ಬಣ್ಣಗಳಿಂದಲೇ ಸೆಳೆವ ಬುಗುಡಿ ಹೂ

ಕನ್ನಡದಲ್ಲಿ ಬುಗುಡಿ ಹೂವು ಎಂದು ಕರೆಸಿಕೊಳ್ಳುವ ಈ ಹೂವು ಸಿಲ್ಕೀಯಾಗಿದ್ದು, ಡೇರೆ ಹೂವಿನಂತಿದೆ. ಹಳದಿ, ಕೇಸರಿ,  ಗುಲಾಬಿ ಬಣ್ಣದಉದ್ಯಾನದಲ್ಲಿ ಸುಲಭವಾಗಿ ಬೆಳೆಯಬಹುದು. ಈ ಗಿಡಗಳಿಗೆ ಹೆಚ್ಚು ಆರೈಕೆ ಬೇಕಾಗಿಲ್ಲ. ಚಳಿಗಾಲದಲ್ಲಿ ಹೆಚ್ಚಾಗಿ ಹೂ ಬಿಡುತ್ತದೆ. ಬೀಜಗಳಿಂದ ಸಸ್ಯಾಭಿವೃದ್ಧಿಯಾಗುತ್ತದೆ.
ಸಸ್ಯದ ಮೂಲ ಮೆಕ್ಸಿಕೋ. ಗ್ರೀಕ್ ಪದ ಕಾಸ್ಮೋಸ್ ನಿಂದ ಬಂದಿದೆ. ಕಾಸ್ಮೋಸ್ ಅಂದರೆ ಬ್ಯೂಟಿಫುಲ್ ಎಂದರ್ಥ. ನೋಡಲು ತುಂಬಾ ಸುಂದರವಾಗಿರುವ ಈ ಹೂಗಳು 4-7 ದಿನಗಳು ಬಣ್ಣವನ್ನೂ ಕಳೆದುಕೊಳ್ಳದೆ ನಳನಳಿಸುತ್ತಿರುತ್ತದೆ.

ಸಸ್ಯದ ಕಾಂಡವು ಮೃದುವಾಗಿರುತ್ತದೆ. ತುಂಬಾ ಜಾಗರೂಕವಾಗಿ ಗಿಡವನ್ನು ಸಂರಕ್ಷಿಸಬೇಕು. ಬೀಜವು ಕಡಿಮೆ ಅವಧಿಯಲ್ಲಿ ಮೊಳಕೆಯೊಡೆದು ಬೆಳೆದು ನಿಲ್ಲುತ್ತದೆ. ಬೀಜ ಮೊಳಕೆಯೊಡೆದು ಸಸಿಯಾಗಿ ಒಂದು ಅಡಿ ಎತ್ತರ ಬೆಳೆದಾಗ ಅದರ ಚಿಗುರನ್ನು ಚಿವುಟಿ ಹಾಕಬೇಕು. ಆಗ ಸಸಿ ಕವಲೊಡೆದು ಹೆಚ್ಚು ಹೂಗಳನ್ನು ಬಿಡುತ್ತದೆ. ಕಾಸ್ಮೋಸ್ ಸಸ್ಯಗಳು ಸಾಮಾನ್ಯವಾಗಿ 1-5 ಅಡಿ ಎತ್ತರ ಬೆಳೆಯುತ್ತದೆ. ಇವುಗಳನ್ನು ಉದ್ಯಾನಗಳಲ್ಲಿ ಅಲಂಕಾರಿಕ ಹೂವಿನ ಸಸ್ಯವಾಗಿ ಬೆಳೆಯುತ್ತಾರೆ. ಹೂ ಬಿಟ್ಟಾಗ ಗಿಡಪೂರ್ತಿ ಹೂಗಳಿಂದ ಕಂಗೊಳಿಸುತ್ತಿರುತ್ತದೆ. ಎಲೆಗಳೇ ಕಾಣಿಸುವುದಿಲ್ಲ. ಆಕರ್ಷಕ ಬಣ್ಣ ಹೊಂದಿದ ಈ ಹೂಗಳು ನೋಡುಗರನ್ನು ಮಾತ್ರವಲ್ಲದೆ ಬಣ್ಣ ಬಣ್ಣ ಚಿಟ್ಟೆಗಳನ್ನು ತನ್ನತ್ತ ಸೆಳೆಯುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles