು.‌‌ ‌ ‌

​ಗ್ರಹಣ ಮಂತ್ರ: ಈ ಕೆಳಗಿನ ಶ್ಲೋಕವನ್ನು ಗ್ರಹಣಕಾಲದಲ್ಲಿ ಪಠಿಸುವುದರಿಂದ ಶುಭವಾಗುವುದು.

ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ | ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ | ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || ಯೋ ಸೌ ಶೂಲಧರೋ ದೇವಃ ‌ಪಿನಾಕೀ ವೃಷವಾಹನಃ | ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||

ಗ್ರಹಣಕಾಲದಲ್ಲಿ ಪಾಲಿಸಬೇಕಾದ ಆಚರಣೆಗಳು :

– ಗ್ರಹಣ ಸ್ಪರ್ಶ ಸ್ನಾನ (ಹಿಡಿಯುವ ಸಮಯ) ಮತ್ತು ಮೋಕ್ಷ ಸ್ನಾನ (ಮುಗಿದ ನಂತರ) ಸ್ನಾನ ಮಾಡಲೇಬೇಕು.

– ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ. ‌ ಹಾಲು ಮೊಸರು ತುಪ್ಪಗೆ ತುಳಸಿ ದರ್ಬೆ ಹಾಕಿ ಬಳಸಿ. ಇಂದು ನೀರು ಸಹ ಮುಖ್ಯ ಚೆಲ್ಲುವ ಬದಲು ತುಳಸಿ ಹಾಕಿಡಿ ಬಳಸಿ. ಮಿಕ್ಕ ಆಹಾರ ಪದಾರ್ಥಕ್ಕೂ ತುಳಸಿ ಬಳಸಿ – ಗ್ರಹಣ ಮೋಕ್ಷ ಕಾಲದ ನಂತರವೇ ಸ್ನಾನ, ಪೂಜೆ ಸಲ್ಲಿಸಿ, ಅಡುಗೆ ಮಾಡಿ, ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟು ತಿನ್ನಬಾರದು. ‌ ‌

– ಗ್ರಹಣ ಮೋಕ್ಷ ಕಾಲದ ನಂತರ ಅಗತ್ಯವಾಗಿ ಸ್ನಾನ ಮಾಡಲೇಬೇಕು. ಪವಿತ್ರ ಗಂಗಾಜಲ ಅಥವಾ ಶುದ್ದ ಜಲವನ್ನು ಮನೆಯ ಎಲ್ಲಾ ಭಾಗಗಳಲ್ಲಿಯೂ ಪ್ರೋಕ್ಷಿಸಬಹುದು.

ಗ್ರಹಣ ಮೋಕ್ಷ ಕಾಲ : ಹಗಲು 06-19 pm ‌ ‌ ಗ್ರಹಣವು ಸೂರ್ಯಾಸ್ತದ ನಂತರ ಮುಗಿಯುವುದರಿಂದ ಗ್ರಹಣ ಮೋಕ್ಷ ಮಾತ್ರ ಕಾಣಿಸುತ್ತದೆ. ‌ ಈ ರಾಹುಗ್ರಸ್ತ ಗ್ರಸ್ತೋದಯ ಚಂದ್ರ ಗ್ರಹಣವು ಮೇಷ ರಾಶಿಯಲ್ಲಿ ಭರಣಿ ನಕ್ಷತ್ರದ ಮೂರನೆಯ ಚರಣದಲ್ಲಿ ನಡೆಯುತ್ತದೆ. ‌ ‌ ಗ್ರಹಣ ಗೋಚರಿಸುವ ಸಮಯ : ಗ್ರಹಣ ಪ್ರಾರಂಭ : ಸಂಜೆ 05-11 pm ‌ ‌ಗ್ರಹಣ ಮಧ್ಯ ಕಾಲ : ಸಂಜೆ 05-49 pm ‌ ‌ ಗ್ರಹಣ ಅಂತ್ಯ ಕಾಲ : ಸಂಜೆ 06-19 pm ‌

‌ ‌ ಸೂತಕ ಅವಧಿಯು ಚಂದ್ರ ಗ್ರಹಣಕ್ಕೆ 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಗ್ರಹಣ ಮುಗಿದ ನಂತರ ಮಾತ್ರ ಕೊನೆಗೊಳ್ಳುತ್ತದೆ.

ಸೂತಕ ಸಮಯ ಪ್ರಾರಂಭ : 09:09 am ‌ ‌ಸೂತಕ ಸಮಯ ಅಂತ್ಯ : 06:19 pm ‌ ‌ ‌ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂತಕ ಅವಧಿಯಲ್ಲಿ ಯಾವುದೇ ಮಂಗಳಕರ ಅಥವಾ ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ. ವಿಶೇಷವಾಗಿ ಗರ್ಭಿಣಿಯರು ಈ ಸಮಯದಲ್ಲಿ ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಇದು ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಮೇಲೂ ಪರಿಣಾಮ ಬೀರುತ್ತದೆ. ಚಂದ್ರ ಗ್ರಹಣದ ಸಮಯದಲ್ಲಿ, ಚಂದ್ರನು ಮೇಷ ರಾಶಿಯಲ್ಲಿರುತ್ತಾನೆ. ಈ ಕಾರಣದಿಂದಾಗಿ, ಮೇಷ ರಾಶಿಯ ಜನರ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು. ಮೇಷ ರಾಶಿಯವರಿಗೆ ಚಂದ್ರ ಗ್ರಹಣದ ಸಮಯವು ಅನುಕೂಲಕರವಾಗಿರುವುದಿಲ್ಲ. ಚಂದ್ರ ಗ್ರಹಣವು ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಶುಭ, ಮಿಶ್ರ ಮತ್ತು ಅಶುಭ ಪರಿಣಾಮ ಬೀರಲಿದೆ. ‌

ದ್ವಾದಶ ರಾಶಿಗಳಿಗೆ ರಾಹುಗ್ರಸ್ತ ಚಂದ್ರ ಗ್ರಹಣ ಫಲಗಳು ‌ ‌ ಶುಭ ಫಲ : ಮಿಥುನ, ಕಟಕ, ವೃಶ್ಚಿಕ, ಮಕರ ‌ಮಿಶ್ರ ಫಲ: ಸಿಂಹ, ತುಲಾ, ಧನಸ್ಸು, ಮೀನ ‌ ‌ ‌ಅಶುಭ ಫಲ: ಮೇಷ, ವೃಷಭ, ಕನ್ಯಾ, ಕುಂಭ

‌ ೧. ಗ್ರಹಣ ಪ್ರಾರಂಭವಾಗುತ್ತಿದ್ದಂತೆ ಮತ್ತು ಗ್ರಹಣ ಬಿಟ್ಟ ನಂತರ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.‌ ‌ ೨. ಗ್ರಹಣ ಸ್ಪರ್ಶ ಸಮಯದಲ್ಲಿ ಮಾಡುವ ಸ್ನಾನವು ಲಕ್ಷ ಸ್ನಾನಗಳ ಫಲವನ್ನು ಮೋಕ್ಷ ನಂತರ ಮಾಡುವ ಸ್ನಾನವು ಅನಂತ ಸ್ನಾನಗಳ ಫಲವನ್ನು ಕೊಡುತ್ತದೆ. ಗ್ರಹಣ ಸಮಯದಲ್ಲಿ ಮಾಡುವ ಜಪ-ತಪಾದಿ, ಹೋಮವು ಕೋಟಿ ಹೋಮಗಳು ಫಲವನ್ನು ಕೊಡುತ್ತದೆ. ‌‌

ಪರಿಹಾರ: ಕಪ್ಪು ಅಥವಾ ಧೂಮ್ರ (ಬೂದು) ವರ್ಣ (ಮಿಶ್ರ ಬಣ್ಣ) ಮತ್ತು ಉದ್ದಿನಕಾಳು ಹಾಗೂ ಶ್ವೇತ ವಸ್ತ್ರ ಮತ್ತು ಅಕ್ಕಿ ಇವುಗಳನ್ನು ದಕ್ಷಿಣೆ ಸಮೇತವಾಗಿ ದೇವಾಲಯದಲ್ಲಿ / ಬ್ರಾಹ್ಮಣರಿಗೆ / ಸತ್ಪಾತ್ರರಿಗೆ ದಾನ ಮಾಡಿ. ಗ್ರಹಣ ಸಮಯದಲ್ಲಿ ದುರ್ಗಾದೇವಿ, ಈಶ್ವರ ಸುಬ್ರಹ್ಮಣ್ಯ, ನಾಗ ದೇವತೆ, ಕಾಳಿ ಮಂತ್ರ ಜಪ ಅಥವಾ ಸ್ತೋತ್ರ ಪಾರಾಯಣ, ದುರ್ಗಾ ಕವಚ, ಸಪ್ತಶತೀ ಮತ್ತು ಸಹಸ್ರನಾಮ ಸ್ತೋತ್ರ ಪಠಿಸಿ.

Related Articles

ಪ್ರತಿಕ್ರಿಯೆ ನೀಡಿ

Latest Articles