ಶಿವನ ಪೂಜೆಗೆ ದತ್ತೂರ


ಉಮ್ಮತ್ತಿ ಹೂ ಶಿವನಿಗೆ ಪ್ರಿಯವಾದುದೆಂದೂ ಶಿವನ ಶಿರಸ್ಸಿನಲ್ಲಿ ಈ ಹೂ ಕಂಗೊಳಿಸುವುದರಿಂದ ಇದಕ್ಕೆ ಶಿವಶೇಖರ, ಶಿವಪ್ರಿಯ ಎಂಬ ಹೆಸರುಗಳೂ ಇವೆ. ಶಿವ ಪೂಜಾಕಲ್ಪದಲ್ಲಿ ಹೇಳಿದೆ. ದತ್ತೂರ, ಜಾಜಿ, ಕಲ್ಹಾರ, ಕನ್ನೈದಿಲೆ ಹೂಗಳಿಂದ ಶರದೃತುವಿನಲ್ಲಿ ಗೌರೀಪತಿಯಾದ ಶಿವನನ್ನು ಪುಜಿಸುವಾತ ಸತ್ರಯಾಗದ ಫಲವನ್ನು ಹೊಂದುತ್ತಾನೆಂದು ಶೈವಾಗಮ ತಿಳಿಸುತ್ತದೆ. ಕೆಂಪು ತೊಟ್ಟು ಇರುವ ದತ್ತೂರ ಪುಷ್ಪ ಶಿವನ ಪೂಜೆಗೆ ಶ್ರೇಷ್ಠ.
ಶೀತಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಈ ಸಸ್ಯಗಳಲ್ಲಿ ಹೂಗಳು ಕೊಳವೆಯಾಕಾರದ ಉದ್ದ ತೊಟ್ಟಿನಿಂದ ತೊಡಗಿ ತುತ್ತೂರಿಯ ಕೊಡೆಯಂತೆ ಹೊರಕ್ಕೆ ತೆರೆದುಕೊಂಡಿರುತ್ತವೆ. ಒಂದೇ ದಳ ಹೊಂದಿರುವ ಇದರ ಹೂಗಳು ಕೆಂಪು, ಬಿಳಿ, ಹಳದಿ ಬಣ್ಣಗಳಲ್ಲಿರುತ್ತವೆ. ಈ ಗಿಡದ ಕಾಯಿಗಳ ಮೇಲೆ ಮುಳ್ಳುಗಳಿರುತ್ತವೆ.
ವಾಮನ ಪುರಾಣದ ಪ್ರಕಾರ ದೇವತೆಗಳು ಹಾಗೂ ರಾಕ್ಷಸರ ನಡುವೆ ನಡೆದ ಸಮುದ್ರ ಮಥನದಲ್ಲಿ ವಿಷವು ದೇವತೆಗಳ ಬಳಿ ಬರುತ್ತದೆ. ಗಮನಿಸಿದ ಶಿವ ಅದನ್ನು ಕುಡಿಯುತ್ತಾನೆ. ಆಗ ಶಿವನ ಎದೆಯಲ್ಲಿ ದತ್ತೂರ ಕಾಣಿಸಿಕೊಳ್ಳುತ್ತದೆ. ಅಂದಿನಿಂದ ಶಿವನಿಗೆ ದತ್ತೂರವು ಪ್ರಿಯ. ಹಾಗಾಗಿ ಈ ಸಸ್ಯ ವಿಷಕಾರಿಯಾಗಿದೆ.

ಶಿವನಿಗೆ ವಿಷದಿಂದ ಕೂಡಿದ ದತ್ತೂರವನ್ನು ಅರ್ಪಿಸುವಂತೆ ನಮ್ಮೊಳಗೆ ಇರುವ ಅಹಂಕಾರ, ದ್ವೇಷ ಮನೋಭಾವವನ್ನು ಕಳೆದುಕೊಳ್ಳಬೇಕು ಎಂಬುದು ಇದರ ತಾತ್ಪರ್ಯ.

Related Articles

2 COMMENTS

ಪ್ರತಿಕ್ರಿಯೆ ನೀಡಿ

Latest Articles